
ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ದೈವ ಪಾತ್ರಿ ಹಾಗೂ ಅರ್ಚಕ ದಿವಾಕರ್ ಪೂಜಾರಿ(67)ಹೃದಯಘಾತ ದಿಂದ ಫೆ. 15 ರ ಭಾನುವಾರ ನಿಧನರಾದರು.
ಎಂದಿನಂತೆ ಮುಂಜಾನೆ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ನಿಗದಿಯಾದ ದೈವ ದರ್ಶನಕ್ಕೆ ಕಾಸರಗೋಡಿಗೆ ತೆರಳಿದ್ದರು. ಅಲ್ಲಿ ದೈವ ದರ್ಶನಕ್ಕೆ ಸಿದ್ಧತೆಯ ನಡುವೆ ಕುಳಿತಿದ್ದ ವೇಳೆ ಕುಸಿದು ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಲಿಲ್ಲ. ಮೃತರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದು ಸುಮಾರು 4 ದಶಕಗಳ ಕಾಲ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಜಾರಿಗೆ ಕಟ್ಟೆಯಲ್ಲಿ ಪ್ರತ್ಯೇಕ ಕೊರಗಜ್ಜ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಊರ ಪರವೂರ ಭಕ್ತಾದಿಗಳನ್ನು ಬರುವಂತೆ ಮಾಡಿದ್ದರು.




