ಭಾಗ – 296
ಭರತೇಶ ಶೆಟ್ಟಿ, ಎಕ್ಕಾರ್

ಬಹು ವಿಸ್ತಾರವಾಗಿ ಗತ ಅಪರಾಧಗಳನ್ನೂ ಅಪವಾದಗಳನ್ನೂ ವಿಶ್ಲೇಷಿಸಿ ಈ ತನಕ ಕೌರವರಿಂದ ಏನೆಲ್ಲಾ ಪಾತಕಗಳಾಗಿದೆಯೊ ಅದೆಲ್ಲವನ್ನು ಸಹಿಸಿಕೊಂಡು ಪಾಂಡವರು ಲೋಕದ ಶಾಂತಿಯನ್ನು ಬಯಸಿ ತಮ್ಮ ಸ್ವಂತ ಸ್ವಾರ್ಥ ತ್ಯಾಗ ಮಾಡಿ, ಶ್ರೀ ಕೃಷ್ಣನ ಮುಖೇನ ಮುಂದಾಗಿರುವ ಸಂಧಾನ, ಮತ್ತು ಧರ್ಮ ಮಾರ್ಗದಲ್ಲಿ ಕ್ರಮಿಸಿ ಧರ್ಮಾರ್ಥ ಸಮ್ಮತವಾಗಿ ವಾಸುದೇವನ ಘನ ದಿವ್ಯೋಪದೇಶ ಮತ್ತು ಪರಿಣಾಮಗಳ ಸತ್ಯದರ್ಶನ ವಿಚಾರ ಮಂಡನೆ ಋಷಿ ಮುನಿಗಳಿಂದಲೂ, ಸೇರಿದ ರಾಜರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು. ಹಸ್ತಿನೆಯ ವಿಸ್ತಾರ ಸಾಮ್ರಾಜ್ಯದಲ್ಲಿ ಕೇವಲ ಐದು ಗ್ರಾಮಗಳಿಗಾಗಿ ಯುದ್ದ ಮಾಡುವ ಅನಿವಾರ್ಯತೆ ಇಲ್ಲ. ಸರ್ವವಿಧದಿಂದಲೂ, ನ್ಯಾಯದಿಂದಲೂ ಪಾಂಡವರ ಬೇಡಿಕೆ ಮಾನ್ಯವಾಗಿ ಒಪ್ಪಬಹುದಾದದ್ದು ಎಂದಾಯಿತು. ಶ್ರೀಕೃಷ್ಣನನ್ನು ಮತ್ತು ಆತನ ಧರ್ಮೋಪದೇಶಯುಕ್ತವಾದ ಕಟುಸತ್ಯ ಮಂಡನೆಯನ್ನು ಎಲ್ಲರೂ ಮೆಚ್ಚಿದರು.
ಧೃತರಾಷ್ಟ್ರನು ” ಕೃಷ್ಣಾ! ನಿನ್ನ ಮಾತು ಸತ್ಯವೂ,ಧರ್ಮ ಯುಕ್ತವೂ, ನ್ಯಾಯ ಸಮ್ಮತವೂ ಆಗಿದೆ. ಧರ್ಮರಾಯ ನನ್ನ ಕೋರಿಕೆಯಂತೆ ಕುಲದ ಶ್ರೇಯಸ್ಸಿಗೆ ಮಹತ್ತರ ತ್ಯಾಗಕ್ಕೆ ಮುಂದಾಗಿರುವುದು ಸರ್ವವಿಧದಿಂದಲೂ ವೇದ್ಯವಾಗಿದೆ. ಧರ್ಮವನ್ನು ಬಯಸುವವನಾದ ಆತನಿಗೆ ಭೂಷಣಪ್ರದವಾಗಿದೆ. ಆದರೆ ಈ ವಿಚಾರದಲ್ಲಿ ನನಗಿಲ್ಲಿ ಸ್ವಾತಂತ್ರ್ಯ ಇಲ್ಲವಾಗಿ ಹೋಗಿದೆ. ಪುತ್ರ ವ್ಯಾಮೋಹದ ಬಂಧನಕ್ಕೊಳಗಾಗಿ ಆರಂಭದಲ್ಲಿ ನನ್ನ ಮಗನ ಆಸೆ ಪೂರೈಸಲಿ ಎಂದು ಬಯಸಿದೆ. ತಪ್ಪೆಲ್ಲವೂ ನನ್ನದ್ದು ಎಂದು ನನಗೆ ಅರಿವಾಗುತ್ತಿದೆ. ಈಗ ಕಾಲ ಮಿಂಚಿ ಹೋಗಿದೆ. ನನ್ನ ಮಗನಾದರೂ ಈಗ ನನ್ನ ಮಾತು ಕೇಳದೆ ತನ್ನ ಹಠ ಸಾಧನೆಯಲ್ಲಿ ಮುಂದುವರಿಯುತ್ತಿದ್ದಾನೆ. ಧರ್ಮರಾಯನ ಕಡೆಯಿಂದ ಸಂಧಾನಕಾರನಾಗಿ ಬಂದಿರುವ ನೀನು ಸರ್ವ ಸಮರ್ಥನಾಗಿರುವೆ. ನನ್ನ ಮಗನನ್ನು ಒಪ್ಪಿಸಿ ಅವನನ್ನು ಉಳಿಸಿಕೊಡು ಎಂದು ನಿನ್ನಲ್ಲಿ ಬೇಡುತ್ತಿದ್ದೇನೆ. ನನ್ನ ಮಗ ಛಲವನ್ನು ತೊರೆದು ಸಂಧಾನಕ್ಕೆ ಒಪ್ಪುವಂತೆ ಮಾಡುವ ಜವಾಬ್ದಾರಿಯನ್ನು ನಿನಗೆ ವಹಿಸುತ್ತಿದ್ದೇನೆ.” ಎಂದು ಮಮ್ಮಲ ಮರುಗಿ ವಿನಂತಿಸಿದನು.
ಶ್ರೀಕೃಷ್ಣನು ಹಾಗೆಯೆ ಆಗಲಿ ಎಂದು ಪ್ರಯತ್ನಿಸಲು ಸಿದ್ದನಾದನು. “ಹೇ ಸುಯೋಧನಾ! ವೃದ್ಧನೂ, ಅಂಧನೂ, ನಮಗೆಲ್ಲರಿಗೂ ಹಿರಿಯನಾಗಿ ಪೂಜ್ಯ ಸ್ಥಾನ ದಲ್ಲಿರುವ ನಿನ್ನ ಪಿತನ ಮಾತನ್ನು ಕೇಳಿದೆಯಾ? ಪುನ್ನಾಮವೆಂಬ ಮಹಾ ನರಕದಿಂದ ತಂದೆಯನ್ನು ಉದ್ದರಿಸಿ ಎತ್ತಬಲ್ಲಬಲ್ಲವನು ನಿಜಾರ್ಥದಲ್ಲಿ ಸುತನಾಗುತ್ತಾನೆ. ನೀನು ಈ ವಿಚಾರ ತಿಳಿಯದವನಲ್ಲ, ತಂದೆಯ ಅಪೂರ್ಣ ಸದಾಶಯಗಳನ್ನು ಪೂರೈಸಿ ಸಂತೃಪ್ತಿ ಒದಗಿಸುವುದು ನಿನಗೆ ಧರ್ಮ. ಶಾಸ್ತ್ರ ಅಧ್ಯಯನ ಮಾಡಿ ನಿನಗೆ ಈ ವಿಚಾರ ತಿಳಿದಿದೆ. ರಾಜನೀತಿಯಲ್ಲೂ ನೀನು ಪರಿಣತನೇ ಹೌದು. ನಿನ್ನಂತಹವನು ದುರ್ಯಶಸ್ಸನ್ನು ಹೊಂದಬಾರದು. ತಂದೆಯಾದವನು ಮಗ ತನ್ನ ಮಾತು ಕೇಳುವುದಿಲ್ಲ – ಎನ್ನುವಷ್ಟರವರೆಗೆ ನೀನು ಬೆಳೆಯಕೂಡದು. ಇಲ್ಲಿ ಅತಿಕ್ರಮಣ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಮ್ಮ ವಂಶಜನಾದ ಪೂರು ತಂದೆಯ ಆಸೆ ಈಡೇರಿಸಲು ತನ್ನ ಯೌವನವನ್ನು ಧಾರೆಯೆರೆದ ಕಾರಣದಿಂದ ಕಾಲಾಂತರದಲ್ಲಿ ಪೂರ್ಣಾಧಿಕಾರ ಪಡೆದನು. ಇದೋ ಪಿತಾಮಹ ಭೀಷ್ಮಾಚಾರ್ಯರೂ ತನ್ನ ತಂದೆಯ ಸಂತೋಷಕ್ಕೋಸ್ಕರ ತನ್ನ ಸುಖವನ್ನು ತ್ಯಾಗಮಾಡಿ ಬ್ರಹ್ಮಚಾರಿಯಾಗಿದ್ದಾರೆ. ಅಂತಹ ಆದರ್ಶಗಳಿರುವ ವಂಶಜನಾದ ನಿನಗೆ ಎದುರಾಗಿರುವುದು ಸರಳವೂ ಸಮ್ಮತವೂ ಆಗಿರುವ ವಿಚಾರದ ಒಪ್ಪಿಗೆ. ಸಂಚಿಕೆ ೨೯೭ ಮಹಾಭಾರತ
ಬಹು ವಿಸ್ತಾರವಾಗಿ ಗತ ಅಪರಾಧಗಳನ್ನೂ ಅಪವಾದಗಳನ್ನೂ ವಿಶ್ಲೇಷಿಸಿ ಈ ವರೆಗೆ ಕೌರವರಿಂದ ಏನೆಲ್ಲಾ ಪಾತಕಗಳಾಗಿದೆಯೋ ಅದೆಲ್ಲವನ್ನೂ ಸಹಿಸಿಕೊಂಡು ಪಾಂಡವರು ಲೋಕದ ಶಾಂತಿಯನ್ನೇ ಬಯಸಿ ತಮ್ಮ ಸ್ವಂತ ಸ್ವಾರ್ಥ ತ್ಯಾಗ ಮಾಡಿ, ಶ್ರೀ ಕೃಷ್ಣನ ಮುಖೇನ ಮುಂದಾಗಿರುವ ಸಂಧಾನ, ಮತ್ತು ಧರ್ಮ ಮಾರ್ಗದಲ್ಲೇ ಕ್ರಮಿಸಿ ಧರ್ಮಾರ್ಥ ಸಮ್ಮತವಾಗಿ ವಾಸುದೇವನ ಘನ ದಿವ್ಯೋಪದೇಶ ಮತ್ತು ಪರಿಣಾಮಗಳ ಸತ್ಯದರ್ಶನ ವಿಚಾರ ಮಂಡನೆ ಋಷಿ ಮುನಿಗಳಿಂದಲೂ, ಸೇರಿದ ರಾಜರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು. ಹಸ್ತಿನೆಯ ವಿಸ್ತಾರ ಸಾಮ್ರಾಜ್ಯದಲ್ಲಿ ಕೇವಲ ಐದು ಗ್ರಾಮಗಳಿಗಾಗಿ ಯುದ್ದ ಮಾಡುವ ಅನಿವಾರ್ಯತೆ ಇಲ್ಲ. ಸರ್ವವಿಧದಿಂದಲೂ, ನ್ಯಾಯದಿಂದಲೂ ಪಾಂಡವರ ಬೇಡಿಕೆ ಮಾನ್ಯವಾಗಿ ಒಪ್ಪಬಹುದಾದದ್ದೇ ಎಂದಾಯಿತು. ಶ್ರೀಕೃಷ್ಣನನ್ನು ಮತ್ತು ಆತನ ಧರ್ಮೋಪದೇಶಯುಕ್ತವಾದ ಕಟುಸತ್ಯ ಮಂಡನೆಯನ್ನು ಎಲ್ಲರೂ ಮೆಚ್ಚಿದರು.
ಧೃತರಾಷ್ಟ್ರನು ” ಕೃಷ್ಣಾ! ನಿನ್ನ ಮಾತೆಲ್ಲವೂ ಸತ್ಯವೂ,ಧರ್ಮ ಯುಕ್ತವೂ, ನ್ಯಾಯ ಸಮ್ಮತವೂ ಆಗಿದೆ. ಧರ್ಮರಾಯ ನನ್ನ ಕೋರಿಕೆಯಂತೆ ಕುಲದ ಶ್ರೇಯಸ್ಸಿಗೆ ಮಹತ್ತರ ತ್ಯಾಗಕ್ಕೇ ಮುಂದಾಗಿರುವುದು ಸರ್ವವಿಧದಿಂದಲೂ ವೇದ್ಯವಾಗಿದೆ. ಧರ್ಮವನ್ನೇ ಬಯಸುವವನಾದ ಆತನಿಗೆ ಭೂಷಣಪ್ರದವೇ ಆಗಿದೆ. ಆದರೆ ಈ ವಿಚಾರದಲ್ಲಿ ನನಗಿಲ್ಲಿ ಸ್ವಾತಂತ್ರ್ಯವೇ ಇಲ್ಲವಾಗಿ ಹೋಗಿದೆ. ಪುತ್ರವ್ಯಾಮೋಹದ ಬಂಧನಕ್ಕೊಳಗಾಗಿ ಆರಂಭದಲ್ಲಿ ನನ್ನ ಮಗನ ಆಶೆ ಪೂರೈಸಲಿ ಎಂದು ಬಯಸಿದೆ. ತಪ್ಪೆಲ್ಲವೂ ನನ್ನದೇ ಎಂದು ನನಗೆ ಅರಿವಾಗುತ್ತಿದೆ. ಈಗ ಕಾಲ ಮಿಂಚಿ ಹೋಗಿದೆ. ನನ್ನದೇ ಮಗನಾದರೂ ಈಗ ನನ್ನ ಮಾತು ಕೇಳದೆ ತನ್ನ ಹಠ ಸಾಧನೆಯಲ್ಲೇ ಮುಂದುವರಿಯುತ್ತಿದ್ದಾನೆ. ಧರ್ಮರಾಯನ ಕಡೆಯಿಂದ ಸಂಧಾನಕಾರನಾಗಿ ಬಂದಿರುವ ನೀನು ಸರ್ವ ಸಮರ್ಥನೇ ಆಗಿರುವೆ. ನನ್ನ ಮಗನನ್ನೂ ಒಪ್ಪಿಸಿ ಅವನನ್ನೂ ಉಳಿಸಿಕೊಡೆಂದು ನಿನ್ನಲ್ಲಿ ಬೇಡುತ್ತಿದ್ದೇನೆ. ನನ್ನ ಮಗ ಛಲವನ್ನು ತೊರೆದು ಸಂಧಾನಕ್ಕೆ ಒಪ್ಪುವಂತೆ ಮಾಡುವ ಜವಾಬ್ದಾರಿಯನ್ನು ನಿನಗೇಎ ವಹಿಸುತ್ತಿದ್ದೇನೆ. ಪುತ್ರನ ಮೇಲೆ ನನಗೆ ಪ್ರೀತಿಯಿದೆ, ಆತನನ್ನು ಉಳಿಸಿಕೊಡೆಂದು ನಿನ್ನಲ್ಲೇ ಪ್ರಾರ್ಥಿಸುತ್ತಿದ್ದೇನೆ.” ಎಂದು ಮಮ್ಮಲ ಮರುಗಿ ವಿನಂತಿಸಿದ.
