ಸಮುದಾಯ ಸೇವಾ ಕಾರ್ಯಕ್ರಮ, ಹೊಸ ಬೆಳಕು ಆಶ್ರಮಕ್ಕೆ ಭೇಟಿ

ಭಾರತ ಸ್ಕೌಟ್ ಮತ್ತು ಗೈಡ್ ವಿಭಾಗ, ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇದರ ವತಿಯಿಂದ ನಡೆದ ಸಮುದಾಯ ಸೇವಾ ಕಾರ್ಯಕ್ರಮದ ಭಾಗವಾಗಿ ದಿನಾಂಕ 19-09-2025 ರಂದು ಕೌಡೂರು ಗ್ರಾಮ, ಬೈಲೂರು ಇಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ನಡೆಸಲ್ಪಡುತ್ತಿರುವ ‘ಹೊಸ ಬೆಳಕು ಆಶ್ರಮಕ್ಕೆ’ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀಮತಿ ತನುಲ ಪಿ ಇವರು ಸಂಸ್ಥೆಯ ಸೇವಾ ಕಾರ್ಯ ಹಾಗೂ ಅದರ ಹಿನ್ನೆಲೆಯನ್ನು ವಿವರಿಸಿದರು. ಹಾಗೂ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ವತಿಯಿಂದ ಸೇವಾ ಟ್ರಸ್ಟ್ ಗೆ ವಿವಿಧ ಆಹಾರ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸ್ಕೌಟ್ಸ್ ಶಿಕ್ಷಕರಾದ ಶ್ರೀಮತಿ ಜ್ಯೋತಿ ಹೆಗಡೆ ಹಾಗೂ ಶ್ರೀಮತಿ ಸ್ವಪ್ನ ಮತ್ತು ಗೈಡ್ಸ್ ಶಿಕ್ಷಕರಾದ ಶ್ರೀಮತಿ ಅಕ್ಷಯ ಹಾಗೂ ಪೂರ್ಣಿಮಾ ಹಾಗೂ ಶಿಕ್ಷಕಿ ಶ್ರೀಮತಿ ಮೃದುಲಾ ಗೋಖಲೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.








