20.4 C
Udupi
Monday, February 2, 2026
spot_img
spot_img
HomeBlogಮಿಯ್ಯಾರು ಲವ - ಕುಶ ಜೋಡುಕರೆ ಕಂಬಳದ ಫಲಿತಾಂಶ

ಮಿಯ್ಯಾರು ಲವ – ಕುಶ ಜೋಡುಕರೆ ಕಂಬಳದ ಫಲಿತಾಂಶ

ಕಾರ್ಕಳ: ಜನವರಿ 3ರಂದು ಮಿಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ 22ನೇ ವರ್ಷದ ಮಿಯಾರು ಲವ-ಕುಶ ಜೋಡುಕರೆ ಬಯಲು ಕಂಬಳವು ಜನವರಿ ಮೂರರಂದು ಆರಂಭಗೊಂಡಿದ್ದು ಜನವರಿ 4 ರಾತ್ರಿ 8:00 ಗಂಟೆಗೆ ಪೂರ್ಣಗೊಂಡಿದ್ದು, ಫಲಿತಾಂಶ ಬಿಡುಗಡೆಯಾಗಿದೆ.

ಈ ಕಂಬಳ ಕೂಟದಲ್ಲಿ ಒಟ್ಟು 205 ಜೊತೆ ಕೋಣಗಳು ಭಾಗವಹಿಸಿದ್ದು ಫಲಿತಾಂಶ ಈ ಕೆಳಗಿನಂತಿದೆ.

ಹಗ್ಗ ಹಿರಿಯ ವಿಭಾಗ :
ಪ್ರಥಮ ಸ್ಥಾನ: ಮುಡಾರು ಹಚ್ಚೊಟ್ಟು ಪ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್ ಅವರ ಕೋಣಗಳು
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ ಸ್ಥಾನ: ಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ ಶೆಟ್ಟಿ ಅವರ ಕೋಣಗಳು
ಓಡಿಸಿದವರು: ಮಿಜಾರು ಅಶ್ವತಪುರ ಶ್ರೀನಿವಾಸಗೌಡ

ಹಗ್ಗ ಕಿರಿಯ ವಿಭಾಗ:
ಪ್ರಥಮ ಸ್ಥಾನ: ಹೊಸ್ಮಾರು ಸೂರ್ಯ ಶ್ರೀ ಜ್ಯೋತಿ ಸುರೇಶ್ ಶೆಟ್ಟಿ ಅವರ ಕೋಣಗಳು
ಓಡಿಸಿದವರು: ಕಡಂದಲೆ ಮೂಡಾಯಿಬೆಟ್ಟು ಮೋಹಿತ್ ಪಾಣಾರ

ದ್ವಿತೀಯ ಸ್ಥಾನ: ಮಿಯಾರು ಹಿಣಪ್ಪಾಡಿ ಬ್ರಿಜೇಷ್ ಪಡಿವಾಳ್ ಎ ಅವರ ಕೋಣಗಳು
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ಅಡ್ಡ ಹಲಗೆ ವಿಭಾಗ:
ಪ್ರಥಮ ಸ್ಥಾನ: ನಾರಾವಿ ರಕ್ಷಿತ್ ಜೈನ್ ಅವರ ಕೋಣಗಳು
ಓಡಿಸಿದವರು: ಭಟ್ಕಳ ಹರೀಶ್

ದ್ವಿತೀಯ ಸ್ಥಾನ: ಕೋಂಟಡ್ಕ ರೆಂಜಾಳ ಅಶ್ವಿನ್ ಲಾರೆನ್ಸ್ ಮೆಂಡೋನ್ಸಾ ಅವರ ಕೋಣಗಳು
ಓಡಿಸಿದವರು: ಉಳ್ಳೂರು ಕಂದಾವರ ಗಣೇಶ್

ನೇಗಿಲು ಹಿರಿಯ ವಿಭಾಗ:
ಪ್ರಥಮ ಸ್ಥಾನ: ಬೋಳದಗುತ್ತು ಸತೀಶ್ ಶೆಟ್ಟಿ ಎ ಅವರ ಕೋಣಗಳು
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ ಸ್ಥಾನ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ಎ ಅವರ ಕೋಣಗಳು
ಓಡಿಸಿದವರು: ಕಕ್ಕೆಪದವು ಕೃತಿಕ್ ಗೌಡ

ನೇಗಿಲು ಕಿರಿಯ ವಿಭಾಗ:
ಪ್ರಥಮ ಸ್ಥಾನ: ಕಾರ್ಕಳ ಬಂಡಿ ಮಠ ಸಿದ್ಧಿವಿನಾಯಕಬೆಟ್ಟು ಕೋಡಿಮನಿ ಅದ್ವಿಕ್ ಅಶೋಕ್ ಶೆಟ್ಟಿ ಎ ಅವರ ಕೋಣಗಳು
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ ಸ್ಥಾನ: ಶ್ರೀ ಶಂಕರ್ ಮೂಡುಸೂರ ಈಶ್ವರಕಟ್ಟೆ ಪ್ರೇರಣಾ ಪ್ರತಾಪ್ ಭಂಡಾರಿ ಅವರ ಕೋಣಗಳು
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ್ ನಾಯ್ಕ್

ಈ ಬಾರಿ ನಡೆದ ಕಂಬಳದಲ್ಲಿ 205ಕ್ಕೂ ಹೆಚ್ಚು ಜೋಡಿ ಕೋಣಗಳ ಅದ್ಭುತ ಪೈಪೋಟಿ ಕಣ್ತುಂಬಿಕೊಂಡು ಅಭಿಮಾನಿಗಳು ಸಂಭ್ರಮಿಸಿದರು. ವಿವಿಧ ವಿಭಾಗಗಳಲ್ಲಿ ಜಯಗಳಿಸಿದ ಕೋಣಗಳ ಮಾಲೀಕರು ಹಾಗೂ ಓಡಿಸಿದ ಸವಾರರು ತಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಪ್ರದಾಯ, ಕ್ರೀಡಾತ್ಮಕತೆ ಮತ್ತು ಜನಸಂಸ್ಕೃತಿಯ ಸಮನ್ವಯವಾಗಿ ಯಶಸ್ವಿಯಾಗಿ ಸಂಪನ್ನಗೊಂಡ ಈ ಕಂಬಳ ಕೂಟವು ಭಾಗವಹಿಸಿದವರಲ್ಲಿಯೂ, ನೋಡುಗರಲ್ಲಿಯೂ ಭಾರೀ ಹರ್ಷೋದ್ಗಾರ ಮೂಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page