
ಬಾರಿ ಮಳೆಯ ಹಿನ್ನೆಲೆ, ಶಿರಾಡಿ ಘಾಟ್ ನ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು ಸಂಚಾರದಲ್ಲಿ ತಡೆಯೊಡ್ಡಲಾಗಿದೆ.
ಗುಡ್ಡ ಕುಸಿತದ ಹಿನ್ನೆಲೆ ಟ್ರಕ್, ಲಾರಿ, ಟ್ಯಾಂಕರ್ ಓಡಾಟಕ್ಕೆ ತಾತ್ಕಾಲಿಕ ತಡೆ ವಿಧಿಸಲಾಗಿದ್ದು, ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸಕಲೇಶಪುರದವರೆಗೆ ತೆರಳುವ ಸಾರಿಗೆ ಬಸ್ಸುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಮಂಗಳೂರು ಕಡೆಗೆ ಹೋಗುವ ಬಸ್ಸುಗಳಿಗೆ ಹಾಸನ ತಾಲೂಕಿನ ಕಂದಲಿ ಬಳಿ ತಡೆಯೊಡ್ಡಲಾಗುತ್ತಿದೆ ಎಂದು ವರದಿಯಾಗಿದೆ.








