30.5 C
Udupi
Sunday, February 22, 2026
spot_img
spot_img
HomeBlogಮಲ್ಪೆಯ ಶೌಚಾಲಯವೊಂದರಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ…!

ಮಲ್ಪೆಯ ಶೌಚಾಲಯವೊಂದರಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ…!

ಉಡುಪಿ: ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ ನ ಶೌಚಾಲಯವೊಂದರಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾಗಿದೆ.

ಕಾಂಪ್ಲೆಕ್ಸ್ ನ ಕಟ್ಟಡದ ಮ್ಯಾನೇಜರ್ ಸುಹೇಲ್ ಎಂಬವರು ಒಳಗೆ ಹೋದಾಗ ನವಜಾತ ಶಿಶುವು ಮರಣ ಹೊಂದಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮಹಿಳೆಯೊಬ್ಬಳು ಶೌಚಾಲಯದಲ್ಲಿ ಹೆರಿಗೆಯಾಗಿ ಶಿಶುವನ್ನು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page