
ಹೆಬ್ರಿ :ಮುದ್ರಾಡಿ ಪರಿಸರದಲ್ಲಿ ಸಾಮಾಜಿಕ, ಕ್ರೀಡಾ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಈಶ್ವರ ನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಬಲ್ಲಾಡಿ, ಮುದ್ರಾಡಿ ಇವರ ಆಶ್ರಯದಲ್ಲಿ ಮುದ್ರಾಡಿಯ ಬರ್ಸಬೆಟ್ಟು ಮೈದಾನದಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 12 ತಂಡಗಳು ಭಾಗವಹಿಸಿದ, ಫುಲ್ ಗ್ರೌಂಡ್ ಕ್ರಿಕೆಟ್ ಮಾದರಿಯ ಇ ಎನ್ ಬಿ ಟ್ರೋಫಿ -2024 ನಡೆಯಿತು. ಪ್ರಥಮ ಸ್ಥಾನವನ್ನು ಉಪ್ಪಳ ಪ್ರೆಂಡ್ಸ್ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಕಬ್ಬಿನಾಲೆ ಫ್ರೆಂಡ್ಸ್,ತೃತೀಯ ಸುಶಾಂತ್ ಪ್ರೆಂಡ್ಸ್ ,ಚತುರ್ಥ ಸ್ಥಾನವನ್ನು E,N,B ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬರ್ಸ್ ಬೆಟ್ಟು ಸುಧಾಕರ್ ಶೆಟ್ಟಿ, ಗಣಪತಿ ಎಂ., ವಿಶು ಕುಮಾರ್ ಉಪ್ಪಳ,ಪಂದ್ಯಾಟದ ಟ್ರೋಫಿಯ ಪ್ರಾಯೋಜಕರಾದ ಮುದ್ರಾಡಿ ಜನನಿ ಎಂಟರ್ಪ್ರೈಸಸ್ ಮಾಲಿಕ ಸತೀಶ್ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಪೂಜಾರಿ,ಸಂಘಟನೆಯ ಅಧ್ಯಕ್ಷ ಸಂತೋಷ್ ಕುಲಾಲ್, ಮನೋಹರ್ ಹೆಗ್ಡೆ ಇವರು ಪಾಲುಗೊಂಡು ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಪ್ರಶಾಂತ್ ಪೈ ಮುದ್ರಾಡಿ ನಿರೂಪಿಸಿ ವಂದಿಸಿದರು.