
ಮುದ್ರಾಡಿಯಲ್ಲಿ ಪ್ರಗತಿ ರಕ್ಷಾ ವಿಮಾ ಮಂಜೂರಾತಿ ಪತ್ರ ವಿತರಣೆ
ಇಂದು ಮುದ್ರಾಡಿ ವಲಯದ ಮುದ್ರಾಡಿ ಕಾರ್ಯಕ್ಷೇತ್ರದ ಸತ್ಯಶ್ರೀ ಸಂಘದ ಸದಸ್ಯರಾದ ಹರೀಶ್ ಕುಲಾಲ್ ರವರ ಮೈಕ್ರೊ ಬಜತ ಡೆತ್ ಕ್ಲೇಮ್ 400999,ರೂ ಹಾಗೂ ಭೀಮ ಜ್ಯೋತಿ 134888 ರೂ ಹಾಗೂ prk ಯಿಂದ ಸಾಲ ಮನ್ನಾ ವಾದ ಮೊತ್ತ 527000 ವನ್ನು ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ ಪೂಜಾರಿ ಯವರು ಮಂಜೂರಾತಿ ಪತ್ರ ವನ್ನು ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಗಣಪತಿ ಎಂ.,ವಲಯದ ನಿಕಟ ಪೂರ್ವ ಅಧ್ಯಕ್ಷರಾದ ರತ್ನಾಕರ ಪೂಜಾರಿ, ಮುದ್ರಾಡಿ ಒಕ್ಕೂಟದ ಅಧ್ಯಕ್ಷರಾದ ಸುಬ್ರಾಯ ಆಚಾರ್ಯ, ಶಿಕ್ಷಕರಾದ ಚಂದ್ರಶೇಖರ ಭಟ್, ಹೆಬ್ರಿ ತಾಲ್ಲೂಕು ಯೋಜನಾ ಧಿಕಾರಿ ಗಳಾದ ಲೀಲಾವತಿ ಮೇಡಂ, ವಲಯದ ಮೇಲ್ವಿಚಾರಕರಾದ ಸುಮಲತಾ, ಸೇವಾಪ್ರತಿನಿಧಿ ಮಮತ, ಒಕ್ಕೂಟ ದ ಪದಾಧಿಕಾರಿಗಳು, ಸಂಘ ದ ಸದಸ್ಯರು ಉಪಸ್ಥಿತರಿದ್ದರು.



















































