
ಹೆಬ್ರಿ:ಜನಸಂಖ್ಯೆಯ ಹೆಚ್ಚಳವು ಬಡತನ, ಅನಾರೋಗ್ಯ, ಶಿಕ್ಷಣದ ಕೊರತೆ ಹಾಗೂ ಉದ್ಯೋಗಾವಕಾಶಗಳ ಕೊರತೆ ಸೇರಿದಂತೆ ಮಾನವನು ಮೂಲಭೂತ ಸೌಲಭ್ಯಗಳನ್ನು ಪಡೆಯುವಲ್ಲಿ ಸವಾಲಾಗಿ ಪರಿಣಮಿಸಿದೆ. ಮಹಿಳೆ ಯರು ಉತ್ತಮ ಶಿಕ್ಷಣ ಪಡೆದು ಜಾಗೃತರಾಗಬೇಕು. ಮಹಿಳಾ ಸಬಲೀಕರಣ, ಕುಟುಂಬ ಯೋಜನೆ, ಸರಿಯಾದ ಆರೋಗ್ಯ ಸೌಲಭ್ಯಗಳ ಅರಿವನ್ನು ಪಡೆದುಕೊಳ್ಳಬೇಕು. ಸುಭದ್ರ ಜೀವನಶೈಲಿ ರೂಪಿಸಿಕೊಂಡು ಸಣ್ಣ ಕುಟುಂಬಗಳ ಪರಿಕಲ್ಪನೆಯನ್ನು ಉತ್ತೇಜಿಸುವುದೇ ವಿಶ್ವ ಜನಸಂಖ್ಯಾ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು
ಅವರು ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಂಶಿಕಾ, ಪ್ರತೀಕ್ಷಾ, ದಿಶಾಂತ್ ಅವರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು. ಶಿಕ್ಷಕಿ ಚಂದ್ರಕಾಂತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ರಘುಪತಿ ಹೆಬ್ಬಾರ್ ವಂದಿಸಿದರು.ಶಿಕ್ಷಕರಾದ ಮಹೇಶ್ ನಾಯ್ಕ್ ಕೆ., ಶ್ಯಾಮಲಾ ಸಹಕರಿಸಿದರು.






















































