
ಮಾಳ ಗ್ರಾಮದ ಶ್ರೀ ವಿಷ್ಣುಮೂರ್ತಿ ಹಳೆಪಳ್ಳಿ ದೇವಸ್ಥಾನದ ಬ್ರಹ್ಮಕಲಸದ ಪ್ರಯುಕ್ತ ಇಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ಮಾಳಪಂಚಾಯತ್ ನೇತ್ರತ್ವದಲ್ಲಿ ಚಾಲನೆಯನ್ನು ನೀಡಲಾಯಿತು.
ಸ್ವಚ್ಛತೆ ಕಡೆ ನಮ್ಮ ನಡಿಗೆ ಕಾರ್ಯಕ್ರಮದಡಿ ಮಲ್ಲಾರು ಜನ ವಸತಿ ಪ್ರದೇಶದಿಂದ ಮುಳ್ಳೂರು ಗೇಟ್ ವರೆಗೆ ಸುಮಾರು ನಾಲ್ಕು ಕಿಲೋಮೀಟರ್ ನಷ್ಟು ರಸ್ತೆಯ ಇಕ್ಕೆಲ ಬದಿಯಿಂದ ಕಸವನ್ನು ಹೆಕ್ಕಿ ಸ್ವಚ್ಛತಾ ವಾಹಿನಿಗೆ ಹಾಕಲಾಗಿದೆ ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಸದಸ್ಯರು ಎಸ್ ಎಲ್ ಆರ್ ಘಟಕದ ಸದಸ್ಯರು ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು
ಈ ಕಾರ್ಯಕ್ರಮದ ನೇತೃತ್ವವನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ದಿನೇಶ್ ಇವರು ವಹಿಸಿದ್ದರು ಪ್ಲಾಸ್ಟಿಕ್ ಬಾಟಲಿಗಳು ತೊಟ್ಟೆಗಳು ಹಾಗೂ ಇನ್ನಿತರ ತ್ಯಾಜ್ಯಗಳು ಸುಮಾರು 100 ಕೆಜಿ ಸಂಗ್ರಹಿಸಲಾಗಿತ್ತು ಸಂಗ್ರಹಿಸಿದ ಎಲ್ಲಾ ತ್ಯಾಜ್ಯಗಳನ್ನು ಎಸ್ಎಲ್ಆರ್ ಘಟಕದ ವಾಹಿನಿಯ ಮೂಲಕ ಘಟಕಕ್ಕೆ ಕಳುಹಿಸಲಾಯಿತು