ಕಥೆ (ಭಾಗ- 35)
ಚೇತನ್ ವರ್ಕಾಡಿ

ಸೌಂಧರ್ಯ ಕಾರಿನಿಂದ ಇಳಿದವಳೆ ನೇರ ಮಂಗಳಲ ಎದುರು ಬರುತ್ತಿದ್ದಾಳೆ.ಮಂಗಳಳಿಗೆ ಎಲ್ಲವೂ ಆಶ್ಚರ್ಯಕರವಾಗಿ ಗೋಚರಿಸುತ್ತಿತ್ತು!ಸೌಂದರ್ಯ ಯಾವತ್ತೂ ಮಂಗಳಳನ್ನು ಕಣ್ಣೆತ್ತಿಯೂ ನೋಡಿದವಳಲ್ಲ, ಶ್ರೀಮಂತಿಕೆಯ ಮದದಿಂದ ಮೆರೆಯುತ್ತಿದ್ದ ಅವಳು ಈ ದಿನ ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬರುವ ಕಾರಣವಾದರೂ ಏನಿರಬಹುದು ಎಂದು ಒಂದು ಕ್ಷಣ ಆಲೋಚಿಸಬೇಕಾದರೆ ಸೌಂಧರ್ಯ ಬಂದು ಅವಳ ಎದುರು ಬಂದು ಪ್ರತ್ಯಕ್ಷವಾಗಿಯೇ ಬಿಟ್ಟಳು.ಬೆಂಕಿಯ ಜ್ವಾಲೆಯನ್ನೇ ಹೊರಹಾಕುತ್ತಿರುವ ಅವಳ ಕಣ್ಣುಗಳು ಮಂಗಳಳನ್ನು ಸುಟ್ಟು ಭಸ್ಮ ಮಾಡುವಂತೆ ಗೋಚರಿಸುತ್ತಿತ್ತು.
ಸುಂದರರಾಯರು ದೂರದಿಂದಲೇ ಕಾರಿನಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದರು.ಮಂಗಳಳಿಗೆ ಸೌಂಧರ್ಯಳ ಕೋಪದ ಮುಖವನ್ನು ನೋಡುತ್ತಿದ್ದಂತೆಯೆ ಮಾತುಗಳೆ ಮೌನವಾದವು.ಆದರೂ ಧೈರ್ಯ ಮಾಡಿಕೊಂಡು ಮಾತು ಮುಂದುವರಿಸಿದಳು.ಅಮ್ಮವ್ರೆ ನೀವು ನಮ್ಮ ಮನೆಗೆ ಯಾಕೆ ಬಂದ್ರಿ,ಹೇಳಿಕಳಿಸಿದ್ರೆ ನಾನೆ ಬರುತ್ತಿದ್ದೆ ನಿಮ್ ಮನೆಗೆ ಎಂದು ಹೇಳಿ ಮುಗಿಸುವಷ್ಟರಲ್ಲಿ!ಷಟಪ್ ಬಾಯಿ ಮುಚ್ಚೆ ಎಂದು ಅವಳ ಬಾಯಿ ಮುಚ್ಚಿಸಿದಳು.ನೀನು ಯಾವ ಸೀಮೆ ರಾಜಕುಮಾರಿಯೆ ಅದು ನನ್ ಮನೆಗೆ ಕರೆಯೋಕೆ,ತೂ ನಿನ್ನ ಮುಖಕ್ಕೆ ಇಷ್ಟು ಎಂದು ಬೈಗುಳದ ಮೇಲೆ ಬೈಗುಳ ನೀಡಿದವಳೆ ತನ್ನ ಕೋಪಕ್ಕೆ ಶಾಂತಿಹೋಮ ಮಾಡಿಕೊಂಡಳು.ಶ್ರೀಮಂತರ ಮಾತುಗಳಿಗೆ ಪತ್ಯುತ್ತರ ನೀಡುವ ತಾಕತ್ತು ಮಂಗಳಳಿಗೆ ಇಲ್ಲದೆ ಹೋಯಿತು, ಕಟುಕನ ಕತ್ತಿಗೆ ಕುರಿ ತಲೆಬಾಗಿ ನಿಂತತ್ತೆ ಸೌಂಧರ್ಯಳ ಎದುರು ತಾನೂ ಏನು ಮಾತನಾಡದೆ ನಿಂತಿದ್ದಳು.ಮಧುವಿಗೂ ನಿನ್ಗೂ ಏನೆ ಸಂಬಂಧ ,ಸಾಯುವ ಮಟ್ಟಕ್ಕೆ ಹೊರಟಿದ್ದ ಮಧು ಹೇಗೆ ಬದುಕಿಬಂದ,ಒಂದೇ ಕಾರಿನಲ್ಲಿ ಅದೂ ನಾನು ಮದುವೆ ಆಗಬೇಕಿದ್ದ ಹುಡುಗನ ಜೊತೆ ಕುಳಿತುಕೊಂಡು ಬರುವ ಧೈರ್ಯ ನಿನ್ಗೆ ಎಲ್ಲಿಂದ ಬಂತೆ ನಿಜ ಬೊಗಳು! ಎಂದು ಅವಳ ಕೊರಳನ್ನು ಬಿಗಿಯಾಗಿ ಹಿಡಿದು ಪ್ರಶ್ನೆಯ ಸುರಿಮಳೆಯನ್ನೇ ಸುರಿಸಬೇಕಾದರೆ!ಉಸಿರುಗಟ್ಟುವಂತೆ ಶ್ವಾಸ ಎಳೆದುಕೊಳ್ಳಲು ಕಷ್ಟವಾದ ಮಂಗಳ ಅಮ್ಮಾ ಎಂದು ಜೋರಾಗಿ ಕಿರುಚಿದಳು.ಒಳಗಡೆ ತಂದೆಯ ಹಾರೈಕೆಯಲ್ಲಿದ್ದ ಮಂಗಳಲ ತಾಯಿ ಮಗಳ ಬೊಬ್ಬೆ ಕೇಳಿ ಹೊರಗಡೆ ಓಡೋಡಿಬಂದರೆ,ಇತ್ತ ಸುಂದರರಾಯರೂ ಕಾರಿನಿಂದ ಇಳಿದು ಅವರಿಬ್ಬರು ಇದ್ದ ಸ್ಥಳಕ್ಕೆ ಧಾವಿಸಿ ಬಂದರು.ಸುಗಂಧಿಗೆ ಮಗಳನ್ನು ನೋಡುತ್ತಿದ್ದಂತೆಯೆ ಮಾತೆ ಬಾರದಂತಾಯಿತು.ಸೌಂಧರ್ಯಳ ಕೈಯನ್ನು ಮಂಗಳಲ ಕುತ್ತಿಗೆಯಿಂದ ಬಿಡಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ.ಹತ್ತಿರ ಬಂದ ಸುಂದರರಾಯರು ಮಗಳ ಮಂಕುಬುದ್ಧಿಗೆ ಕೋಪ ನೆತ್ತಿಗೇರಿ ಮೊದಲಬಾರಿಗೆ ಕೆನ್ನೆಗೆ ಬಲವಾಗಿ ಏಟೊಂದನ್ನು ಬಾರಿಸಿಯೇ ಬಿಟ್ಟರು.ಬಿದ್ದ ಏಟಿನ ಭಾರ ತಾಳಲಾರದೆ ಸೌಂಧರ್ಯ ಅಲ್ಲೇ ಕುಸಿದು ಬಿದ್ದಳು….
(ಮುಂದುವರಿಯುವುದು)