
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಅಥವಾ ಬೇರೆ ಎಲ್ಲಿಯಾದರೂ ಐಫೋನ್ ತಯಾರಿಸಿದರೆ 25% ಸುಂಕವನ್ನು ವಿಧಿಸಲಾಗುವುದು ಎಂದು ಆಪಲ್ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲಿ ತಯಾರಾಗಬೇಕು. ನಾನು ಆಪಲ್ ಸಿಇಒ ಟಿಮ್ ಕುಕ್‌ಗೆ ಬಹಳ ಹಿಂದೆಯೇ ತಿಳಿಸಿದ್ದೇನೆ. ಆಪಲ್ ಫೋನ್‌ಗಳು ಅಮೆರಿಕದಲ್ಲೇ ತಯಾರಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಾಳಾಗುತ್ತಿದ್ದ ಬೆನ್ನಲ್ಲೇ ಆಪಲ್ ಭಾರತದಲ್ಲಿ ಐಫೋನ್ ಉತ್ಪಾದನಾ ಘಟಕಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಟ್ರಂಪ್ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.
ಈ ಹಿಂದೆ ಟ್ರಂಪ್, ಭಾರತ ಮತ್ತೊಂದು ಚೀನಾ ಆಗುವುದು ಬೇಡ. ಆಪಲ್ ಭಾರತದಲ್ಲಿ ಹೂಡಿಕೆ ಮಾಡುವ ಅಗತ್ಯವಿಲ್ಲ. ಆಪಲ್ ಅಮೆರಿಕದಲ್ಲಿ ಹೂಡಿಕೆ ಮಾಡಿ ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂದು ಹೇಳಿದ್ದರು.






















































