
ನವದೆಹಲಿ: ಸುಪ್ರೀಂ ಕೋರ್ಟ್ ವಿಧವೆ ಮಹಿಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ಹೊರಡಿಸಿದ್ದು ಅದೇನೆಂದರೆ ವಿಧವೆಯಾದ ಹಿಂದೂ ಸೊಸೆಯು ತನ್ನ ಮಾವನ ಆಸ್ತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಆದೇಶಿಸಿದೆ.
ಡಾ. ಮಹೇಂದ್ರ ಪ್ರಸಾದ್ ಅವರ ವಿಧವೆ ಸೊಸೆ ಗೀತಾ ಶರ್ಮ ಅವರು ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸುವಂತೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಅವರ ಸಂಬಂಧಿಕರಾದ ಕಾಂಚನ ರೈ ಮತ್ತು ಉಮಾದೇವಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಎಸ್.ವಿ.ಎನ್ ಭಟ್ಟಿ ಅವರ ಪೀಠವು ಇಂತಹ ಹಕ್ಕು ವಿಧವೆಯಾದ ಹಿಂದೂ ಸೊಸೆಗೆ ಕೇವಲ ಕಾನೂನು ಕಾಯ್ದೆ ಅಡಿ ಮಾತ್ರವಲ್ಲ, ಸಂವಿಧಾನದಲ್ಲಿ ಹಾಗೂ ಪ್ರಾಚೀನ ಮನಸ್ಮೃತಿಯಲ್ಲೂ ಅಡಕವಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.



















