30.8 C
Udupi
Sunday, February 15, 2026
spot_img
spot_img
HomeBlogಮುರ್ಡೇಶ್ವರದಿಂದ ಗೋಕರ್ಣ ಕ್ಷೇತ್ರಕ್ಕೆ, ಹೆಬ್ರಿ ತಾಲೂಕು ವಿಪ್ರ ಬಾಂಧವರಿಂದ ಪಾದಯಾತ್ರೆ

ಮುರ್ಡೇಶ್ವರದಿಂದ ಗೋಕರ್ಣ ಕ್ಷೇತ್ರಕ್ಕೆ, ಹೆಬ್ರಿ ತಾಲೂಕು ವಿಪ್ರ ಬಾಂಧವರಿಂದ ಪಾದಯಾತ್ರೆ

spot_imgspot_img


ಹೆಬ್ರಿ :ಧರ್ಮ ಜಾಗೃತಿ,ಉತ್ತಮ ಆರೋಗ್ಯ, ಸರ್ವರಿಗೂ ಒಳಿತಾಗಲಿ ಎನ್ನುವ ಸದುದ್ದೇಶವನ್ನು ಇಟ್ಟುಕೊಂಡು ಲೋಕ ಕಲ್ಯಾಣಾರ್ಥವಾಗಿ ಕಳೆದ 6 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ನಡೆಸುತ್ತಿರುವ ಹೆಬ್ರಿ ತಾಲೂಕಿನ ವಿಪ್ರ ಬಾಂಧವರು 14 ನೆ ಪಾದಯಾತ್ರೆಯನ್ನು ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರ ಶ್ರೀ ಮುರುಡೇಶ್ವರ ದಿಂದ ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ 75 ಕಿ. ಮೀ. ಪಾದಯಾತ್ರೆ ನಡೆಸಿ ದೇವರ ದರ್ಶನ ಪಡೆದು ಪುನೀತರಾದರು.

ಪಾದಯಾತ್ರೆಯ ಹಾದಿಯುದ್ಧಕ್ಕೂ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ,ಶ್ರೀ ರಾಮ ತಾರಕ ಮಂತ್ರ ಪಠಣ, ಭಜನೆ, ಶಿವ ಸ್ತುತಿ ಸಹಿತ ದೇವರ ನಾಮ ಸ್ಮರಣೆ ಮಾಡಿದರು.ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿ ಹೆಬ್ರಿ ವತಿಯಿಂದ ನಡೆದ ಈ ಪಾದಯಾತ್ರೆಯ ನೇತೃತ್ವವನ್ನು ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಹಾಗೂ ಹೆಬ್ರಿ ಸುದರ್ಶನ್ ಜೋಯಿಸ್ ವಹಿಸಿದ್ದರು. ಪಾದಯಾತ್ರಿಗಳ ಸಹಕಾರದಿಂದ ನಡೆದ ಈ ಪಾದಯಾತ್ರೆಯಲ್ಲಿ ನಿತ್ಯಾನಂದ ಭಟ್ ಹೆಬ್ರಿ, ವೆಂಕಟರಮಣ ಕಲ್ಕೂರ್ ಉಪ್ಪಳ ಪ್ರಕಾಶ್ ಭಟ್ ಹೆಬ್ರಿ, ರಾಘವೇಂದ್ರ ಭಟ್ ದುಗ್ಗೋಡು ಉಪ್ಪಳ, ಸದಾಶಿವ ಬಾಯರಿ ಹೆಬ್ರಿ, ಪ್ರಶಾಂತ್ ಆಚಾರ್ಯ ದೊಡ್ಡಬಳ್ಳಾಪುರ, ನರಸಿಂಹ ಹೇರಳೆ ಹೆಬ್ರಿ,ವಿದ್ಯಾಲಕ್ಷ್ಮಿ ಆಚಾರ್ಯ ಗಿಲ್ಲಾಳಿ, ರಮ್ಯಾ ಭಟ್ ಬಲ್ಲಾಡಿ, ಶ್ರೀಮತಿ ಕಲ್ಕೂರ್ ಉಪ್ಪಳ, ಸುಮನಾ ಭಟ್ ಬಲ್ಲಾಡಿ, ಇಂಪನಾ ಭಟ್ ಬಲ್ಲಾಡಿ ಪಾಲ್ಗೊಂಡಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page