ಪ್ರಿಯಾಂಕ ಖರ್ಗೆ ಉಪಸ್ಥಿತಿಯಲ್ಲೇ ,ಟ್ರಾಫಿಕ್ ಬಗ್ಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮಾತು

ಬೆಂಗಳೂರು: 2027 ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಮಿಷನ್ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆದ ನಾಲ್ಕು ಗಗನಯಾತ್ರಿಗಳಲ್ಲಿ ಒಬ್ಬರಾದ ಗಗನಯಾತ್ರಿ ಶುಭಾಂಶು ಶುಕ್ಲಾ, ಗುರುವಾರ ಟೆಕ್ ಶೃಂಗಸಭೆಯಲ್ಲಿ ಮಾತನಾಡಿ ಮಾರತಹಳ್ಳಿಯಿಂದ ಶೃಂಗಸಭೆ ನಡೆಯುವ ಪ್ರಯಾಣವು ತನ್ನ ನಿಗದಿತ ಭಾಷಣಕ್ಕಿಂತ ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಬೆಂಗಳೂರಿನ ಟ್ರಾಫಿಕ್ ಬಗ್ಗೆ ತಮಾಷೆ ಮಾಡಿದ್ದಾರೆ.
ನಾನು ಬೆಂಗಳೂರಿನ ಇನ್ನೊಂದು ತುದಿಯಾದ ಮಾರತ್‌ಹಳ್ಳಯಿಂದ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಎದುರು ಮಾತನಾಡುವುದಕ್ಕಿಂತ ಮೂರು ಪಟ್ಟು ಹೆಚ್ಚಿನ ಸಮಯ ರಸ್ತೆಯಲ್ಲೇ ಕಳೆದಿದ್ದೇನೆ. ಹಾಗಾಗಿ ನೀವು ನನ್ನ ಬದ್ಧತೆಯನ್ನು ಇಲ್ಲಿ ಕಾಣಬೇಕು ಎಂದು ತಮಾಷೆ ಮಾಡಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ, “ಮಾರತ್‌ಹಳ್ಳಿಯಿಂದ ಮಾದಾವರಕ್ಕೆ ಬರುವುದಕ್ಕಿಂತ ಬಾಹ್ಯಾಕಾಶದಿಂದ ಬೆಂಗಳೂರಿಗೆ ಬರುವುದೇ ಸುಲಭ ಎಂದು ಶುಭಾಂಶು ಶುಕ್ಲಾ ಹೇಳಿದರು. ಆದರೆ, ಇಂಥ ವಿಳಂಬಗಳು ಮರುಕಳಿಸದಂತೆ ಸರ್ಕಾರ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.






















































