ಭಾಗ – 365
ಭರತೇಶ್ ಶೆಟ್ಟಿ , ಎಕ್ಕಾರ್

ಎರಡೂ ಸೇನೆಗಳು ಸಮಾಹಿತರಾಗಿ ಕುರುಕ್ಷೇತ್ರದಲ್ಲಿ ಇನ್ನೇನು ಈ ದಿನದ ಯುದ್ದ ಆರಂಭವಾಗುತ್ತದೆ ಎನ್ನುವಂತೆ ಇದೆ. ಇತ್ತ ಹಸ್ತಿನೆಯಲ್ಲಿ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಿದ್ದಾನೆ ” ದ್ರೋಣರಿಂದ ತಂತ್ರಪೂರ್ಣವಾಗಿ ರಚಿಸಲ್ಪಟ್ಟ ವ್ಯೂಹವನ್ನು ಭೇದಿಸಿ, ಜಯದ್ರಥನನ್ನು ತನ್ನ ಪ್ರತಿಜ್ಞೆಯಂತೆ ವಧಿಸಲು ಅರ್ಜುನ ಸಮರ್ಥನಾದಾನೇ?”
ಸಂಜಯ ಉತ್ತರ ನೀಡತೊಡಗಿದ “ಮಹಾರಾಜಾ! ಅರ್ಜುನ ಮೊದಲೇ ಪುತ್ರಶೋಕದಿಂದ ಘಾಸಿಯಾಗಿ ಕೆರಳಿದ ಸಿಂಹದಂತಾಗಿದ್ದಾನೆ. ಮೇಲಾಗಿ ಶ್ರೀಕೃಷ್ಣ ಜೊತೆಗಿದ್ದಾನೆಂದರೆ ಅಸಾಧ್ಯವೆನ್ನುವುದು ಯಾವುದಿದೆ? ನಿನ್ನೆಯ ರಾತ್ರಿ ವಿಶೇಷವೊಂದು ನಡೆದು ಹೋಗಿದೆ. ಅರ್ಜುನ ಸ್ವಪ್ನದಲ್ಲಿ ಸುಪ್ತವಾಸ್ಥೆಗೆ ಜಾರಿ ಧ್ಯಾನಸ್ಥನಾಗಿ ಪರಶಿವನ ದರುಶನ ಭಾಗ್ಯ ಪಡೆದು ಮತ್ತೆ ಪಾಶುಪತಾಸ್ತ್ರದ ಪುನರ್ ಅನುಗ್ರಹ ಪಡೆದಿದ್ದಾನೆ. ಪಾಶುಪತವನ್ನು ಪಾರ್ಥ ಪ್ರಯೋಗಿಸಿದರೆ ಅದನ್ನು ತಡೆಯಲು ಶರಾದಪಿ ದ್ರೋಣರಿಗೂ ಸಾಧ್ಯವಿಲ್ಲ. ಹೀಗೆ ಒಂದೆಡೆಯಾದರೆ, ಇತ್ತ ಯುಧಿಷ್ಟಿರ ರಾತ್ರಿ ಪೂರ್ತಿ ವೇದವ್ಯಾಸರ ಜೊತೆ ಧರ್ಮ ಜಿಜ್ಞಾಸೆಯಲ್ಲಿದ್ದು ದುಃಖ ಮುಕ್ತನಾಗಿದ್ದಾನೆ. ಇಂದು ಬ್ರಾಹ್ಮೀ ಮುಹೂರ್ತದಲ್ಲಿ ವಿಧಿಪೂರ್ವಕ ಯಾಗ ಯಜ್ಞಾದಿಗಳನ್ನು ಪೂರೈಸಿ, ಯಥೇಚ್ಚ ದಾನ ಧರ್ಮಗಳನ್ನೂ ನೀಡಿದ್ದಾನೆ. ನಂತರ ಧರ್ಮರಾಯ ಶ್ರೀಕೃಷ್ಣನನ್ನು ಸಂಪ್ರಾರ್ಥಿಸಿ ಅರ್ಜುನನ ಶಪಥ ಪೂರೈಕೆಯಾಗುವಂತೆ ಅಭಯವನ್ನು ಬೇಡಿ ಹರಸಲ್ಪಟ್ಟಿದ್ದಾನೆ. ಹೀಗೆಲ್ಲಾ ಪೂರ್ವ ತಯಾರಿಗಳು ನಡೆದಿರುವಾಗ ನನಗೇಕೊ ಮತ್ತೆ ಪಾಂಡವರ ಮೇಲುಗೈಯಾಗುವ ಸಾಧ್ಯತೆ ಕಾಣುತ್ತಿದೆ. ಧರ್ಮಪಾಲಕರಾದ ಅವರ ರಕ್ಷಣೆ ಸ್ವಯಂ ಧರ್ಮವೇ ಮಾಡುತ್ತಿದೆ. ಜೊತೆಗೆ ಕೃಷ್ಣನೂ ಇದ್ದು ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ. ಹಾಗಾಗಿ ಇಂದು ದ್ರೋಣಾಚಾರ್ಯರು ವಿಕ್ರಮ ಪ್ರದರ್ಶಿಸಿ ಏನೇ ನಿರ್ನಾಮ ಕೃತ್ಯಗಳನ್ನು ಮಾಡಿದರೂ, ಅರ್ಜುನ ತನ್ನ ಪ್ರತಿಜ್ಞೆ ಪೂರೈಸುವುದನ್ನು ತಡೆಯುವುದು ಅಸಾಧ್ಯವಾಗಿ ಕಾಣುತ್ತಿದೆ” ಎಂದನು.
ಕುರುಕ್ಷೇತ್ರದಲ್ಲಿ ಇತ್ತಂಡಗಳೂ ರಣೋತ್ಸಾಹ ಪ್ರದರ್ಶನ ನಿರತವಾಗಿವೆ. ಮೃದಂಗ – ನಗಾರಿ, ರಣ ಭೇರಿ ಕಹಳೆ, ಶಂಖ – ರಣವಾದ್ಯಗಳು ಮೊಳಗುತ್ತಿವೆ. ರಣಭೀಕರವಾದ ತರಂಗಗಳನ್ನು ಉತ್ಪಾದಿಸುತ್ತಿರುವ ವಾದನ, ಗರ್ಜನ, ತರ್ಜನಗಳ ಜೊತೆ ಸಿಂಹನಾದದ ರೀತಿ ಉದ್ಘೋಷ – ಜಯಕಾರಗಳೂ ಪ್ರತಿಧ್ವನಿಸುತ್ತಾ, ಯುದ್ದಾಹ್ವಾನದ ಕೂಗು ಮುಗಿಲು ಮುಟ್ಟುತ್ತಿದೆ. ನೋಡ ನೋಡುತ್ತಿದ್ದಂತೆಯೆ ಯುದ್ದ ಆರಂಭವಾಯಿತು. ಅರ್ಜುನ ವ್ಯೂಹ ಭೇದನೆಗೆ ಮಾರ್ಗ ಅರಸುತ್ತಾ ಕೃಷ್ಣನ ಜೊತೆ ತರ್ಕಿಸಿದನು. ಮೊದಲು ಕೌರವರ ವ್ಯೂಹ ಕವಚದಂತಿರುವ ಅತಿ ಬಲಾಢ್ಯನೂ ಆದ ದುರ್ಮರ್ಷಣ ಮತ್ತು ಆತನ ಗಜ ಸೈನ್ಯವನ್ನು ನಿಗ್ರಹಿಸುವ ಯೋಜನೆ ಯೋಚಿಸಿದರು. ಕೃಷ್ಣನು ಅರ್ಜುನನ ರಥವನ್ನು ದುರ್ಮರ್ಷಣನತ್ತ ನಡೆಸಿದ.
