
ವಾಷಿಂಗ್ಟನ್: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರಿದಿರುವ ಹಿನ್ನೆಲೆ, ಅಮೆರಿಕ ತನ್ನ ಹೇಳಿಕೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.
ಭಾರತದ ಕೃಷಿ ಹಾಗೂ ಉದ್ಯಮಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಅಂಶಗಳನ್ನು ಕೈಬಿಟ್ಟು ಶ್ವೇತಭವನ ಹೊಸ ಫ್ಯಾಕ್ಟ್‌ಶೀಟ್ ಬಿಡುಗಡೆ ಮಾಡಿದೆ.
ಹೊಸ ಪತ್ರದಲ್ಲಿ, ಭಾರತವು ಡಿಜಿಟಲ್ ಸೇವಾ ತೆರಿಗೆ ತೆಗೆದುಹಾಕಿದೆ ಎಂಬ ಉಲ್ಲೇಖ ಮತ್ತು ಎಲೆಕ್ಟ್ರಾನಿಕ್ ಪ್ರಸರಣಗಳ ಮೇಲೆ ಕಸ್ಟಮ್ಸ್ ಸುಂಕ ವಿಧಿಸುವುದನ್ನು ನಿಷೇಧಿಸುವ ನಿಯಮಗಳನ್ನು ತೆಗೆಯಲಾಗಿದೆ. ಅಮೆರಿಕದಿಂದ ಭಾರತ ಖರೀದಿಸುವ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿದ್ದ ‘ಕೆಲ ಬೆಳೆಕಾಳುಗಳು’ ಅಂಶವನ್ನೂ ತೆಗೆದುಹಾಕಲಾಗಿದೆ.
ಇಂಧನ, ಮಾಹಿತಿ, ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಸೇರಿದಂತೆ ವಿವಿಧ ವಲಯಗಳಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಭಾರತ ‘ಖರೀದಿಸಲು ಬದ್ಧವಾಗಿದೆ’ ಎಂಬ ಪದಬಳಕೆಯನ್ನು ‘ಖರೀದಿಸಲು ಉದ್ದೇಶಿಸಿದೆ’ ಎಂದು ಬದಲಾಯಿಸಲಾಗಿದೆ. ವ್ಯಾಪಾರ ಮಾತುಕತೆ ಮುಂದುವರಿದಂತೆ ಇನ್ನಷ್ಟು ತಿದ್ದುಪಡಿ ಸಂಭವಿಸುವ ಸಾಧ್ಯತೆ ಇದೆ.



















