
ಹೆಬ್ರಿ: ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಜುಲೈ 7ರಂದು ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಭಾ ವೇದಿಕೆಯಲ್ಲಿ ಹೆಬ್ರಿ ಮತ್ತು ಕಾರ್ಕಳ ಜನಮಾನಸದ ನಾಯಕ ದಿ| ಗೋಪಾಲ್ ಭಂಡಾರಿ ಅವರ ಸ್ಮರಣಾರ್ಥ ವೃತ್ತ ರಚನೆ ಹಾಗೂ ಪುತ್ಥಳಿ ಸ್ಥಾಪನೆ ಕಾರ್ಯಕ್ರಮದಲ್ಲಿ ಅವರ ಜೀವನ ಚರಿತ್ರೆ ಬಗ್ಗೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ್ದು ಈರೂ ವೇಳೆ ಭ್ರಷ್ಟಾಚಾರ ಮುಕ್ತ ಮನಸ್ಥಿತಿ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಬಡವರ ಬಗ್ಗೆ ವಿಶೇಷ ಕಾಳಜಿ ಶುದ್ಧ ಹಸ್ತದ ನಾನು ಕಂಡ ಶ್ರೇಷ್ಠ ವ್ಯಕ್ತಿಯಾದ ಗೋಪಾಲ ಭಂಡಾರಿ ಅವರು ಕರ್ನಾಟಕದ ರಾಜಕೀಯ ರತ್ನವಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ಶಾಸಕ ವಿ ಸುನಿಲ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದು ರಾಜಕೀಯದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟವರು ಗೋಪಾಲ ಭಂಡಾರಿ ಅವರು ಎಂದು ಹೇಳಿದರು.
ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿದ ಗೋಪಾಲ್ ಭಂಡಾರಿ ಅವರ ಅಭಿಮಾನಿ ನೀರೇ ಕೃಷ್ಣಶೆಟ್ಟಿ ಮಾತನಾಡಿ ಎಲ್ಲರೊಂದಿಗೆ ಬರೆಯುತ್ತಿದ್ದ ಕರ್ನಾಟಕ ಕಂಡ ಶುದ್ಧ ಹಸ್ತ ರಾಜಕಾರಣಿಯಾದ ಬಂಡಾರಿಯವರು ಈಗಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರ ಸ್ಮರಣಾರ್ಥ ಪುತ್ತಳಿ ನಿರ್ಮಾಣ, ಸ್ಮರಣಸಂಚಿಕೆ ಬಿಡುಗಡೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಮಾತನಾಡಿದ್ದು ಭಂಡಾರಿ ಅವರ ವಿಚಾರಧಾರೆ, ಅವರ ಸರಳತೆ ನಮ್ಮೆಲ್ಲರಿಗೂ ಪ್ರೇರಣೆ. ಶೀಘ್ರದಲ್ಲಿ ಕಾರ್ಕಳದಲ್ಲಿ ಕೂಡ ಅವರ ಹೆಸರಿನ ವೃತ್ತ ಮತ್ತು ಪುತ್ತಳಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಮಂತ್ರಿಗಳಾದ ರಮಾನಾಥ್ ರೈ, ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ, ಅಭಯ್ ಚಂದ್ರ ಜೈನ್ ಪ್ರಕಾಶಿನ ಗೋಪಾಲ ಭಂಡಾರಿ, ಕುಂದಾಪುರ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಬಂಗೇರ, ಧರ್ಮಸ್ಥಳ ಯೋಜನಾಧಿಕಾರಿ ಲೀಲಾವತಿ, ಚಾರ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಡಿಸಿಸಿ ಅಧ್ಯಕ್ಷ ಅಶೋಕ್ ಕೊಡವೂರು, ಜ್ಞಾನಸುಧ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ, ಉದ್ಯಮಿಗಳಾದ ಸತೀಶ್ ಪೈ, ಪ್ರವೀಣ್ ಬಲ್ಲಾಳ್, ಸುರೇಂದ್ರ ಶೆಟ್ಟಿ, ವಾದಿರಾಜ ಶೆಟ್ಟಿ, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ ಎ ಗಪೂರ್, ಎಸ್ ಆರ್ ಅಧ್ಯಕ್ಷ ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಹೆಬ್ರಿ ಬಿಸಿಸಿ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಬಿಸಿಸಿ ಅಧ್ಯಕ್ಷ ಶುಭೋದ್ ರಾವ್, ನಾರಾಯಣ ಗುರು ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಶ್ರೀನಿವಾಸ್ ನಾಯಕ್, ಜನಾರ್ಧನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.