ಪಾರ್ಥಸಾರಥಿಯ ಜೊತೆ ಬಂದವನೆ ಅತ್ಯುಗ್ರನಾಗಿ ವ್ಯೂಹದ ಒಳ ಹೋಗುವ ದಾರಿ ತೆರೆಯಲು ಶರವರ್ಷಗೈದನು. ಕೌರವರ ಪಾಳಯದಲ್ಲಿ ವೀರರ ಕೊರತೆ ಇದೆಯೆ? ಅಲ್ಲಿಂದಲೂ ಪ್ರತಿಯಾಗಿ ಸಾಂಘಿಕ ಹೋರಾಟ ಸಂಯೋಜಿಸಲ್ಪಟ್ಟಿತು. ಅರೆಕ್ಷಣದಲ್ಲಿ ಪಾರ್ಥನಿಗೆ ಸಮತುಲ್ಯ ಕಾಳಗ ನೀಡತೊಡಗಿದರು. ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ಮೊದಲು ಅವರ ಪ್ರತಿದಾಳಿಯನ್ನು ನಿಯಂತ್ರಿಸಿ, ತನ್ನ ಆಕ್ರಮಣವನ್ನು ಚುರುಕುಗೊಳಿಸಿ ರುದ್ರ ತಾಂಡವದಂತೆ ಧನಂಜಯ ಮೆರೆಯತೊಡಗಿದನು. ಕುರುಸೇನೆಯ ವೀರರು ಶಿರಚ್ಛೇದಿಸಲ್ಪಟ್ಟು ಧರೆಗೊರಗತೊಡಗಿದರು. ಇದಿರಾದ ಪ್ರಬಲ ದುರ್ಮರ್ಷಣನ ಜೊತೆ ಕೆಲಹೊತ್ತು ಭೀಕರ ಯುದ್ದ ಸಾಗಿತಾದರೂ, ನಿಂತು ತಡೆಯಲಾರದೆ ದುರ್ಮರ್ಷಣನ ಬಲಯುತ ಗಜಸೈನ್ಯ ಸಹಿತ ಸವರಲ್ಪಟ್ಟು ಹೆಣದ ರಾಶಿಯಾಗಿ ಹೋಯಿತು.
ಆ ಕೂಡಲೆ ಕ್ರೋಧಾವೇಶಕ್ಕೆ ಒಳಗಾದ ದುಶ್ಯಾಸನ ಎದುರಾಗಿ ಬಂದು ಹೋರಾಡ ತೊಡಗಿದನು. ನಿಲ್ಲಲಾದಿತೆ? ಆತನಿಗೆ! ಇನ್ನಿಲ್ಲದಂತೆ ಗಾಯಗೊಂಡು ಬದುಕಿದರೆ ಸಾಕೆಂಬಂತೆ ಓಡಿ ಹೋಗಿ ತಪ್ಪಿಸಿಕೊಂಡ. ಸಮುದ್ರ ಮಧ್ಯದಿಂದ ಎದ್ದ ಬಿರುಗಾಳಿಯಂತೆ ಪಾರ್ಥ ಒಂದೆಡೆ ಸರ್ವನಾಶಗೈಯುತ್ತಿದ್ದಾನೆ.
ಇತ್ತ ದ್ರೋಣಾಚಾರ್ಯರೂ ಕಾಳ ಭೈರವನಂತೆ ಪಾಂಡವ ಸೇನೆಯ ನಾಶಗೈಯುತ್ತಾ ಅರ್ಜುನನ್ನು ತಡೆಯಲು ಮುಂದಾಗಿ ಬಂದರು. ಕೃತವರ್ಮನೂ ಮಹಾ ವಿಕ್ರಮಿ. ತನ್ನ ಯಾದವ ಸೇನೆ ಮತ್ತು ನಾರಾಯಣಿ ಸೇನೆಯನ್ನೂ ಜೊತೆಯಾಗಿಸಿ ದ್ರೋಣಾಚಾರ್ಯರ ಸಹಾಯಕನಾಗಿ ಪಾರ್ಥನನ್ನು ತಡೆಯಲು ಮುನ್ನುಗ್ಗಿದನು. ಅರ್ಜುನ ಏಕಕಾಲದಲ್ಲಿ ಮಹಾರಥಿಗಳಾದ ದ್ರೋಣಾಚಾರ್ಯ ಮತ್ತು ಕೃತವರ್ಮನನ್ನು ಎದುರಿಸಿ ಹೋರಾಡತೊಡಗಿದನು. ಘನಘೋರ ಸಂಗ್ರಾಮ ಏರ್ಪಟ್ಟಿತು. ಗುರು ದ್ರೋಣರಿಗೂ ಒಂದು ಹಂತದಲ್ಲಿ ಏನು ಮಾಡಿದರೂ ಅರ್ಜುನನ್ನು ನಿಯಂತ್ರಿಸಲಾಗದ ಸ್ಥಿತಿ ನಿರ್ಮಾಣವಾಯಿತು. ಕೃತವರ್ಮನೂ ಸಮದಂಡಿಯಾಗಿ ಅದ್ಬುತ ಸಾಹಸವನ್ನು ಮೆರೆಯತೊಡಗಿದ್ದಾನೆ. ಆಗ ಶ್ರೀ ಕೃಷ್ಣ “ಪಾರ್ಥಾ! ನೀನೇಕೆ ಕೃತವರ್ಮನಿಗೆ ಈ ರೀತಿ ಅವಕಾಶ ನೀಡುತ್ತಿರುವೆ? ಯಾದವನೆಂಬ ಮಮಕಾರವೊ? ಅಲ್ಲಾ ನನ್ನ ಸಂಬಂಧಿ ಆತನೆಂಬ ಪ್ರೀತಿಯೊ? ಇಲ್ಲಿ ಹೆಚ್ಚಿನ ವೈರಿಗಳು ನಮ್ಮ ಆಪ್ತ ಸಂಬಂಧಿಕರು! ಆದರೆ ರಣರಂಗದಲ್ಲಿ ಸಂಬಂಧವಿಲ್ಲ. ನಿನ್ನ ಮಗನನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ. ನೀನೇಕೆ ತಡವರಿಸುತ್ತಿರುವೆ?” ಎಂದು ಕುಟುಕಿದನು. ಆ ಕೂಡಲೆ ಭಯಂಕರನಾಗಿ ಎರಗಿದ ಪಾರ್ಥ ತೀಕ್ಷ್ಣ ಶರಗಳಿಂದ ಕೃತವರ್ಮನನ್ನು ಘಾತಿಸಿ ಮೂರ್ಛೆಗೊಳಿಸಿ ಧರೆಗುರುಳಿಸಿದ. ಅರ್ಜುನ ಇಲ್ಲಿ ಕೃತವರ್ಮನ ಬಗ್ಗೆ ಮನದ ಯಾವುದೊ ಮೂಲೆಯಿಂದ ಮಮತೆ ತೋರಿ ಜೀವದಾನ ನೀಡಿದ ಎನ್ನಬಹುದು. ಬಳಿಕ ದ್ರೋಣರನ್ನೂ ವಿಮುಖಗೊಳಿಸಿ ಬಿಟ್ಟನು ಕಲಿ ಪಾರ್ಥ.
ಕ್ಷಣಾರ್ಧದಲ್ಲಿ ಮುನ್ನುಗ್ಗಿದ ಅರ್ಜುನನ ರಥ ವ್ಯೂಹ ಭೇದಿಸಿ ಒಳನುಗ್ಗಿತು. ಈವರೆಗೆ ರಥರಕ್ಷಕರಾಗಿದ್ದ ಯುಧಾಮನ್ಯು ಮತ್ತು ಉತ್ತಮೌಜಸರಿಗೆ ಪಾರ್ಥನ ರಥದ ಗತಿಯನ್ನು ಅನುಸರಿಸಿ ನುಗ್ಗಲಾರದೆ ಹೊರ ಉಳಿದರು. ಎಷ್ಟು ಪ್ರಯತ್ನಿಸಿದರೂ ಒಳ ನುಸುಳಲಾಗಲಿಲ್ಲ.
ಕೃಷ್ಣಾರ್ಜುನರು ಬಾಳೆತೋಟ ಹೊಕ್ಕ ಮದಕರಿಯಂತೆ ಸರ್ವನಾಶ ಗೈಯುತ್ತಾ ಸಾಗುವಾಗ ಎದುರಾದವನು ಅತುಲ ವಿಕ್ರಮಿ ಶ್ರುತಾಯುಧ. ಈ ಶ್ರುತಾಯುಧ ಅಸಾಮಾನ್ಯ ವೀರನೂ – ಅಜೇಯನೂ ಹೌದು. ಅತಿ ದೊಡ್ಡ ಧನುಸ್ಸನ್ನು ಹೊಂದಿದ್ದ ಶ್ರುತಾಯುಧ ಟೇಂಕಾರಗೈದು ಪಾರ್ಥನಿಗೆ ಯುದ್ದಾಹ್ವಾನ ನೀಡಿದನು. ಸಮರ ಸಾಗಿತು, ಭೀಕರ ಯುದ್ಧವನ್ನು ಮಾಡಿದನಾದರೂ ಸವ್ಯಸಾಚಿಗೆ ಸಮನಾಗುವನೆ? ಅರ್ಜುನ ಶ್ರುತಾಯುಧನ ದೀರ್ಘ ಧನುಸ್ಸನ್ನು ಛೇದಿಸಿ ಬಿಟ್ಟನು. ಮತ್ತೆ ಹೊಸತಾದ ಉತ್ತಮ ಧನುಸ್ಸನ್ನು ಕೈಗೆತ್ತಿಕೊಂಡು ಯುದ್ದ ಮುಂದುವರಿಸಿದ. ಆದರೆ ಆಗಲೂ ಅರ್ಜುನ ಗೆಲ್ಲತೊಡಗಿದ. ಮತ್ತೆ ಹೊಸ ಧನುಸ್ಸನ್ನೂ ತುಂಡರಿಸಿದ ಪಾರ್ಥ, ಶ್ರುತಾಯುಧನ ರಥ ತುರಗಗಳನ್ನೂ ಪುಡಿಗಟ್ಟಿ ಬೀಳಿಸಿದನು. ಆ ಕೂಡಲೆ ಉದ್ರಿಕ್ತನಾದ ಶ್ರುತಾಯುಧ ತನ್ನ ದಿವ್ಯ ಗದೆಯನ್ನು ಹಿಡಿದು ಆಕ್ರಮಣಕ್ಕೆ ಮುಂದಾದನು.
ಈ ಶ್ರುತಾಯುಧ ಸಾಮಾನ್ಯನಲ್ಲ. ಆತ ವರುಣನ ಮಗ. ಪರ್ಣಾಶಾ ಎಂಬ ಮಹಾನದಿ ಆತನ ತಾಯಿ. ಹೀಗೆ ಅತಿಮಾನುಷನಾಗಿ ಹುಟ್ಟು ಪಡೆದವನು ಶ್ರುತಾಯುಧ. ಅವನ ತಾಯಿಯಾದ ಪರ್ಣಾಶಾಳು ಮಗನ ಉಜ್ವಲ ಭವಿಷ್ಯ ಮತ್ತು ಭದ್ರತೆಗಾಗಿ ವರುಣನನ್ನು ಪ್ರಾರ್ಥಿಸಿ ವರ ಬೇಡಿದ್ದಳು. ಪ್ರಸನ್ನನಾಗಿ ವರುಣ ವರಪ್ರದನಾದಾಗ “ಸ್ವಾಮಿ ನಮ್ಮ ಮಗ ಶತ್ರುಗಳಿಂದ ಅವಧ್ಯನಾಗಲಿ” ಎಂದು ಪ್ರಾರ್ಥಿಸಿದಳು. ಆಗ ವರುಣನು “ಪರ್ಣಾಶಾ! ನಮ್ಮ ಮಗ ಮಾನವನಾಗಿ ಹುಟ್ಟಿ ಬೆಳೆಯಲಿದ್ದಾನೆ. ಹಾಗಾಗಿ ಅಮರತ್ವ ಸಾಧ್ಯವಿಲ್ಲ. ನಿನ್ನ ಸಂತೋಷಕ್ಕಾಗಿ ದಿವ್ಯ ಗದೆಯನ್ನು ಆತನಿಗೆ ನೀಡುತ್ತೇನೆ. ಯುದ್ದದಲ್ಲಿ ನಮ್ಮ ಮಗ ಗದಾಧಾರಿಯಾಗಿ ಹೋರಾಡುವಾಗ ಆತನಿಗೆ ವಿಜಯ ಪ್ರಾಪ್ತವಾಗಲಿದೆ.” ಎಂದು ಹೇಳಿ ಮಗನನ್ನು ಕರೆದು “ಮಗ ಶ್ರುತಾಯುಧ, ನಿನಗೆ ದಿವ್ಯವಾದ ಈ ಗದೆಯನ್ನು ಅನುಗ್ರಹಿಸಿ ನೀಡುತ್ತಿದ್ದೇನೆ. ಆದರೆ ಇದರ ಬಳಕೆಗೆ ಒಂದು ನಿಬಂಧನೆ ಇದೆ, ನಿನ್ನ ಮೇಲೆ ಆಯುಧಧಾರಿಯಾಗಿ ಆಕ್ರಮಿಸುತ್ತಿರುವವರ ಮೇಲೆ ಘಾತಿಸು. ಜಯ ನಿನಗೊದಗುತ್ತದೆ. ಆದರೆ ನಿರಾಯುಧರ, ಯುದ್ದ ಮಾಡದೆ ಅನ್ಯ ಕರ್ಮ ನಿರತರಾಗಿರುವವರ ಮೇಲೆ ಪ್ರಯೋಗಿಸಿದರೆ ಆಗ ಈ ಗದೆ ತಿರುಗಿ ಬಂದು ಪ್ರಯೋಗಿಸಿದ ನಿನ್ನನ್ನು ಪ್ರತಿಘಾತಗೊಳಿಸಿ ಅಂತ್ಯಗೊಳಿಸುತ್ತದೆ. ಹಾಗಾಗಿ ಧರ್ಮಯುಕ್ತವಾಗಿ ಈ ಆಯುಧವನ್ನು ಬಳಸಬೇಕು” ಹೀಗೆ ಯುಕ್ತ ಧರ್ಮವನ್ನು ಉಪದೇಶಿಸಿ ಅನುಗ್ರಹಿಸಿದ್ದನು.
