79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ,
ಹುತಾತ್ಮ ವೀರಯೋಧ ಉದಯ ಪೂಜಾರಿ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ

ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಹಿಳಾ ಮೋರ್ಚಾ ಮತ್ತು ಹೆಬ್ರಿ ಮಹಾ ಶಕ್ತಿ ಕೇಂದ್ರದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹುತಾತ್ಮ ವೀರಯೋಧ ಹೆಬ್ರಿಯ ಉದಯ ಪೂಜಾರಿ ಅವರ ಪ್ರತಿಮೆ ಸ್ವಚ್ಛಗೊಳಿಸಿ, ಮಾಲಾರ್ಪಣೆಗೈದು, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಬ್ರಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ನಾಯಕ್, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷರಾದ ವಿನಯಾ ಡಿ ಬಂಗೇರ, ಮಹಿಳಾ ಮೋರ್ಚಾ ಹೆಬ್ರಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ವೀಣಾ ಪ್ರಭು, ಪ್ರಮುಖರಾದ ರವೀಂದ್ರ ಕುಮಾರ್, ಸುಧಾಕರ ಹೆಗ್ಡೆ, ಸಮೃದ್ಧಿ ಪ್ರಕಾಶ್, ಸುರೇಶ್ ಭಂಡಾರಿ, ಪ್ರಸಾದ್ ಭಂಡಾರಿ, ಸುರೇಂದ್ರ, ಹೆಚ್ ಕೆ ಸುಧಾಕರ, ಅರುಣ್ ಶೆಟ್ಟಿ, ರಮೇಶ್ ಪೂಜಾರಿ, ಮಹಿಳಾ ಮೋರ್ಚಾ ಪ್ರಮುಖರಾದ ಸುಗಂಧಿ ನಾಯ್ಕ್, ಭಾರತಿ ಅಮೀನ್, ಪಲ್ಲವಿ ಪ್ರವೀಣ್, ಚಂದ್ರಿಕಾ ರಾವ್, ಶೋಭಾ ಶೆಟ್ಟಿ, ರೇವತಿ, ಸುಪ್ರಿಯಾ, ಮಾಲತಿ ಮತ್ತಿತರರು ಉಪಸ್ಥಿತರಿದ್ದರು.