29.3 C
Udupi
Sunday, December 14, 2025
spot_img
spot_img
HomeBlogಭಾರತ U15 ವಾಲಿಬಾಲ್ ಬಾಲಕಿಯರ ತಂಡದ ನಾಯಕಿ, ನಮ್ಮೂರಿನ ಹೆಮ್ಮೆಯ ಸಾಧಕಿಗೆ ಭವ್ಯ ಸ್ವಾಗತ ಕಾರ್ಯಕ್ರಮ

ಭಾರತ U15 ವಾಲಿಬಾಲ್ ಬಾಲಕಿಯರ ತಂಡದ ನಾಯಕಿ, ನಮ್ಮೂರಿನ ಹೆಮ್ಮೆಯ ಸಾಧಕಿಗೆ ಭವ್ಯ ಸ್ವಾಗತ ಕಾರ್ಯಕ್ರಮ

ಡಿಸೆಂಬರ್ 4 ರಿಂದ 13 ವರಗೆ ಚೀನಾದಲ್ಲಿ ನಡೆದ ವಿಶ್ವ ಶಾಲಾ‌ ಮಕ್ಕಳ U15 ವಾಲಿಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತದ ಬಾಲಕಿಯರ ವಾಲಿಬಾಲ್ ತಂಡದ ಕಪ್ತಾನಳಾಗಿ ತಂಡವನ್ನು ಮುನ್ನಡೆಸಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕ್ರೈಸ್ತಕಿಂಗ್ ಶಿಕ್ಷಣ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಶಗುನ್ ಎಸ್‌ ವರ್ಮ ಹೆಗ್ಡೆ ತಾಯ್ನಾಡಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರನ್ನು ಗೌರವಪೂರ್ಣವಾಗಿ ಸ್ವಾಗತಿಸುವ ಸಲುವಾಗಿ ದಿನಾಂಕ 15 ಸೋಮವಾರ ಬೆಳಿಗ್ಗೆ 9:00ಕ್ಕೆ ಅನಂತಶಯನ ವೃತ್ತದಿಂದ ಕ್ರೈಸ್ತಕಿಂಗ್ ಶಿಕ್ಷಣ ಸಂಸ್ಥೆಯವರೆಗೆ ಸ್ವಾಗತ ಮೆರವಣಿಯನ್ನು ಶಿಕ್ಷಣ ಸಂಸ್ಥೆ ಹಾಗೂ ಕ್ರೀಡಾಭಿಮಾನಿಗಳ ವತಿಯಿಂದ ಆಯೋಜಿಸಲಾಗಿದೆ.

ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮೂರಿನ ಕೀರ್ತಿಯನ್ನು‌ ಹೆಚ್ಚಿಸಿದ ಕ್ರೀಡಾಪಟುವನ್ನು ಸ್ವಾಗತಿಸುವ ‌ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರ ಪರವಾಗಿ ವಿನಂತಿಸಲಾಗಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page