ಈಗ ಶ್ರುತಾಯುಧ ಆ ದಿವ್ಯ ಗದೆಯನ್ನೆತ್ತಿ ಅರ್ಜುನನ ಮೇಲರಗಲು ಬಂದಿದ್ದಾನೆ. ಪಾರ್ಥನೂ ಜಾಗರೂಕತೆಯಿಂದ ಶ್ರುತಾಯುಧನ ಘಾತಗಳನ್ನು ತಪ್ಪಿಸುತ್ತಾ ರಣ ಕೌಶಲದಿಂದ ಶ್ರುತಾಯುಧನ ಕಣ್ತಪ್ಪಿಸಿ ಪ್ರತಿದಾಳಿ ಮಾಡತೊಡಗಿದನು. ಶ್ರುತಾಯುಧನ ದಿವ್ಯ ಗಧೆಯನ್ನು ಛೇದಿಸುವುದು ದುಸ್ತರವೆ ಹೌದು. ಹಾಗಾಗಿ ಶಕ್ತಿಯ ಬದಲಾಗಿ ಯುಕ್ತಿಯಿಂದ ಹೋರಾಡುತ್ತಿದ್ದಾನೆ ಧನಂಜಯ. ಈ ಸಂದರ್ಭ ಸಹಕರಿಸುತ್ತಿದ್ದ ರಥದ ಸಾರಥಿ ಕೃಷ್ಣನತ್ತ ಶ್ರುತಾಯುಧನ ದೃಷ್ಟಿ ತಿರುಗಿತು. ನನ್ನ ಆಕ್ರಮಣವನ್ನು ತಪ್ಪಿಸುತ್ತಿರುವುದು ಈ ಕೃಷ್ಣ. ಇಲ್ಲದೆ ಹೋಗಿದ್ದರೆ ಈಗಾಗಲೆ ಅರ್ಜುನ ಸೋತು ಸತ್ತಿರುತ್ತಿದ್ದ. ಮೊದಲು ಈ ಕೃಷ್ಣನನ್ನು ಸಂಹರಿಸುವೆ ಎಂದು ನಿರ್ಧರಿಸಿದನು. ಕೋಪದ ಕೈಗೆ ಬುದ್ಧಿಯನ್ನು ನೀಡಬಾರದು ಎಂಬುವುದು ಶಾಸ್ತ್ರೋಕ್ತಿ. ಆದರೆ ಈ ಶ್ರುತಾಯುಧ ತನ್ನ ಪಿತ ವರುಣ ದೇವನ ಎಚ್ಚರಿಕೆಯ ಮಾತನ್ನು ಮರೆತು, ಯುದ್ದ ಮಾಡದ ನಿರಾಯುಧ, ರಥದ ಸಾರಥಿಯಾದ ಜನಾರ್ಧನನ ಮೇಲೆ ಪ್ರಹಾರ ಮಾಡಿದನು. ಕೃಷ್ಣ ಶರೀರವನ್ನು ಬಿಗಿಗೊಳಿಸಿ ಪ್ರಹಾರವನ್ನು ಪ್ರತಿಗ್ರಹಿಸಿದನು. ಆದರೆ ಕ್ಷಣಾರ್ಧದಲ್ಲಿ ಗದೆ ಮಾತ್ರ ವರುಣನಾಡಿದ ವಚನದಂತೆ ತನ್ನ ಕರ್ತವ್ಯ ಮಾಡಿಯೆ ಬಿಟ್ಟಿತು. ತ್ರಿಗುಣ ಬಲಯುತವಾಗಿ ಮರಳಿ ಚಿಮ್ಮಿ ಶ್ರುತಾಯುಧನನ್ನು ಘಾತಿಸಿ ನೆಲಕ್ಕಪ್ಪಳಿಸಿ ಬಿಟ್ಟಿತು. ಶ್ರುತಾಯುಧ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತೆ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಂಡನು.
ಇಷ್ಟಾಗುತ್ತಲೆ ಕಾಂಬೋಜ ದೇಶಾಧಿಪ ಸುದಕ್ಷಿಣನು ಎದುರಾದನು. ಸುದಕ್ಷಿಣನೂ ಅಮಿತ ಪರಾಕ್ರಮಿ. ಅರ್ಜುನನ ಸಮಕ್ಷ ಸಮಪ್ರಮಾಣದ ಯುದ್ದ ಮಾಡಿದ ಎಂದರೆ ಆತನಿಗದು ಅದು ವಿಶೇಷ ಪ್ರಶಸ್ತಿ. ಯುದ್ದ ಸಾಗುತ್ತಿದ್ದಂತೆ ತನ್ನ ಬತ್ತಳಿಕೆಯಿಂದ ಶಕ್ತ್ಯಾಯುಧ ಪ್ರಯೋಗಿಸಿದನು. ಅರ್ಜುನನ ಕವಚ ಭೇದಿಸಿ ಆಳಕ್ಕೆ ಹೊಕ್ಕ ಶರಾಘಾತದಿಂದ ಫಾಲ್ಗುಣ ಅರೆಕ್ಷಣ ಮೂರ್ಛಿತನಾದನು. ಕ್ಷಣಾರ್ಧದಲ್ಲಿ ಚೇತರಿಸಿ ಗಾಂಡೀವವನ್ನೆತ್ತಿ ಯುದ್ದ ಮುಂದುವರಿಸಿದನು. ಸುದಕ್ಷಿಣ ಆ ಬಳಿಕದ ತುಸು ಹೊತ್ತಿನ ಯುದ್ಧದಲ್ಲಿ ಅರ್ಜುನನಿಂದ ಸಂಹರಿಸಲ್ಪಟ್ಟನು.
ವ್ಯೂಹವನ್ನು ಭೇದಿಸುತ್ತಾ ಇನ್ನೂ ಒಳ ಹೊಕ್ಕಾಗ ಇದಿರಾದ ಅಭಿಷಾಹರು, ಶೂರಸೇನರು, ವಸಾತಿಗಳ ಆರು ಸಾವಿರ ಸೇನೆಯನ್ನು ಸವರಿ ಮತ್ತೂ ಒಂದು ಸುತ್ತು ಮುನ್ನಡೆದನು.
ಆಗ ಎದುರಾದ ನಿಯತಾಯು ದೀರ್ಘಾಯು ಮತ್ತು ಶ್ರುತಾಯುಗಳು ಅರ್ಜುನನ ಜೊತೆ ಹೋರಾಡುತ್ತಾ ಒಂದು ಹಂತದಲ್ಲಿ ಅರ್ಜುನನ್ನು ಕಂಗೆಡಿಸಿ ಶರಾಘಾತಗಳಿಂದ ಮೂರ್ಛೆಗೊಳಿಸಿದರು. ಆದರೂ ಸಹಿಸಿ ಹೋರಾಡಿದ ಅರ್ಜುನ ಅವರೆಲ್ಲರನ್ನೂ ಸಂಹರಿಸಿ, ಮತ್ತೂ ಒಳಹೊಕ್ಕನು. ಆರು ಮಹಾರಥಿಗಳ ರಕ್ಷಣೆಯ ಗರ್ಭದೊಳಗೆ ಸೂಚಿವ್ಯೂಹಾಂತರ್ಗತನಾಗಿ ಜಯದ್ರಥನಿದ್ದಾನೆ. ಹೊತ್ತು ಮಧ್ಯಾಹ್ನ ಕಳೆದು ಮುಸ್ಸಂಜೆಯಾಗುತ್ತಿದೆ. ಅರ್ಜುನನ ಪ್ರತಿಜ್ಞೆಯ ಹೊತ್ತು ಇನ್ನು ಸ್ವಲ್ಪವಷ್ಟೆ ಉಳಿದಿದೆ.
