
ಉಳ್ಳಾಲ: ಏಪ್ರಿಲ್ 16ರಂದು ತಡರಾತ್ರಿ ಮುನ್ನೂರು ಗ್ರಾಮ ಮತ್ತು ಉಳ್ಳಾಲ ನಗರಸಭೆ ಗಡಿಯಲ್ಲಿರುವ ನೇತ್ರಾವತಿ ನದಿ ಸಮೀಪದ ಬೊಳ್ಳ ಹೌಸ್ ಬಳಿ ರಿಕ್ಷಾ ಚಾಲಕ ಸೇರಿ ಮೂವರು ಸ್ನೇಹಿತರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಯುವತಿಯೊಬ್ಬಳು ಕೇರಳದ ಉಪ್ಪಳ ಎಂಬಲ್ಲಿ ವಾಸವಾಗಿದ್ದು ಸ್ನೇಹಿತನ ಜೊತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಆಕೆ ಒಬ್ಬಳೇ ಮಧ್ಯರಾತ್ರಿ ಹೊರ ಬಂದಿದ್ದಾಳೆ. ಈ ವೇಳೆ ರಿಕ್ಷಾ ಚಾಲಕರ ಬಳಿ ಸಹಾಯ ಕೇಳಿದ್ದು ಸಹಾಯ ಮಾಡುವ ನೆಪದಲ್ಲಿ ತನ್ನ ವಾಹನದಲ್ಲಿ ಕರೆದುಕೊಂಡ ಹೋದ ಚಾಲಕ ಆಕೆಗೆ ಅಮಲು ಪದಾರ್ಥ ನೀಡಿ ಸ್ನೇಹಿತರ ಜೊತೆ ಸೇರಿ ಅತ್ಯಾಚಾರ ಮಾಡಿದ್ದಾರೆ.
ಅರಿಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದ ಯುವತಿ ತಡರಾತ್ರಿ ವೇಳೆ ಸ್ಥಳೀಯರೊಬ್ಬರ ಮನೆ ಬಾಗಿಲು ಬಡಿದು ನೀರು ಕೇಳುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಮನೆ ಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಅನುಪಮಾ ಅಗರವಾಲ್ ಭೇಟಿ ನೀಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.