
ಕಾರ್ಕಳ : ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಪಾಸ್ಸಾಗುತ್ತಿದ್ದ ವ್ಯಕ್ತಿಯೋರ್ವರಿಗೆ ಮುಸ್ಲಿಂ ಕುಟುಂಬವೊಂದು ಹಲ್ಲೆ ನಡೆಸಿದ ಕರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂಪದಕಟ್ಟೆ ಜಿಡಿ ಬೆಟ್ಟುಮನೆ ವಿಶ್ವನಾಥ್ (38) ಎಂಬವರು ದುರ್ಗ ಗ್ರಾಮ ತೆಳ್ಳಾರಿನ ಕುಕ್ಕಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಸ್ಕೂಟರ್‌ನಲ್ಲಿ ಮರಳುತ್ತಿದ್ದಾಗ ಕುಕ್ಕಾಜೆ ನಿವಾಸಿ ರಿಯಾಜ್ ಎಂಬಾತ ಸ್ಕೂಟರ್ ತಡೆದು ನೀನು ಇಲ್ಲಿ ಯಾಕೆ ಬರುವುದು ? ನಿನಗೆ ಬೇರೆ ದೇವಸ್ಥಾನ ಇಲ್ಲವೇ ಎಂದು ಬೈದಿರುತ್ತಾನೆ. ಬಳಿಕ ಹಲ್ಲೆ ನಡೆಸಿದ್ದು, ಅದೇ ಸಮಯ ಅಲ್ಲಿಗಾಗಮಿಸಿದ ರಿಯಾಜ್ ನ ಮಕ್ಕಳಾದ ರಿಯಾನ್, ರಿಪ್ಪಾನ್ ಹಾಗೂ ರಿಮಾನ್ ಅವರೂ ವಿಶ್ವನಾಥರನ್ನು ತುಳಿದು ಹಲ್ಲೆ ನಡೆಸಿರುತ್ತಾರೆ. ಮರದ ದೊಣ್ಣೆಯಿಂದ ಎಡ ಭುಜಕ್ಕೆ ಬೆನ್ನಿಗೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದಿರುತ್ತಾರೆ. ಜಾಹೀರ್ ಮತ್ತು ನಜೀರ್ (ಎಫ್‌ಐಆರ್ ಪ್ರತಿಯಲ್ಲಿರುವಂತೆ) ಗಲಾಟೆ ಬಿಡಿಸಲು ಮುಂದಾಗಿದ್ದು ಈ ವೇಳೆ ಜಾಹೀರ್ ಅವರಿಗೂ ರಿಯಾಜ್ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳು ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ವಿಷಯ ತಿಳಿದು ಹಿಂದೂ ಸಂಘಟನೆ ಮುಖಂಡರು ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿದ್ದಾರೆ. ಗಾಯಾಳಿಗೆ ಸಾಂತ್ವನ ಹೇಳಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.ಹಿಂದೂ ಸಂಘಟನೆಯ ಪ್ರಮುಖರಾದ ವಿಶ್ವ ಹಿಂದೂ ಪರಿಷತ್‌ನ ಸುನಿಲ್ ಕೆ.ಆರ್., ಮನೋಜ್ ಕರಿಯಕಲ್ಲು , ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಹಿಂದೂ ಜಾಗರಣ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ಮಹೇಶ್ ಬೈಲೂರು, ಸುಜಿತ್ ಸಫಲಿಗ, ರಾಘವೇಂದ್ರ ಕುಲಾಲ್, ಹರೀಶ್ ಕಿಚ್ಚ, ರಿತೇಶ್ ಮುಡಾರು ಮೊದಲಾದವರು ಆಸ್ಪತ್ರೆಗೆ ಧಾವಿಸಿದ್ದರು.