ಇತ್ತ ದ್ರೋಣಾಚಾರ್ಯರ ಜೊತೆ ದ್ರುಪದ, ದೃಷ್ಟದ್ಯುಮ್ನ, ಸಾತ್ಯಕಿ ಒಬ್ಬರ ನಂತರ ಒಬ್ಬರಂತೆ ಮಹಾ ಸಂಗ್ರಾಮ ನಿರತರಾಗಿ ವ್ಯಸ್ಥಗೊಳಿಸಿ ಕದಲದಂತೆ ತಡೆ ಹಿಡಿದಿದ್ದಾರೆಸಂಚಿಕೆ ೩೬೫ *ಮಹಾಭಾರತ*ಎರಡೂ ಸೇನೆಗಳು ಸಮಾಹಿತರಾಗಿ ಕುರುಕ್ಷೇತ್ರದಲ್ಲಿ ಇನ್ನೇನು ಈ ದಿನದ ಯುದ್ದ ಆರಂಭವಾಗುತ್ತದೆ ಎನ್ನುವಂತೆ ಇದೆ. ಇತ್ತ ಹಸ್ತಿನೆಯಲ್ಲಿ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಿದ್ದಾನೆ ” ದ್ರೋಣರಿಂದ ತಂತ್ರಪೂರ್ಣವಾಗಿ ರಚಿಸಲ್ಪಟ್ಟ ವ್ಯೂಹವನ್ನು ಭೇದಿಸಿ, ಜಯದ್ರಥನನ್ನು ತನ್ನ ಪ್ರತಿಜ್ಞೆಯಂತೆ ವಧಿಸಲು ಅರ್ಜುನ ಸಮರ್ಥನಾದಾನೇ?”ಸಂಜಯ ಉತ್ತರ ನೀಡತೊಡಗಿದ “ಮಹಾರಾಜಾ! ಅರ್ಜುನ ಮೊದಲೇ ಪುತ್ರಶೋಕದಿಂದ ಘಾಸಿಯಾಗಿ ಕೆರಳಿದ ಸಿಂಹದಂತಾಗಿದ್ದಾನೆ. ಮೇಲಾಗಿ ಶ್ರೀಕೃಷ್ಣ ಜೊತೆಗಿದ್ದಾನೆಂದರೆ ಅಸಾಧ್ಯವೆನ್ನುವುದು ಯಾವುದಿದೆ? ನಿನ್ನೆಯ ರಾತ್ರಿ ವಿಶೇಷವೊಂದು ನಡೆದು ಹೋಗಿದೆ. ಅರ್ಜುನ ಸ್ವಪ್ನದಲ್ಲಿ ಸುಪ್ತವಾಸ್ಥೆಗೆ ಜಾರಿ ಧ್ಯಾನಸ್ಥನಾಗಿ ಪರಶಿವನ ದರುಶನ ಭಾಗ್ಯ ಪಡೆದು ಮತ್ತೆ ಪಾಶುಪತಾಸ್ತ್ರದ ಪುನರ್ ಅನುಗ್ರಹ ಪಡೆದಿದ್ದಾನೆ. ಪಾಶುಪತವನ್ನು ಪಾರ್ಥ ಪ್ರಯೋಗಿಸಿದರೆ ಅದನ್ನು ತಡೆಯಲು ಶರಾದಪಿ ದ್ರೋಣರಿಗೂ ಸಾಧ್ಯವಿಲ್ಲ. ಹೀಗೆ ಒಂದೆಡೆಯಾದರೆ, ಇತ್ತ ಯುಧಿಷ್ಟಿರ ರಾತ್ರಿ ಪೂರ್ತಿ ವೇದವ್ಯಾಸರ ಜೊತೆ ಧರ್ಮ ಜಿಜ್ಞಾಸೆಯಲ್ಲಿದ್ದು ದುಃಖ ಮುಕ್ತನಾಗಿದ್ದಾನೆ. ಇಂದು ಬ್ರಾಹ್ಮೀ ಮುಹೂರ್ತದಲ್ಲಿ ವಿಧಿಪೂರ್ವಕ ಯಾಗ ಯಜ್ಞಾದಿಗಳನ್ನು ಪೂರೈಸಿ, ಯಥೇಚ್ಚ ದಾನ ಧರ್ಮಗಳನ್ನೂ ನೀಡಿದ್ದಾನೆ. ನಂತರ ಧರ್ಮರಾಯ ಶ್ರೀಕೃಷ್ಣನನ್ನು ಸಂಪ್ರಾರ್ಥಿಸಿ ಅರ್ಜುನನ ಶಪಥ ಪೂರೈಕೆಯಾಗುವಂತೆ ಅಭಯವನ್ನು ಬೇಡಿ ಹರಸಲ್ಪಟ್ಟಿದ್ದಾನೆ. ಹೀಗೆಲ್ಲಾ ಪೂರ್ವ ತಯಾರಿಗಳು ನಡೆದಿರುವಾಗ ನನಗೇಕೊ ಮತ್ತೆ ಪಾಂಡವರ ಮೇಲುಗೈಯಾಗುವ ಸಾಧ್ಯತೆ ಕಾಣುತ್ತಿದೆ. ಧರ್ಮಪಾಲಕರಾದ ಅವರ ರಕ್ಷಣೆ ಸ್ವಯಂ ಧರ್ಮವೇ ಮಾಡುತ್ತಿದೆ. ಜೊತೆಗೆ ಕೃಷ್ಣನೂ ಇದ್ದು ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ. ಹಾಗಾಗಿ ಇಂದು ದ್ರೋಣಾಚಾರ್ಯರು ವಿಕ್ರಮ ಪ್ರದರ್ಶಿಸಿ ಏನೇ ನಿರ್ನಾಮ ಕೃತ್ಯಗಳನ್ನು ಮಾಡಿದರೂ, ಅರ್ಜುನ ತನ್ನ ಪ್ರತಿಜ್ಞೆ ಪೂರೈಸುವುದನ್ನು ತಡೆಯುವುದು ಅಸಾಧ್ಯವಾಗಿ ಕಾಣುತ್ತಿದೆ” ಎಂದನು.ಕುರುಕ್ಷೇತ್ರದಲ್ಲಿ ಇತ್ತಂಡಗಳೂ ರಣೋತ್ಸಾಹ ಪ್ರದರ್ಶನ ನಿರತವಾಗಿವೆ. ಮೃದಂಗ – ನಗಾರಿ, ರಣ ಭೇರಿ ಕಹಳೆ, ಶಂಖ – ರಣವಾದ್ಯಗಳು ಮೊಳಗುತ್ತಿವೆ. ರಣಭೀಕರವಾದ ತರಂಗಗಳನ್ನು ಉತ್ಪಾದಿಸುತ್ತಿರುವ ವಾದನ, ಗರ್ಜನ, ತರ್ಜನಗಳ ಜೊತೆ ಸಿಂಹನಾದದ ರೀತಿ ಉದ್ಘೋಷ – ಜಯಕಾರಗಳೂ ಪ್ರತಿಧ್ವನಿಸುತ್ತಾ, ಯುದ್ದಾಹ್ವಾನದ ಕೂಗು ಮುಗಿಲು ಮುಟ್ಟುತ್ತಿದೆ. ನೋಡ ನೋಡುತ್ತಿದ್ದಂತೆಯೆ ಯುದ್ದ ಆರಂಭವಾಯಿತು. ಅರ್ಜುನ ವ್ಯೂಹ ಭೇದನೆಗೆ ಮಾರ್ಗ ಅರಸುತ್ತಾ ಕೃಷ್ಣನ ಜೊತೆ ತರ್ಕಿಸಿದನು. ಮೊದಲು ಕೌರವರ ವ್ಯೂಹ ಕವಚದಂತಿರುವ ಅತಿ ಬಲಾಢ್ಯನೂ ಆದ ದುರ್ಮರ್ಷಣ ಮತ್ತು ಆತನ ಗಜ ಸೈನ್ಯವನ್ನು ನಿಗ್ರಹಿಸುವ ಯೋಜನೆ ಯೋಚಿಸಿದರು. ಕೃಷ್ಣನು ಅರ್ಜುನನ ರಥವನ್ನು ದುರ್ಮರ್ಷಣನತ್ತ ನಡೆಸಿದ. ಪಾರ್ಥಸಾರಥಿಯ ಜೊತೆ ಬಂದವನೆ ಅತ್ಯುಗ್ರನಾಗಿ ವ್ಯೂಹದ ಒಳ ಹೋಗುವ ದಾರಿ ತೆರೆಯಲು ಶರವರ್ಷಗೈದನು. ಕೌರವರ ಪಾಳಯದಲ್ಲಿ ವೀರರ ಕೊರತೆ ಇದೆಯೆ? ಅಲ್ಲಿಂದಲೂ ಪ್ರತಿಯಾಗಿ ಸಾಂಘಿಕ ಹೋರಾಟ ಸಂಯೋಜಿಸಲ್ಪಟ್ಟಿತು. ಅರೆಕ್ಷಣದಲ್ಲಿ ಪಾರ್ಥನಿಗೆ ಸಮತುಲ್ಯ ಕಾಳಗ ನೀಡತೊಡಗಿದರು. ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ಮೊದಲು ಅವರ ಪ್ರತಿದಾಳಿಯನ್ನು ನಿಯಂತ್ರಿಸಿ, ತನ್ನ ಆಕ್ರಮಣವನ್ನು ಚುರುಕುಗೊಳಿಸಿ ರುದ್ರ ತಾಂಡವದಂತೆ ಧನಂಜಯ ಮೆರೆಯತೊಡಗಿದನು. ಕುರುಸೇನೆಯ ವೀರರು ಶಿರಚ್ಛೇದಿಸಲ್ಪಟ್ಟು ಧರೆಗೊರಗತೊಡಗಿದರು. ಇದಿರಾದ ಪ್ರಬಲ ದುರ್ಮರ್ಷಣನ ಜೊತೆ ಕೆಲಹೊತ್ತು ಭೀಕರ ಯುದ್ದ ಸಾಗಿತಾದರೂ, ನಿಂತು ತಡೆಯಲಾರದೆ ದುರ್ಮರ್ಷಣನ ಬಲಯುತ ಗಜಸೈನ್ಯ ಸಹಿತ ಸವರಲ್ಪಟ್ಟು ಹೆಣದ ರಾಶಿಯಾಗಿ ಹೋಯಿತು. ಆ ಕೂಡಲೆ ಕ್ರೋಧಾವೇಶಕ್ಕೆ ಒಳಗಾದ ದುಶ್ಯಾಸನ ಎದುರಾಗಿ ಬಂದು ಹೋರಾಡ ತೊಡಗಿದನು. ನಿಲ್ಲಲಾದಿತೆ? ಆತನಿಗೆ! ಇನ್ನಿಲ್ಲದಂತೆ ಗಾಯಗೊಂಡು ಬದುಕಿದರೆ ಸಾಕೆಂಬಂತೆ ಓಡಿ ಹೋಗಿ ತಪ್ಪಿಸಿಕೊಂಡ. ಸಮುದ್ರ ಮಧ್ಯದಿಂದ ಎದ್ದ ಬಿರುಗಾಳಿಯಂತೆ ಪಾರ್ಥ ಒಂದೆಡೆ ಸರ್ವನಾಶಗೈಯುತ್ತಿದ್ದಾನೆ.ಇತ್ತ ದ್ರೋಣಾಚಾರ್ಯರೂ ಕಾಳ ಭೈರವನಂತೆ ಪಾಂಡವ ಸೇನೆಯ ನಾಶಗೈಯುತ್ತಾ ಅರ್ಜುನನ್ನು ತಡೆಯಲು ಮುಂದಾಗಿ ಬಂದರು. ಕೃತವರ್ಮನೂ ಮಹಾ ವಿಕ್ರಮಿ. ತನ್ನ ಯಾದವ ಸೇನೆ ಮತ್ತು ನಾರಾಯಣಿ ಸೇನೆಯನ್ನೂ ಜೊತೆಯಾಗಿಸಿ ದ್ರೋಣಾಚಾರ್ಯರ ಸಹಾಯಕನಾಗಿ ಪಾರ್ಥನನ್ನು ತಡೆಯಲು ಮುನ್ನುಗ್ಗಿದನು. ಅರ್ಜುನ ಏಕಕಾಲದಲ್ಲಿ ಮಹಾರಥಿಗಳಾದ ದ್ರೋಣಾಚಾರ್ಯ ಮತ್ತು ಕೃತವರ್ಮನನ್ನು ಎದುರಿಸಿ ಹೋರಾಡತೊಡಗಿದನು. ಘನಘೋರ ಸಂಗ್ರಾಮ ಏರ್ಪಟ್ಟಿತು. ಗುರು ದ್ರೋಣರಿಗೂ ಒಂದು ಹಂತದಲ್ಲಿ ಏನು ಮಾಡಿದರೂ ಅರ್ಜುನನ್ನು ನಿಯಂತ್ರಿಸಲಾಗದ ಸ್ಥಿತಿ ನಿರ್ಮಾಣವಾಯಿತು. ಕೃತವರ್ಮನೂ ಸಮದಂಡಿಯಾಗಿ ಅದ್ಬುತ ಸಾಹಸವನ್ನು ಮೆರೆಯತೊಡಗಿದ್ದಾನೆ. ಆಗ ಶ್ರೀ ಕೃಷ್ಣ “ಪಾರ್ಥಾ! ನೀನೇಕೆ ಕೃತವರ್ಮನಿಗೆ ಈ ರೀತಿ ಅವಕಾಶ ನೀಡುತ್ತಿರುವೆ? ಯಾದವನೆಂಬ ಮಮಕಾರವೊ? ಅಲ್ಲಾ ನನ್ನ ಸಂಬಂಧಿ ಆತನೆಂಬ ಪ್ರೀತಿಯೊ? ಇಲ್ಲಿ ಹೆಚ್ಚಿನ ವೈರಿಗಳು ನಮ್ಮ ಆಪ್ತ ಸಂಬಂಧಿಕರು! ಆದರೆ ರಣರಂಗದಲ್ಲಿ ಸಂಬಂಧವಿಲ್ಲ. ನಿನ್ನ ಮಗನನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ. ನೀನೇಕೆ ತಡವರಿಸುತ್ತಿರುವೆ?” ಎಂದು ಕುಟುಕಿದನು. ಆ ಕೂಡಲೆ ಭಯಂಕರನಾಗಿ ಎರಗಿದ ಪಾರ್ಥ ತೀಕ್ಷ್ಣ ಶರಗಳಿಂದ ಕೃತವರ್ಮನನ್ನು ಘಾತಿಸಿ ಮೂರ್ಛೆಗೊಳಿಸಿ ಧರೆಗುರುಳಿಸಿದ. ಅರ್ಜುನ ಇಲ್ಲಿ ಕೃತವರ್ಮನ ಬಗ್ಗೆ ಮನದ ಯಾವುದೊ ಮೂಲೆಯಿಂದ ಮಮತೆ ತೋರಿ ಜೀವದಾನ ನೀಡಿದ ಎನ್ನಬಹುದು. ಬಳಿಕ ದ್ರೋಣರನ್ನೂ ವಿಮುಖಗೊಳಿಸಿ ಬಿಟ್ಟನು ಕಲಿ ಪಾರ್ಥ.