37ನೇ ವಯಸ್ಸಿನಲ್ಲಿ, ಪಿಯು ಪರೀಕ್ಷೆ ಪಾಸಾದ ಅಂಗನವಾಡಿ ಸಹಾಯಕಿ ಸುಜಾತ ಶೆಟ್ಟಿ

ವಯಸ್ಸು ಕೇವಲ ನಂಬರ್ ಅಷ್ಟೇ ಸಾಧನೆ ಗೆ ವಯಸ್ಸು ಅಡ್ಡಿಯಾಗುವುದಿಲ್ಲ ಸಾಧಿಸಿದರೆ ಸಬಲವನ್ನು ನುಂಗಬಹುದು ಎನ್ನುವದನ್ನು ಶ್ರೀಮತಿ ಸುಜಾತಾ ಶೆಟ್ಟಿ ಯವರು ತನ್ನ 37ನೇ ವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ಬರೆದು ಸಾಧಿಸಿ ತೋರಿಸಿದ್ದಾರೆ.
ರೆಂಜಾಳ ಗ್ರಾಮದ ಕೊರ್ದೋಟ್ಟು ಪ್ರವೀಣ್ ಶೆಟ್ಟಿ ಯವರ ಪತ್ನಿ ಶ್ರೀಮತಿ ಸುಜಾತಾ ಶೆಟ್ಟಿ (37) ಅಂಗನವಾಡಿ ಸಹಾಯಕಿ ಯಾಗಿ ಇದ್ದು ಕೊಂಡು ಕೆಲಸ ಮಾಡುತಿದ್ದರು .
ಬಾಲ್ಯದಲ್ಲಿ ಬಡತನದ ಕಾರಣ ದಿಂದ ವಿದ್ಯಾಭ್ಯಾಸ ಮುಂದುವರೆಸುವದು ಕಷ್ಟವಾಗಿತ್ತು.. ತಾನು ವಿದ್ಯಾವಂತೆಯಾಗಬೇಕು ಎಂದು ಕನಸು ಹೊಂದಿದ್ದ ಸುಜಾತಾ ಶೆಟ್ಟಿ ಯವರು ಛಲ ದಿಂದ ಓದಿ ಪಿ ಯು ಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಕಾರ್ಕಳದ ಗುರುಕುಲ ಟ್ಯೂಟೋರಿಯಲ್ ನಲ್ಲಿ ಕೋಚಿಂಗ್ ಕಾರ್ಕಳ ಲಿಪಿ ಸೆಂಟರ್ ನಲ್ಲಿ ಪುಸ್ತಕ ಪಡೆದು ಕೊಂಡು ಮನೆಯಲ್ಲಿ ದಿನಾ ಬೆಳಿಗ್ಗೆ 4 ಗಂಟೆಗೆ ಎದ್ದು ಓದಿ ಅಭ್ಯಾಸ ಮಾಡಿಕೊಂಡು ಕಲಾ ವಿಭಾಗ ದಲ್ಲಿ 327 ಅಂಕ ಪಡೆದು ಪಾಸಾಗಿದ್ದಾರೆ. ಸುಜಾತಾ ಶೆಟ್ಟಿ ಯವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.








