
ವಿಜಯಪುರ: ತಿಕೋಟಾ ತಾಲೂಕಿನ ರಾಂಪೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ನೂತನ ಅಂಗನವಾಡಿ ಕಟ್ಟಡ, ಕ್ರೀಡಾ ಸಲಕರಣೆಗಳು ಹಾಗೂ ಎಪಿಎಂಸಿ ಗೋದಾಮಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಮ್.ಬಿ.ಪಾಟೀಲ್ ಭೂಮಿ ಬಂಗಾರಕ್ಕಿಂತ ಅಮೂಲ್ಯವಾದ ಸಂಪತ್ತು. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು
ಈ ಭಾಗದಲ್ಲಿ ಹಿಂದೆ ಕುಡಿಯುವ ನೀರಿನ ಕೊರತೆ ಇದ್ದರೂ, ಕಳೆದ ಒಂದು ದಶಕದಲ್ಲಿ ನೀರಾವರಿ ವ್ಯವಸ್ಥೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇದರಿಂದ ರೈತರು ಕೃಷಿ ಹಾಗೂ ತೋಟಗಾರಿಕೆಯಲ್ಲಿ ತೊಡಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಬಾಬಾನಗರ ಸಮೀಪ ಜಲಾಶಯ ನಿರ್ಮಾಣ ಮಾಡುವ ಯೋಜನೆ ಇದ್ದು, ಇದರಿಂದ ಭೂಮಿಯ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ. ಬಂಗಾರವನ್ನು ಮತ್ತೆ ಖರೀದಿಸಬಹುದು, ಆದರೆ ಮಾರಾಟ ಮಾಡಿದ ಭೂಮಿಯನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ರೈತರು ತಮ್ಮ ಅಮೂಲ್ಯ ಭೂಮಿಯನ್ನು ಮಾರಬಾರದು ಎಂದು ಸಚಿವರು ಸಲಹೆ ನೀಡಿದರು.
ಇದೇ ವೇಳೆ 2025–26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಸುಮಾರು 20.55 ಲಕ್ಷ ರೂ. ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗಿದೆ. ಜಪಾನ್‌ನ ಕ್ರೋನ್ಸ್ ಕಂಪನಿಯವರು ಸಿಎಸ್‌ಆರ್ ಅನುದಾನದಡಿ ಮಕ್ಕಳಿಗೆ ಆಟದ ಮೈದಾನ ಮತ್ತು ಕ್ರೀಡಾ ಸಲಕರಣೆಗಳನ್ನು ಒದಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಗುರು ಘಟಿವಾಳೇಶ್ವರ ಮಠದ ಶ್ರೀ ವಿದ್ಯಾನಂದ ಓಂಕಾರಯ್ಯ ಪೂಜಾರಿ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.









