25.6 C
Udupi
Wednesday, July 16, 2025
spot_img
spot_img
HomeBlogಭಾರತಕ್ಕೆ ಅಧಿಕೃತವಾಗಿ ಎಂಟ್ರಿಯಾದ ಟೆಸ್ಲಾ: ಟೆಸ್ಲಾ ಕಾರು ಶೋ ರೂಮ್‌ ಉದ್ಘಾಟಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ...

ಭಾರತಕ್ಕೆ ಅಧಿಕೃತವಾಗಿ ಎಂಟ್ರಿಯಾದ ಟೆಸ್ಲಾ: ಟೆಸ್ಲಾ ಕಾರು ಶೋ ರೂಮ್‌ ಉದ್ಘಾಟಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌

ಮುಂಬೈ: ಇಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಜಿಲ್ಲೆಯಲ್ಲಿ ದೇಶದ ಮೊದಲ ಟೆಸ್ಲಾ ಶೋ ರೂಮ್‌ ಉದ್ಘಾಟನೆಯಾಗಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಟೆಸ್ಲಾ ಕಾರು ಶೋ ರೂಮ್‌ ಅನ್ನು ಉದ್ಘಾಟಿಸಿದ್ದಾರೆ.

ಕಾರು ಬುಕ್ಕಿಂಗ್‌ ಮಾಡುವ ಗ್ರಾಹಕರು ಮುಂಗಡವಾಗಿ 22,220 ರೂ. ಹಣವನ್ನು ಪಾವತಿಸಬೇಕಾಗುತ್ತದೆ. ಕಾರುಗಳನ್ನು ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿತರಣೆ ಮಾಡಲಾಗುತ್ತದೆ. ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಟೆಸ್ಲಾ ಫೆಬ್ರವರಿ 2025 ರಲ್ಲಿ ಭಾರತದ ಅತ್ಯಂತ ದುಬಾರಿ ವಾಣಿಜ್ಯ ಜಿಲ್ಲೆಯಾದ ಮುಂಬೈನ BKC ಯಲ್ಲಿ 4,000 ಚದರ ಅಡಿ ಶೋರೂಮ್ ಜಾಗಕ್ಕೆ ಐದು ವರ್ಷಗಳ ಅವಧಿಗೆ 23.38 ಕೋಟಿ ರೂ. ಪಾವತಿಸಿದೆ.

ಟೆಸ್ಲಾ ಮಾಡೆಲ್‌ ವೈ (Model Y) ಎರಡು ಮಾದರಿಯ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು Model Y Rear-Wheel Drive (RWD) 60 ಲಕ್ಷ ರೂ., Model Y Long Range RWD 68 ಲಕ್ಷ ರೂ. ದರವನ್ನು ನಿಗದಿಪಡಿಸಲಾಗಿದೆ.

ಪಿಯರ್ ವೈಟ್ ಮತ್ತು ಡೈಮಂಡ್ ಬ್ಲಾಕ್ : 95,000 ರೂ.

ನೀಲಿ: 1.25 ಲಕ್ಷ ರೂ.

ಕ್ವಿಕ್ ಸಿಲ್ವರ್ ಮತ್ತು ಅಲ್ಟ್ರಾ ರೆಡ್: 1.85 ಲಕ್ಷ ರೂ.

ಮಾಡೆಲ್‌ ವೈ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 500 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.9 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಲಾಂಗ್‌ ರೇಂಜ್‌ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 622 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.6 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಟೆಸ್ಲಾ ಕಾರುಗಳು ಚೀನಾದ ಶಾಂಘೈನಿಂದ ಆಗಮಿಸಿದ್ದು ಎಲೆಕ್ಟ್ರಿಕ್‌ ಕಾರುಗಳಿಗೆ ಆಮದು ಸುಂಕ ವಿಧಿಸುವ ಕಾರಣದಿಂದಾಗಿ ಬೆಲೆ ದುಬಾರಿಯಾಗಿವೆ. ಅಮೆರಿಕ, ಚೀನಾ, ಜರ್ಮನಿಯಲ್ಲಿ ಟೆಸ್ಲಾ ತನ್ನ ಉತ್ಪದನಾ ಘಟಕವನ್ನು ತೆರೆದಿರುವ ಕಾರಣ ಅಲ್ಲಿ ಬೆಲೆ ಕಡಿಮೆಯಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page