ಶ್ರೀಕೃಷ್ಣನು ಹಾಗೆಯೇ ಆಗಲಿ ಎಂದು ಪ್ರಯತ್ನಿಸಲು ಸಿದ್ದನಾದ “ಹೇ ಸುಯೋಧನಾ! ವೃದ್ಧನೂ, ಅಂಧನೂ, ನಮಗೆಲ್ಲರಿಗೂ ಹಿರಿಯನಾಗಿ ಪೂಜ್ಯ ಸ್ಥಾನ ದಲ್ಲಿರುವ ನಿನ್ನ ಪಿತನ ಮಾತನ್ನು ಕೇಳಿದೆಯಾ? ಪುನ್ನಾಮವೆಂಬ ಮಹಾ ನರಕದಿಂದ ತಂದೆಯನ್ನು ಉದ್ದರಿಸಿ ಎತ್ತಬಲ್ಲಬಲ್ಲವನೇ ನಿಜಾರ್ಥದಲ್ಲಿ ಸುತನಾಗುತ್ತಾನೆ. ನೀನೇನೂ ತಿಳಿಯದವನಲ್ಲ, ತಂದೆಯ ಅಪೂರ್ಣ ಸದಶಯಗಳನ್ನು ಪೂರೈಸಿ ಸಂತೃಪ್ತಿ ಒದಗಿಸುವುದು ನಿನಗೆ ಧರ್ಮ. ಶಾಸ್ತ್ರ ಅಧ್ಯಯನ ಮಾಡಿ ನಿನಗೆ ಈ ವಿಚಾರ ತಿಳಿದೇ ಇದೆ. ರಾಜನೀತಿಯಲ್ಲೂ ನೀನು ಪರಿಣತನೇ ಹೌದು. ನಿನ್ನಂತಹವನು ದುರ್ಯಶಸ್ಸನ್ನು ಹೊಂದಬಾರದು. ತಂದೆಯಾದವನು ತನ್ನ ಮಗ ನನ್ನ ಮಾತು ಕೇಳುವುದಿಲ್ಲ – ಎನ್ನುವಷ್ಟರವರೆಗೆ ನೀನು ಬೆಳೆಯಕೂಡದು. ಇಲ್ಲಿ ಅತಿಕ್ರಮಣ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಮ್ಮ ವಂಶಜನಾದ ಪೂರು ತಂದೆಯ ಆಸೆ ಈಡೇರಿಸಲು ತನ್ನ ಯೌವನವನ್ನೇ ಧಾರೆಯೆರೆದ ಕಾರಣದಿಂದ ಕಾಲಾಂತರದಲ್ಲಿ ಪೂರ್ಣಾಧಿಕಾರ ಪಡೆದ. ಇದೋ ಪಿತಾಮಹ ಭೀಷ್ಮಾಚಾರ್ಯರೂ ತಂದೆಯ ಸಂತೋಷಕ್ಕೋಸ್ಕರ ತನ್ನ ಸುಖವನ್ನು ತ್ಯಾಗಮಾಡಿ ಬ್ರಹ್ಮಚಾರಿಯಾಗಿದ್ದಾರೆ. ಭವ್ಯ ಆದರ್ಶಗಳ ಚರಿತ್ರೆ ಇರುವ ಚಂದ್ರ ವಂಶಜನಾದ ನಿನಗೆ ಎದುರಾಗಿರುವುದು ಸರಳವೂ ಸಮ್ಮತವೂ ಆಗಿರುವ ವಿಚಾರ. ಒಪ್ಪಿ ನಡೆದರೆ ನಿನಗೆ ಲಾಭವೇ ಹೊರತು ನಷ್ಟವೆಂದೂ ಆಗದು. ತಂದೆಯನ್ನು ಅನಾದರಿಸಿ ಮೆರೆಯಲು ಯತ್ನಿಸಿದರೆ ಖಂಡಿತಾ ನಿನಗೆ ದುರ್ಗತಿ ಪ್ರಾಪ್ತವಾಗುತ್ತದೆ. ಹಿರಿಯರನ್ನು ಅಗೌರವದಿಂದ ಕಂಡರೆ ಸುಖ ದೊರಕದು. ನಿನ್ನ ಪಿತನ ಆಶಯ ಮನ್ನಿಸು. ಜಗತ್ತಿನಲ್ಲಿ ತಂದೆಗಿಂತ ಅಧಿಕತರವಾದ ದೈವ ಇನ್ನೊಂದಿಲ್ಲ. ಮಗನಾದವನಿಗೆ ಪಿತೃ ಸಂತುಷ್ಟಿಯೇ ಶ್ರೇಯಸ್ಸಿಗೆ ಸಾಧನ. ದುರಾತ್ಮರೂ, ಅಸತ್ಕುಲ ಪ್ರಸೂತರೂ, ಘಾತಕರೂ ಆದವರ ಮಾತಿಗೆ ಬೆಲೆ ಕೊಡಬೇಡ. ಸಜ್ಜನನಾಗಿ ಸನ್ಮಾರ್ಗ ಅನುಸರಿಸಿ ಕೃತಾರ್ಥನಾಗು. ಕಾಲವು ಇನ್ನೂ ಮೀರಿಹೋಗಿಲ್ಲ. ಒಂದೊಮ್ಮೆಗೆ ಮೀರಿ ಹೋದರೆ ಮತ್ತೆ ಪರಿತಪಿಸಿ ಪ್ರಯೋಜನವಾಗದು. ನಿನಗೀಗ ಪೂರ್ಣ ಅಧಿಕಾರವಿದೆ. ನಿನ್ನ ವೈರಿ ಸ್ಥಾನದಲ್ಲಿದ್ದರೂ ಪಾಂಡವರ ಮೇಲೆ ವಿಶ್ವಾಸವಿಡು. ಏಕೆಂದರೆ ಧರ್ಮಸಮ್ಮತವಲ್ಲದ ಯಾವ ಕಾರ್ಯವನ್ನೂ ಅವರು ಕೈಗೆತ್ತಿಕೊಳ್ಳಲಾರರು. ಎಂದಿಗೂ ಅವರಿಂದ ನಿನಗೆ ಸಹಕಾರ ಹೊರತು ಸಂಚಕಾರ ಬಾರದು. ಈಗ ನೀನಾಗಿ ಒದಗಿ ಬಂದ ಸುವರ್ಣಾವಕಾಶವನ್ನು ತಿರಸ್ಕರಿಸಿದರೆ ಅನಾಹುತವಾದೀತು. ಹಾಗಾಗಿ ವಿವೇಚಿಸಿ ಧರ್ಮಪಾಲಕನಾಗು. ಹಿಂದೆ ಆಗಿರುವುದಕ್ಕೆ ನಿನ್ನನ್ನು ಹೊಣೆಗಾರನಾಗಿಸದೆ, ಅದಕ್ಕೆ ದುಷ್ಪ್ರೇರಣೆಯೋ, ಕೆಟ್ಟ ಸಮಯವೋ ಕಾರಣವೆಂದು ತಿಳಿಯೋಣ. ನಿನಗೆ ಈ ಜಗದ ನಿತ್ಯ ಸತ್ಯ ಹೇಳಬಯಸುವೆ ನಿನ್ನೆದುರು ವೈರಿ ಸ್ಥಾನದಲ್ಲಿ ಗೋಚರಿಸುವವರೆಲ್ಲರೂ ಕೆಟ್ಟವರಲ್ಲ, ವಂಚಕರೂ ಅಲ್ಲ. ಹಾಗೆಂದು ನಿನ್ನ ಜೊತೆಗೆ ಸಹವರ್ತಿಗಳಾಗಿರುವವರು ನಿನ್ನ ಶ್ರೇಯೋಭಿಲಾಷಿಗಳು ಎಂದು ಮೂಢನಾಗಿ ನಂಬಬೇಡ ಸರಿಯಾದ ದಾರಿಯನ್ನು ಹಿಡಿ, ಧರ್ಮವನ್ನು ತೊರೆಯಬೇಡ. ಪಾಂಡವರು ಅನ್ಯರಲ್ಲ – ನಿನ್ನ ಸೋದರರು ಆಗಿದ್ದಾರೆ. ಮಾತ್ರವಲ್ಲ ಸಕಲ ಸಾಧನ ಸಮರ್ಥರಾಗಿದ್ದಾರೆ. ಆದುದರಿಂದ ಸರ್ವ ವಿಧಾನದಲ್ಲೂ ವಿಧೇಯತೆಯನ್ನು ತೋರುತ್ತಾ, ಸ್ವಾರ್ಥ ಸಾಧನೆ ಬಯಸದೆ, ಕುಲದ ಶ್ರೇಯಸ್ಸನ್ನೂ, ಲೋಕದ ಹಿತವನ್ನು ಅಪೇಕ್ಷಿಸುವ ಅವರನ್ನು ಒಡಗೂಡಿಸಿಕೊಂಡು ಮುಂದುವರಿಯುವ ಮನ ಮಾಡು. ಸರ್ವನಾಶ ಮಾಡಬಲ್ಲ ಯುದ್ದದ ಚಿಂತನೆಯಿಂದ ವಿಮುಖನಾಗು.” ಎಂದು ಬಹುವಿಧ ಸ್ಪಷ್ಟತೆಯನ್ನು ನೀಡಿ ವಿವರಿಸಿ ಸಂಧಾನಕ್ಕೆ ಒಪ್ಪುವಂತೆ ಕೃಷ್ಣ ಕೇಳಿಕೊಂಡನು.
ಆದರೆ ದುರ್ಯೋಧನ…
ಮುಂದುವರಿಯುವುದು…








