22.5 C
Udupi
Wednesday, December 31, 2025
spot_img
spot_img
HomeBlogಭಾರತಕ್ಕೆ 25% ಪಾಕಿಸ್ತಾನಕ್ಕೆ 19% ಸುಂಕ :ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೆಚ್ಚಿನ ಸುಂಕದ ಬರೆ...

ಭಾರತಕ್ಕೆ 25% ಪಾಕಿಸ್ತಾನಕ್ಕೆ 19% ಸುಂಕ :ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೆಚ್ಚಿನ ಸುಂಕದ ಬರೆ ಎಳೆದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಒಪ್ಪಂದದ ಗಡುವಿಗೆ ಮುಂಚಿತವಾಗಿಯೇ ಹಲವು ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೆಚ್ಚಿನ ಸುಂಕದ ಬರೆ ಎಳೆದಿದ್ದು ಈ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಈ ಆದೇಶವು ಏಳು ದಿನಗಳಲ್ಲಿ ಜಾರಿಗೆ ಬರಲಿದ್ದು 69 ವ್ಯಾಪಾರ ಪಾಲುದಾರ ದೇಶಗಳ ಮೇಲೆ 10% ರಿಂದ 41% ರಷ್ಟು ಹೆಚ್ಚಿನ ಆಮದು ಸುಂಕ ವಿಧಿಸಿದೆ. ಕೆನಡಾದ ಮೇಲೆ ಸದ್ಯ 25 ರಷ್ಟು ಸುಂಕ ವಿದಿಸಲಾಗುತ್ತಿತ್ತು ಶುಕ್ರವಾರದಿಂದ 35% ಕ್ಕೆ ಹೆಚ್ಚಿಸಲಾಗುತ್ತದೆ. ಭಾರತದ ಮೇಲೆ ಸದ್ಯ 25% ಸುಂಕ ವಿಧಿಸಲಾಗಿದ್ದು ಪಾಕಿಸ್ತಾನದ ಮೇಲೆ 19%, ಬಾಂಗ್ಲಾದೇಶ ಮತ್ತು ವಿಯೆಟ್ನಂ ಮೇಲೆ 20 % ದಕ್ಷಿಣ ಆಫ್ರಿಕಾದ ಮೇಲೆ 30% ಮತ್ತು ಸ್ವಿಜರ್ಲ್ಯಾಂಡ್ ಮೇಲೆ 39% ರಷ್ಟು ಅತ್ಯಧಿಕ ಸುಂಕ ವಿಧಿಸಲಾಗಿದೆ. ಆದರೆ ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಇನ್ನು ಅಂತಿಮಗೊಂಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಯಾವ ದೇಶಕ್ಕೆ ಎಷ್ಟು ಸುಂಕ?

  • 41% ಸುಂಕ – ಸಿರಿಯಾ
  • 40% ಸುಂಕ – ಲಾವೋಸ್, ಮ್ಯಾನ್ಮಾರ್ (ಬರ್ಮಾ)
  • 39% ಸುಂಕ – ಸ್ವಿಟ್ಜರ್ಲೆಂಡ್
  • 35% ಸುಂಕ – ಇರಾಕ್, ಸೆರ್ಬಿಯಾ
  • 30% ಸುಂಕ – ಅಲ್ಜೀರಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಲಿಬಿಯಾ, ದಕ್ಷಿಣ ಆಫ್ರಿಕಾ
  • 25% ಸುಂಕ – ಭಾರತ, ಬ್ರೂನಿ, ಕಝಾಕಿಸ್ತಾನ್, ಮೊಲ್ಡೊವಾ, ಟುನೀಶಿಯಾ
  • 20% ಸುಂಕ – ಬಾಂಗ್ಲಾದೇಶ, ಶ್ರೀಲಂಕಾ, ತೈವಾನ್, ವಿಯೆಟ್ನಾಂ
  • 19% ಸುಂಕ – ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥೈಲ್ಯಾಂಡ್
  • 18% ಸುಂಕ – ನಿಕರಾಗುವಾ
  • 15% ಸುಂಕ – ಇಸ್ರೇಲ್, ಜಪಾನ್, ಟರ್ಕಿ, ನೈಜೀರಿಯಾ, ಘಾನಾ ಮತ್ತು ಇತರ ಹಲವು ದೇಶಗಳು
  • 10% ಸುಂಕ – ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್ (ಯುಕೆ), ಫಾಕ್‌ಲ್ಯಾಂಡ್ ದ್ವೀಪಗಳು
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page