
ಮಿಯ್ಯಾರಿನ ಪೊಸರು ಗುಡ್ಡೆ ಎಂಬಲ್ಲಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಹಂದಿ ಸಾಕಾಣಿಕೆ ನಡೆಸುತ್ತಿದು. ಈ ಹಂದಿ ಸಾಕಾಣಿಕ ಘಟಕದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಈ ಫಾರ್ಮ್ ನಿಂದ ಹೊರಕ್ಕೆ ಬರುವ ಮಲಿನವಾದ ನೀರು ಹಾಗೂ ದುರ್ವಾಸನೆ ಈ ಪ್ರದೇಶವನ್ನು ಸಂಪೂರ್ಣ ವಾಸನಾಯುಕ್ತ ಪ್ರದೇಶವನ್ನಾಗಿ ಮಾಡಿದೆ.ಈ ಮಲಿನ ನೀರು ಹತ್ತಿರದ ಮನೆಗಳ ಬಾವಿಗೆ ಸೇರಿ ಬಾವಿ ನೀರು ಕೂಡಾ ಮಲಿನ ಆಗಿದೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ ಗೆ ದೂರು: ಈ ಮಾಲಿನ್ಯವನ್ನು ಕಂಡು ರೋಸಿ ಹೋದ ಸ್ಥಳೀಯರು ಮಿಯ್ಯಾರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.