
ಮುನಿಯಾಲು: ಮಾರ್ಚ್ 21 ರಂದು ಹಿಂದೂ ಹೆಲ್ಪ್ ಲೈನ್ ಜನ ಸೇವಾ ಟ್ರಸ್ಟ್ (ರಿ).ಮುನಿಯಾಲು ಇದರ ವತಿಯಿಂದ ಮುನಿಯಾಲಿನ ವೀರ ಸಾವರ್ಕರ್ ಮೈದಾನದಲ್ಲಿ, ಧಾರ್ಮಿಕ ಮತ್ತು ಸಾಮಾಜಿಕ ,ಸಾಂಸ್ಕೃತಿಕ ಸಮನ್ವಯದೊಂದಿಗೆ “ತ್ರಯೋದಶ ಸಂಭ್ರಮ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನೂ ಉತ್ತೇಜಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಕಾರ್ಯಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿ ಹಾಗೂ ಆಶೀರ್ವಚನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿವೆ.
ಬೆಳಗ್ಗೆ 9:00ಗೆ ಸಾಮೂಹಿಕ ಶನಿಪೂಜೆ, 11:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ,ಸಂಜೀವಿನಿ ಆರೋಗ್ಯ ನಿಧಿ ವಿತರಣೆ ಮತ್ತು ದಿ| ಪ್ರೀತಮ್ ಶೆಟ್ಟಿ ಸ್ಮರಣಾರ್ಥ ವರಂಗ ಗ್ರಾಮ ಪಂಚಾಯತ್ಗೆ ಶವಶೀತಲೀಕರಣ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1:00 ಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು, ನೂತನ ಬಸ್ ತಂಗುದಾಣ ಲೋಕಾರ್ಪಣೆ ಹಾಗೂ ಸಂಜೆ 7:00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಕ್ರವರ್ತಿ ಸೂಲಿಬೆಲೆ ಇವರಿಂದ “ನಾನೇ ಭಾರತ”, ಗೀತಾ ಕಥನ ನಾಟಕ ನರ್ತನಗಳ ಮಹಾಸಂಗಮ ನಡೆಯಲಿದೆ.
ಸಮಾರಂಭದಲ್ಲಿ ಎಂ ದಿನೇಶ್ ಪೈ ಇವರಿಗೆ ಹಿಂದೂ ಹೆಲ್ಪ್ ಲೈನ್ ಜನ ಸೇವಾ ಟ್ರಸ್ಟ್ ರಿ. ಮುನಿಯಾಲು, ಕೊಡ ಮಾಡುವ “ಸೇವಾರತ್ನ ಪ್ರಶಸ್ತಿ” ಸನ್ಮಾನ ನಡೆಯಲಿದೆ.






















































