27 C
Udupi
Wednesday, April 8, 2026
spot_img
spot_img
HomeBlogಭಾರತ ಸ್ಕೌಟ್ ಮತ್ತು ಗೈಡ್ಸ್ ವಿಭಾಗ, ಶ್ರೀ ಭುವನ್ ಇಂದ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ವತಿಯಿಂದ,

ಭಾರತ ಸ್ಕೌಟ್ ಮತ್ತು ಗೈಡ್ಸ್ ವಿಭಾಗ, ಶ್ರೀ ಭುವನ್ ಇಂದ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ವತಿಯಿಂದ,

ಸಮುದಾಯ ಸೇವಾ ಕಾರ್ಯಕ್ರಮ, ಹೊಸ ಬೆಳಕು ಆಶ್ರಮಕ್ಕೆ ಭೇಟಿ

ಭಾರತ ಸ್ಕೌಟ್ ಮತ್ತು ಗೈಡ್ ವಿಭಾಗ, ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇದರ ವತಿಯಿಂದ ನಡೆದ ಸಮುದಾಯ ಸೇವಾ ಕಾರ್ಯಕ್ರಮದ ಭಾಗವಾಗಿ ದಿನಾಂಕ 19-09-2025 ರಂದು  ಕೌಡೂರು ಗ್ರಾಮ, ಬೈಲೂರು ಇಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ನಡೆಸಲ್ಪಡುತ್ತಿರುವ ‘ಹೊಸ ಬೆಳಕು ಆಶ್ರಮಕ್ಕೆ’ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀಮತಿ ತನುಲ ಪಿ ಇವರು ಸಂಸ್ಥೆಯ ಸೇವಾ ಕಾರ್ಯ ಹಾಗೂ ಅದರ ಹಿನ್ನೆಲೆಯನ್ನು ವಿವರಿಸಿದರು. ಹಾಗೂ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ವತಿಯಿಂದ ಸೇವಾ ಟ್ರಸ್ಟ್ ಗೆ ವಿವಿಧ ಆಹಾರ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸ್ಕೌಟ್ಸ್ ಶಿಕ್ಷಕರಾದ ಶ್ರೀಮತಿ ಜ್ಯೋತಿ ಹೆಗಡೆ ಹಾಗೂ ಶ್ರೀಮತಿ ಸ್ವಪ್ನ ಮತ್ತು ಗೈಡ್ಸ್ ಶಿಕ್ಷಕರಾದ ಶ್ರೀಮತಿ ಅಕ್ಷಯ ಹಾಗೂ ಪೂರ್ಣಿಮಾ ಹಾಗೂ ಶಿಕ್ಷಕಿ ಶ್ರೀಮತಿ ಮೃದುಲಾ ಗೋಖಲೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು  ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page