ಕ್ಷಣಾರ್ಧದಲ್ಲಿ ಮುನ್ನುಗ್ಗಿದ ಅರ್ಜುನನ ರಥ ವ್ಯೂಹ ಭೇದಿಸಿ ಒಳನುಗ್ಗಿತು. ಈವರೆಗೆ ರಥರಕ್ಷಕರಾಗಿದ್ದ ಯುಧಾಮನ್ಯು ಮತ್ತು ಉತ್ತಮೌಜಸರಿಗೆ ಪಾರ್ಥನ ರಥದ ಗತಿಯನ್ನು ಅನುಸರಿಸಿ ನುಗ್ಗಲಾರದೆ ಹೊರ ಉಳಿದರು. ಎಷ್ಟು ಪ್ರಯತ್ನಿಸಿದರೂ ಒಳ ನುಸುಳಲಾಗಲಿಲ್ಲ.ಕೃಷ್ಣಾರ್ಜುನರು ಬಾಳೆತೋಟ ಹೊಕ್ಕ ಮದಕರಿಯಂತೆ ಸರ್ವನಾಶ ಗೈಯುತ್ತಾ ಸಾಗುವಾಗ ಎದುರಾದವನು ಅತುಲ ವಿಕ್ರಮಿ ಶ್ರುತಾಯುಧ. ಈ ಶ್ರುತಾಯುಧ ಅಸಾಮಾನ್ಯ ವೀರನೂ – ಅಜೇಯನೂ ಹೌದು. ಅತಿ ದೊಡ್ಡ ಧನುಸ್ಸನ್ನು ಹೊಂದಿದ್ದ ಶ್ರುತಾಯುಧ ಟೇಂಕಾರಗೈದು ಪಾರ್ಥನಿಗೆ ಯುದ್ದಾಹ್ವಾನ ನೀಡಿದನು. ಸಮರ ಸಾಗಿತು, ಭೀಕರ ಯುದ್ಧವನ್ನು ಮಾಡಿದನಾದರೂ ಸವ್ಯಸಾಚಿಗೆ ಸಮನಾಗುವನೆ? ಅರ್ಜುನ ಶ್ರುತಾಯುಧನ ದೀರ್ಘ ಧನುಸ್ಸನ್ನು ಛೇದಿಸಿ ಬಿಟ್ಟನು. ಮತ್ತೆ ಹೊಸತಾದ ಉತ್ತಮ ಧನುಸ್ಸನ್ನು ಕೈಗೆತ್ತಿಕೊಂಡು ಯುದ್ದ ಮುಂದುವರಿಸಿದ. ಆದರೆ ಆಗಲೂ ಅರ್ಜುನ ಗೆಲ್ಲತೊಡಗಿದ. ಮತ್ತೆ ಹೊಸ ಧನುಸ್ಸನ್ನೂ ತುಂಡರಿಸಿದ ಪಾರ್ಥ, ಶ್ರುತಾಯುಧನ ರಥ ತುರಗಗಳನ್ನೂ ಪುಡಿಗಟ್ಟಿ ಬೀಳಿಸಿದನು. ಆ ಕೂಡಲೆ ಉದ್ರಿಕ್ತನಾದ ಶ್ರುತಾಯುಧ ತನ್ನ ದಿವ್ಯ ಗದೆಯನ್ನು ಹಿಡಿದು ಆಕ್ರಮಣಕ್ಕೆ ಮುಂದಾದನು. ಈ *ಶ್ರುತಾಯುಧ ಸಾಮಾನ್ಯನಲ್ಲ. ಆತ ವರುಣನ ಮಗ. ಪರ್ಣಾಶಾ ಎಂಬ ಮಹಾನದಿ ಆತನ ತಾಯಿ.* ಹೀಗೆ ಅತಿಮಾನುಷನಾಗಿ ಹುಟ್ಟು ಪಡೆದವನು ಶ್ರುತಾಯುಧ. ಅವನ ತಾಯಿಯಾದ ಪರ್ಣಾಶಾಳು ಮಗನ ಉಜ್ವಲ ಭವಿಷ್ಯ ಮತ್ತು ಭದ್ರತೆಗಾಗಿ ವರುಣನನ್ನು ಪ್ರಾರ್ಥಿಸಿ ವರ ಬೇಡಿದ್ದಳು. ಪ್ರಸನ್ನನಾಗಿ ವರುಣ ವರಪ್ರದನಾದಾಗ “ಸ್ವಾಮಿ ನಮ್ಮ ಮಗ ಶತ್ರುಗಳಿಂದ ಅವಧ್ಯನಾಗಲಿ” ಎಂದು ಪ್ರಾರ್ಥಿಸಿದಳು. ಆಗ ವರುಣನು “ಪರ್ಣಾಶಾ! ನಮ್ಮ ಮಗ ಮಾನವನಾಗಿ ಹುಟ್ಟಿ ಬೆಳೆಯಲಿದ್ದಾನೆ. ಹಾಗಾಗಿ ಅಮರತ್ವ ಸಾಧ್ಯವಿಲ್ಲ. ನಿನ್ನ ಸಂತೋಷಕ್ಕಾಗಿ ದಿವ್ಯ ಗದೆಯನ್ನು ಆತನಿಗೆ ನೀಡುತ್ತೇನೆ. ಯುದ್ದದಲ್ಲಿ ನಮ್ಮ ಮಗ ಗದಾಧಾರಿಯಾಗಿ ಹೋರಾಡುವಾಗ ಆತನಿಗೆ ವಿಜಯ ಪ್ರಾಪ್ತವಾಗಲಿದೆ.” ಎಂದು ಹೇಳಿ ಮಗನನ್ನು ಕರೆದು “ಮಗ ಶ್ರುತಾಯುಧ, ನಿನಗೆ ದಿವ್ಯವಾದ ಈ ಗದೆಯನ್ನು ಅನುಗ್ರಹಿಸಿ ನೀಡುತ್ತಿದ್ದೇನೆ. ಆದರೆ ಇದರ ಬಳಕೆಗೆ ಒಂದು ನಿಬಂಧನೆ ಇದೆ, ನಿನ್ನ ಮೇಲೆ ಆಯುಧಧಾರಿಯಾಗಿ ಆಕ್ರಮಿಸುತ್ತಿರುವವರ ಮೇಲೆ ಘಾತಿಸು. ಜಯ ನಿನಗೊದಗುತ್ತದೆ. ಆದರೆ ನಿರಾಯುಧರ, ಯುದ್ದ ಮಾಡದೆ ಅನ್ಯ ಕರ್ಮ ನಿರತರಾಗಿರುವವರ ಮೇಲೆ ಪ್ರಯೋಗಿಸಿದರೆ ಆಗ ಈ ಗದೆ ತಿರುಗಿ ಬಂದು ಪ್ರಯೋಗಿಸಿದ ನಿನ್ನನ್ನು ಪ್ರತಿಘಾತಗೊಳಿಸಿ ಅಂತ್ಯಗೊಳಿಸುತ್ತದೆ. ಹಾಗಾಗಿ ಧರ್ಮಯುಕ್ತವಾಗಿ ಈ ಆಯುಧವನ್ನು ಬಳಸಬೇಕು” ಹೀಗೆ ಯುಕ್ತ ಧರ್ಮವನ್ನು ಉಪದೇಶಿಸಿ ಅನುಗ್ರಹಿಸಿದ್ದನು. ಈಗ ಶ್ರುತಾಯುಧ ಆ ದಿವ್ಯ ಗದೆಯನ್ನೆತ್ತಿ ಅರ್ಜುನನ ಮೇಲರಗಲು ಬಂದಿದ್ದಾನೆ. ಪಾರ್ಥನೂ ಜಾಗರೂಕತೆಯಿಂದ ಶ್ರುತಾಯುಧನ ಘಾತಗಳನ್ನು ತಪ್ಪಿಸುತ್ತಾ ರಣ ಕೌಶಲದಿಂದ ಶ್ರುತಾಯುಧನ ಕಣ್ತಪ್ಪಿಸಿ ಪ್ರತಿದಾಳಿ ಮಾಡತೊಡಗಿದನು. ಶ್ರುತಾಯುಧನ ದಿವ್ಯ ಗಧೆಯನ್ನು ಛೇದಿಸುವುದು ದುಸ್ತರವೆ ಹೌದು. ಹಾಗಾಗಿ ಶಕ್ತಿಯ ಬದಲಾಗಿ ಯುಕ್ತಿಯಿಂದ ಹೋರಾಡುತ್ತಿದ್ದಾನೆ ಧನಂಜಯ. ಈ ಸಂದರ್ಭ ಸಹಕರಿಸುತ್ತಿದ್ದ ರಥದ ಸಾರಥಿ ಕೃಷ್ಣನತ್ತ ಶ್ರುತಾಯುಧನ ದೃಷ್ಟಿ ತಿರುಗಿತು. ನನ್ನ ಆಕ್ರಮಣವನ್ನು ತಪ್ಪಿಸುತ್ತಿರುವುದು ಈ ಕೃಷ್ಣ. ಇಲ್ಲದೆ ಹೋಗಿದ್ದರೆ ಈಗಾಗಲೆ ಅರ್ಜುನ ಸೋತು ಸತ್ತಿರುತ್ತಿದ್ದ. ಮೊದಲು ಈ ಕೃಷ್ಣನನ್ನು ಸಂಹರಿಸುವೆ ಎಂದು ನಿರ್ಧರಿಸಿದನು. ಕೋಪದ ಕೈಗೆ ಬುದ್ಧಿಯನ್ನು ನೀಡಬಾರದು ಎಂಬುವುದು ಶಾಸ್ತ್ರೋಕ್ತಿ. ಆದರೆ ಈ ಶ್ರುತಾಯುಧ ತನ್ನ ಪಿತ ವರುಣ ದೇವನ ಎಚ್ಚರಿಕೆಯ ಮಾತನ್ನು ಮರೆತು, ಯುದ್ದ ಮಾಡದ ನಿರಾಯುಧ, ರಥದ ಸಾರಥಿಯಾದ ಜನಾರ್ಧನನ ಮೇಲೆ ಪ್ರಹಾರ ಮಾಡಿದನು. ಕೃಷ್ಣ ಶರೀರವನ್ನು ಬಿಗಿಗೊಳಿಸಿ ಪ್ರಹಾರವನ್ನು ಪ್ರತಿಗ್ರಹಿಸಿದನು. ಆದರೆ ಕ್ಷಣಾರ್ಧದಲ್ಲಿ ಗದೆ ಮಾತ್ರ ವರುಣನಾಡಿದ ವಚನದಂತೆ ತನ್ನ ಕರ್ತವ್ಯ ಮಾಡಿಯೆ ಬಿಟ್ಟಿತು. ತ್ರಿಗುಣ ಬಲಯುತವಾಗಿ ಮರಳಿ ಚಿಮ್ಮಿ ಶ್ರುತಾಯುಧನನ್ನು ಘಾತಿಸಿ ನೆಲಕ್ಕಪ್ಪಳಿಸಿ ಬಿಟ್ಟಿತು. ಶ್ರುತಾಯುಧ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತೆ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಂಡನು.ಇಷ್ಟಾಗುತ್ತಲೆ ಕಾಂಬೋಜ ದೇಶಾಧಿಪ ಸುದಕ್ಷಿಣನು ಎದುರಾದನು. ಸುದಕ್ಷಿಣನೂ ಅಮಿತ ಪರಾಕ್ರಮಿ. ಅರ್ಜುನನ ಸಮಕ್ಷ ಸಮಪ್ರಮಾಣದ ಯುದ್ದ ಮಾಡಿದ ಎಂದರೆ ಆತನಿಗದು ಅದು ವಿಶೇಷ ಪ್ರಶಸ್ತಿ. ಯುದ್ದ ಸಾಗುತ್ತಿದ್ದಂತೆ ತನ್ನ ಬತ್ತಳಿಕೆಯಿಂದ ಶಕ್ತ್ಯಾಯುಧ ಪ್ರಯೋಗಿಸಿದನು. ಅರ್ಜುನನ ಕವಚ ಭೇದಿಸಿ ಆಳಕ್ಕೆ ಹೊಕ್ಕ ಶರಾಘಾತದಿಂದ ಫಾಲ್ಗುಣ ಅರೆಕ್ಷಣ ಮೂರ್ಛಿತನಾದನು. ಕ್ಷಣಾರ್ಧದಲ್ಲಿ ಚೇತರಿಸಿ ಗಾಂಡೀವವನ್ನೆತ್ತಿ ಯುದ್ದ ಮುಂದುವರಿಸಿದನು. ಸುದಕ್ಷಿಣ ಆ ಬಳಿಕದ ತುಸು ಹೊತ್ತಿನ ಯುದ್ಧದಲ್ಲಿ ಅರ್ಜುನನಿಂದ ಸಂಹರಿಸಲ್ಪಟ್ಟನು. ವ್ಯೂಹವನ್ನು ಭೇದಿಸುತ್ತಾ ಇನ್ನೂ ಒಳ ಹೊಕ್ಕಾಗ ಇದಿರಾದ ಅಭಿಷಾಹರು, ಶೂರಸೇನರು, ವಸಾತಿಗಳ ಆರು ಸಾವಿರ ಸೇನೆಯನ್ನು ಸವರಿ ಮತ್ತೂ ಒಂದು ಸುತ್ತು ಮುನ್ನಡೆದನು.ಆಗ ಎದುರಾದ ನಿಯತಾಯು ದೀರ್ಘಾಯು ಮತ್ತು ಶ್ರುತಾಯುಗಳು ಅರ್ಜುನನ ಜೊತೆ ಹೋರಾಡುತ್ತಾ ಒಂದು ಹಂತದಲ್ಲಿ ಅರ್ಜುನನ್ನು ಕಂಗೆಡಿಸಿ ಶರಾಘಾತಗಳಿಂದ ಮೂರ್ಛೆಗೊಳಿಸಿದರು. ಆದರೂ ಸಹಿಸಿ ಹೋರಾಡಿದ ಅರ್ಜುನ ಅವರೆಲ್ಲರನ್ನೂ ಸಂಹರಿಸಿ, ಮತ್ತೂ ಒಳಹೊಕ್ಕನು. ಆರು ಮಹಾರಥಿಗಳ ರಕ್ಷಣೆಯ ಗರ್ಭದೊಳಗೆ ಸೂಚಿವ್ಯೂಹಾಂತರ್ಗತನಾಗಿ ಜಯದ್ರಥನಿದ್ದಾನೆ. ಹೊತ್ತು ಮಧ್ಯಾಹ್ನ ಕಳೆದು ಮುಸ್ಸಂಜೆಯಾಗುತ್ತಿದೆ. ಅರ್ಜುನನ ಪ್ರತಿಜ್ಞೆಯ ಹೊತ್ತು ಇನ್ನು ಸ್ವಲ್ಪವಷ್ಟೆ ಉಳಿದಿದೆ.ಇತ್ತ ದ್ರೋಣಾಚಾರ್ಯರ ಜೊತೆ ದ್ರುಪದ, ದೃಷ್ಟದ್ಯುಮ್ನ, ಸಾತ್ಯಕಿ ಒಬ್ಬರ ನಂತರ ಒಬ್ಬರಂತೆ ಮಹಾ ಸಂಗ್ರಾಮ ನಿರತರಾಗಿ ವ್ಯಸ್ಥಗೊಳಿಸಿ ಕದಲದಂತೆ ತಡೆ ಹಿಡಿದಿದ್ದಾರೆ.ಮುಂದುವರಿಯುವುದು…✍🏻ಭರತೇಶ್ ಶೆಟ್ಟಿ ಎಕ್ಕಾರ್
ಮುಂದುವರಿಯುವುದು…





