26.3 C
Udupi
Monday, April 6, 2026
spot_img
spot_img
HomeBlogಭಾ ಜ ಪಾ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ

ಭಾ ಜ ಪಾ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ

spot_imgspot_img

ಖ್ಯಾತ ನ್ಯಾಯವಾದಿ, ಹಿರಿಯ ಭಾ ಜ ಪ ನಾಯಕರಾದ ದಿವಂಗತ ಎಂ ಕೆ ವಿಜಯ್ ಕುಮಾರ್ ಮನೆಗೆ ಭೇಟಿ

ಭಾ ಜ ಪಾ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ರವರು ಇಂದು ಇತ್ತೀಚೆಗೆ ನಿಧನರಾದ ನಾಡಿನ ಖ್ಯಾತ ನ್ಯಾಯವಾದಿ, ಹಿರಿಯ ಭಾ ಜ ಪ ನಾಯಕರಾದ ದಿವಂಗತ ಎಂ ಕೆ ವಿಜಯ್ ಕುಮಾರ್ ಮನೆಗೆ ಭೇಟಿ ನೀಡಿ ಅವರ ಪುತ್ಥಳಿಗೆ ಪುಷ್ಪಾಂಜಲಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪುತ್ರರಾದ ನ್ಯಾಯವಾದಿಗಳಾದ ಎಂ ಕೆ ಸುವ್ರತ್ ಕುಮಾರ್, ಎಂ ಕೆ ವಿಪುಲ್ ತೇಜ್ ರವರೊಂದಿಗೆ ಮಾತನಾಡುತ್ತಾ 1978 ರಿಂದ ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಮತ್ತು ಎಂ ಕೆ ವಿಜಯ್ ಕುಮಾರ್ ರವರ ಜತೆಗಿನ ಒಡನಾಟವನ್ನು , ಪಕ್ಷದ ಬೆಳವಣಿಗೆಯಲ್ಲಿಎಂ ಕೆ ವಿಜಯ್ ಕುಮಾರ್ ರವರ ಸುಧೀರ್ಘ ಸೇವೆ ಹಲವಾರು ನಾಯಕರ ,ಸಂಸದರ ,ಶಾಸಕರ,ಕಾರ್ಯಕರ್ತರ ಬೆಳವಣಿಗೆಯಲ್ಲಿಎಂ ಕೆ ವಿಜಯ್ ಕುಮಾರ್ ರವರ ಮಾರ್ಗದರ್ಶನ ಮೊದಲಾದ ವಿಷಯಗಳನ್ನು ನೆನೆಸಿಕೊಂಡರು.

ತಮ್ಮ ತಂದೆಯವರಾದ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಶೋಕ ಸಂದೇಶವನ್ನು ದಿವಂಗತ ಎಂ ಕೆ ವಿಜಯ್ ಕುಮಾರ್ ರವರ ಕುಟುಂಬಸ್ಥರಿಗೆ ತಿಳಿಸಿ ಸಾಂತ್ವಾನ ಹೇಳಿದರು.

ಈ ಸಂಧರ್ಭದಲ್ಲಿ ಕಾರ್ಕಳ ಶಾಸಕರು ,ರಾಜ್ಯ ಭಾ. ಜಾ ಪ. ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ , ನ್ಯಾಯವಾದಿಗಳಾದ ಎಂ ಕೆ ಸುವ್ರತ್ ಕುಮಾರ್ ,ಎಂ ಕೆ ವಿಪುಲ್ ತೇಜ್ ,ಎಂ ಕೆ ದಿ ವಿಜೇಂದ್ರ ಕುಮಾರ್, ಶ್ವೇತಾ ವಿಪುಲ್ ತೇಜ್, ಮಂಗಳೂರು ಸಂಸದರು ರಾಜ್ಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ,ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಪಕ್ಷದ ಹಿರಿಯ ನಾಯಕರಾದ ಬೋಳ ಪ್ರಭಾಕರ ಕಾಮತ್, ಸುನಿಲ್ ಕುಮಾರ್ ಶೆಟ್ಟಿ, ಮಣಿರಾಜ್ ಶೆಟ್ಟಿ, ಮಂಡಲಾಧ್ಯಕ್ಷರಾದ ನವೀನ್ ನಾಯಕ್, ನಗರಾಧ್ಯಕ್ಷರಾದ ನಿರಂಜನ್ ಜೈನ್ ವಕೀಲರ ಸಂಘದ ಅದ್ಯಕ್ಷರಾದ ಪ್ರಕಾಶ್ ಆಚಾರ್ ,ಹರೀಶ್ ಅಧಿಕಾರಿ ಪ್ರಮುಖರಾದ ಪ್ರಕಾಶ್ ರಾವ್ ಮುಂತಾದವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page