
ಭಾರತೀಯ ಜನತಾ ಪಾರ್ಟಿ ಕಾರ್ಕಳ ನಗರ ಕಾರ್ಕಳ ಪುರಸಭೆ ವ್ಯಾಪ್ತಿಯ ದಾನಶಾಲೆ – ಕಾಳಿಕಾಂಬಾ ವಾರ್ಡ್ ನಂಬರ್ 13ರ ಬಿಜೆಪಿಯ ವಾರ್ಡ್ ಸಭೆಯು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಬಳಿ ಜರುಗಿತು.
ನೂತನ ವಾರ್ಡ್ ಅಧ್ಯಕ್ಷರಾಗಿ ಧೀರಜ್ ರಾವ್ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ತಾಲೂಕು ವಕ್ತಾರರಾದ, ನ್ಯಾಯವಾದಿ, ರವೀಂದ್ರ ಮೊಯ್ಲಿ, ನಗರ ಅಧ್ಯಕ್ಷ ನಿರಂಜನ್ ಜೈನ್, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಪ್ರಸಾದ್, ಸ್ಥಳೀಯ ಪುರಸಭಾ ಸದಸ್ಯ ಪ್ರದೀಪ್ ರಾಣೆ, ವಾರ್ಡ್ ನ ನಿಕಟಪೂರ್ವ ಅಧ್ಯಕ್ಷ ಹರೀಶ್ ದೇವಾಡಿಗ, ಯುವ ಮೋರ್ಚಾ ಅಧ್ಯಕ್ಷ ಅಮರ್ ಶೆಟ್ಟಿಗಾರ್, ಕಾರ್ಯದರ್ಶಿ ರಾಜೇಶ್ ಆಚಾರ್ಯ, ಪುರಸಭಾ ಸದಸ್ಯರಾದ ಶೋಭಾ ದೇವಾಡಿಗ, ಪಲ್ಲವಿ ಪ್ರವೀಣ್ ,ನಿತಾ ಆಚಾರ್ಯ, ಭಾರತಿ ಅಮೀನ್ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ಸಂತೋಷ್ ರಾವ್ ಹಾಗೂ ವಾರ್ಡಿನ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.