25.4 C
Udupi
Saturday, March 14, 2026
spot_img
spot_img
HomeBlogಮುದ್ರಾಡಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ಬಿಲ್ವಾರ್ಚನೆ.

ಮುದ್ರಾಡಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ಬಿಲ್ವಾರ್ಚನೆ.


ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಅನಂತ ಪದ್ಮನಾಭ ಪಾದಯಾತ್ರಾ ಸಮಿತಿ ಹೆಬ್ರಿ ವತಿಯಿಂದ ಲಕ್ಷ ಬಿಲ್ವಾರ್ಚನೆ ನಡೆಸಲಾಯಿತು. ಹೆಬ್ರಿ ಪಾದಯಾತ್ರಾ ಸಮಿತಿ ಸದಸ್ಯರು ಹಾಗೂ ವಿಪ್ರ ಬಾಂಧವರಿಂದ ಶಿವ ಸಹಸ್ರನಾಮ ಪಾರಾಯಣ, ಮಹಿಳೆಯರಿಂದ ಲಕ್ಷ್ಮೀ ಶೋಭಾನೆ, ಮಹಾಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಮುನಿಯಾಲು ಆಯುರ್ವೇದ ಕಾಲೇಜಿನ ಉಪಪ್ರಾಂಶುಪಾಲ ಹೆರ್ಗ ಪ್ರೊ.ಹರಿಪ್ರಸಾದ ಭಟ್ ಮಾತನಾಡಿ ರುದ್ರ ದೇವರು ಮನಸ್ಸಿನ ಅಭಿಮಾನಿ ದೇವತೆ ಎಲ್ಲಾ ಆಧಿವ್ಯಾಧಿಯನ್ನು ಪರಿಹರಿಸುವ, ಇಷ್ಟಾರ್ಥ ಸಿದ್ಧಿಯನ್ನು ಮಾಡುವ ದೇವರಿಗೆ ಬಿಲ್ವಪತ್ರೆ ಅರ್ಪಿಸುವುರಿಂದ ಸಂಸಾರ ಸಾಗರದಲ್ಲಿ ನಾವು ಮಾಡುವ ತ್ರಿಕರಣ ಪಾಪಗಳು ಪರಿಹಾರವಾಗುತ್ತದೆ ಅಲ್ಲದೆ ಒಂದೊಂದು ಬಿಲ್ವಪತ್ರೆಯಿಂದ ಅನಂತಫಲ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.ವಿದ್ವಾನ್ ಎಂ. ರಾಘವೇಂದ್ರ ಅಡಿಗ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಅಡಿಗ,ಅನ್ನಸಂತರ್ಪಣೆ ಸೇವಾಕರ್ತರಾದ ರಾಮಚಂದ್ರ ಉಡುಪ, ಮಂಜುನಾಥ ಅಡಿಗ,ಪಾದಯಾತ್ರಾ ಸಮಿತಿ ಪ್ರಮುಖರಾದ ವಿಷ್ಣುಮೂರ್ತಿ ಆಚಾರ್ಯ,ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತೀಶ್ ಸೇರಿಗಾರ ಹಾಗೂ ಸರ್ವಸದಸ್ಯರು, ಪಾದಯಾತ್ರಾ ಸಮಿತಿಯ ಸರ್ವಸದಸ್ಯರು ಹಾಗೂ ಹೆಬ್ರಿ ತಾಲೂಕಿನ ವಿಪ್ರ ಬಾಂಧವರು, ಮಾತೆಯರು, ಊರ ಪ್ರಮುಖರು,ಭಕ್ತಾದಿಗಳು ಉಪಸ್ಥಿತರಿದ್ದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page