
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಮನ್ಕಿ ಬಾತ್ನ 123ನೇ ಸಂಚಿಕೆಯನ್ನುದ್ದೇಶಿಸಿ ಅಂತರಾಷ್ಟ್ರೀಯ ಯೋಗ, ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಧನೆ, ಕಲಬುರ್ಗಿ ರೊಟ್ಟಿ, ತೀರ್ಥಯಾತ್ರೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಜೂನ್ 21 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನದ ಭವ್ಯತೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ “ಅದರ ಥೀಮ್ ಒಂದು ಭೂಮಿ, ಒಂದು ಆರೋಗ್ಯ ವಿಶೇಷವಾಗಿದೆ. ಇದು ಕೇವಲ ಘೋಷಣೆಯಲ್ಲ, ಬದಲಾಗಿ ‘ವಸುಧೈವ ಕುಟುಂಬಕಂ’ ಎಂಬ ಮನೋಭಾವವನ್ನು ಪ್ರತಿಬಿಂಬಿಸುವ ನಿರ್ದೇಶನವಾಗಿದೆ. ಯೋಗದ ಮೂಲಕ, ನಾವು ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವುದಲ್ಲದೆ, ಭೂಮಿ ಮತ್ತು ಆರೋಗ್ಯದ ಬಗ್ಗೆ ನಮ್ಮ ಜಾಗತಿಕ ಜವಾಬ್ದಾರಿಯನ್ನು ಸಹ ಪೂರೈಸುತ್ತೇವೆ ಎಂದು ಹೇಳಿದರು.
ತೀರ್ಥ ಯಾತ್ರೆಗಳಲ್ಲಿ ಸೇವಾ ಮನೋಭಾವ ದೇಶದಲ್ಲಿನ ತೀರ್ಥಯಾತ್ರೆಗಳ ಕುರಿತು ಮಾತನಾಡಿದ ಪ್ರಧಾನಿ, ಭಕ್ತನೊಭಕ್ತನೊಬ್ಬ ತೀರ್ಥಯಾತ್ರೆಗೆ ಹೋದಾಗ ಸೇವಾ ಮನೋಭಾವ ಅವರೊಂದಿಗೆ ಬೆರೆಯುತ್ತದೆ. ಆಹಾರ ವಿತರಣೆ,ಕುಡಿಯುವ ನೀರು, ವೈದ್ಯಕೀಯ ಶಿಬಿರಗಳು ಮತ್ತು ವಸತಿ ವ್ಯವಸ್ಥೆಗಳನ್ನು ಸಾಮಾನ್ಯ ಜನರು ಮಾಡುತ್ತಾರೆ. ಇದು ಭಾರತದ ಸಂಪ್ರದಾಯದ ಅದ್ಭುತ ಅಂಶವಾಗಿದೆ. ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ ಬಹಳ ದಿನಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಮತ್ತೆ ಆರಂಭವಾಗಿದೆ. ಕೈಲಾಸವನ್ನು ಹಿಂದೂ, ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿ ಭಕ್ತಿಯ ಕೇಂದ್ರವೆಂದು ಪರಿಗಣಿಸಲಾಗಿದೆ ಮತ್ತು ಈ ಪ್ರಯಾಣವನ್ನು ಭಕ್ತರಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಕೇವಲ ಧಾರ್ಮಿಕ ಪ್ರಯಾಣವಲ್ಲ, ಆದರೆ ಆಧ್ಯಾತ್ಮಿಕ ಅನುಭವದ ಮಾರ್ಗವಾಗಿದೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಭಾರತದ ದೊಡ್ಡ ಸಾಧನೆ ಕುರಿತು ಮಾತನಾಡಿದ ಮೋದಿ ಟ್ರಾಕೋಮಾ ಎಂಬ ಗಂಭೀರ ಕಣ್ಣಿನ ಕಾಯಿಲೆಯನ್ನು ಭಾರತ ಯಶಸ್ವಿಯಾಗಿ ನಿಯಂತ್ರಿಸಿದೆ. ಈ ರೋಗವು ಈ ಹಿಂದೆ ದೇಶದ ಹಲವು ಭಾಗಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿತ್ತು. ಈ ಯಶಸ್ಸಿಗೆ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ. ಹಾಗೂ ಭಾರತವನ್ನು ಟ್ರಾಕೋಮಾ ಮುಕ್ತ ದೇಶವನ್ನಾಗಿ ಘೋಷಿಸಿದೆ ಎಂದು ಭಾರತದ ಸಾಧನೆಯನ್ನು ಮೆಚ್ಚಿದರು.
ಕಲಬುರಗಿ ರೊಟ್ಟಿ ಮಹಿಳೆಯರ ಸಾಧನೆ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ತೆಲಂಗಾಣದ ಭದ್ರಾಚಲಂನಲ್ಲಿ ಮಹಿಳೆಯರು ಮಿಲೆಟ್ ಬಿಸ್ಕೆಟ್ ತಯಾರಸುತ್ತಿದ್ದಾರೆ, ಇದು ಕೇವಲದೇಶವಲ್ಲ ಲಂಡನ್ವರೆಗೂ ಹೋಗಿದೆ. ಹಾಗೆಯೇ ಕಲಬುರಗಿಯ ಜಳದ ರೊಟ್ಟಿ ಬ್ರ್ಯಾಂಡ್ ಇದೀಗ ಬೆಂಗಳೂರಿಗ ಆಗಮಿಸಿದೆ. ದಿನಕ್ಕೆ 3 ಸಾವಿರಕ್ಕೂ ಅಧಿಕ ರೊಟ್ಟಿ ತಯಾರಿಸುತ್ತಾರೆ ಎಂದು ವಿವರಿಸಿದರು.









