ಹಳೆಯ ಛಾಳಿ ಮುಂದುವರಿಸಿದ ಪಾಕಿಸ್ತಾನಕ್ಕೆ, ಭಾರತೀಯ ಸೇನೆಯಿಂದ ಸರಿಯಾದ ಉತ್ತರ
ಬಿಪಿನಚಂದ್ರ ಪಾಲ್ ನಕ್ರೆ,ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ

ಪಾಕಿಸ್ಥಾನದ ಪ್ರಾಯೊಜನೆಯಲ್ಲಿ ಫೆಹಲ್ಘಾಮಿನಲ್ಲಿ ಉಗ್ರರು ನಡೆಸಿದ ನರಮೇದಕ್ಕೆ ಪ್ರತೀಕಾರವಾಗಿ ಭಾರತ ” ಓಪರೇಶನ್ ಸಿಂಧೂರ್” ಮಿಲಿಟರಿ ಕಾರ್ಯಾಚರಣೆಯ ಮೂಲಕ ಪಾಕಿಸ್ಥಾನದಲ್ಲಿ ನೆಲೆಯೂರಿರುವ ಸುಮಾರು 9 ಉಗ್ರಗಾಗಿ ತರಬೇತಿ ನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ದ್ವಂಸ ಮಾಡಿರುವುದು ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಉಗ್ರರ ನೆಲೆಗಳನ್ನು ದ್ವಂಸ ಮಾಡಿ ಅಲ್ಲಿನ ನೂರಕ್ಕೂ ಹೆಚ್ಚು ಉಗ್ರರನ್ನ ಕೊಂದು ಹಾಕುವ ಮೂಲಕ ಫೆಹಲ್ಘಾಮ್ ನಲ್ಲಿ ಅಟ್ಟಹಾಸ ಮೆರೆಸಿ ಅಳಿಸಿಹಾಕಿದ ಭಾರತೀಯ ನಾರಿಯರ ಸಿಂಧೂರದ ಶಕ್ತಿ ಏನು ಎಂಬುದನ್ನು ಭಾರತೀಯ ಸೇನೆ ಪಾಕಿಸ್ಥಾನಕ್ಕೆ ಪರಿಚಯಿಸಿದೆ. ಈ ಮೂಲಕ ಭಾರತದ ಸೇನಾಶಕ್ತಿ ಏನೆಂಬುದನ್ನು ಪಾಕಿಸ್ಥಾನಕ್ಕೆ ಮಾತ್ರವಲ್ಲ ವಿಶ್ವ ಮುಖಕ್ಕೆ ತೋರಿಸುವಂತಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಶಾಂತಿ ಮತ್ತು ಸೌಹಾರ್ಧತೆಯ ರಾಜತಾಂತ್ರಿಕ ಸಿದ್ಧಾಂತದಡಿಯಲ್ಲಿ ಕಳೆದ 70 ವರ್ಷಗಳಿಂದ ವಿಶ್ವ ರಾಜಕಾರಣದಲ್ಲಿ ತನ್ನದ್ದೇ ಛಾಪನ್ನು ಮೂಡಿಸುತ್ತ ಕಾರ್ಯನಿರ್ವಹಿಸುತ್ತ ಬಂದಿರುವ ಭಾರತವನ್ನು 1971 ಪ್ರಧಾನಿ ಇಂದಿರಾ ಗಾಂಧಿ ಆಡಳಿತ ಅವಧಿಯೂ ಸೇರಿ ಸುಮಾರು 6 ಭಾರಿ ಕೆಣಕಲು ಹೋಗಿ ಯುದ್ಧದಲ್ಲಿ ಸೋತು ಶರಣಾಗಿ ಇಬ್ಬಾಗವಾಗಿ ಹೋದ ಪಾಕಿಸ್ತಾನ ತನ್ನ ಹಳೆಯ ದುರಂತ ಕತೆಯನ್ನು ಮರೆತಂತಿದೆ. ಇದೀಗ ಮತ್ತೆ ತನ್ನ ಹಳೆಯ ಛಾಳಿ ಮುಂದುವರಿಸಿದ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ಸರಿಯಾದ ಉತ್ತರ ನೀಡಿ ಎಚ್ಚರಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.