23.9 C
Udupi
Sunday, February 1, 2026
spot_img
spot_img
HomeBlogಭಾನುವಾರ ಸಂಜೆ 6 ಗಂಟೆಯೊಳಗೆ ಶಾಂತಿ ಒಪ್ಪಂದ ಮಾಡಿಕೊಳ್ಳಿ, ಇಲ್ಲದಿದ್ದರೆ ಯಾರೂ ನೋಡಿರದ ನರಕ ಎದುರಾಗಲಿದೆ...

ಭಾನುವಾರ ಸಂಜೆ 6 ಗಂಟೆಯೊಳಗೆ ಶಾಂತಿ ಒಪ್ಪಂದ ಮಾಡಿಕೊಳ್ಳಿ, ಇಲ್ಲದಿದ್ದರೆ ಯಾರೂ ನೋಡಿರದ ನರಕ ಎದುರಾಗಲಿದೆ : ಹಮಾಸ್ ಗೆ ಅಂತಿಮ ಎಚ್ಚರಿಕೆ ನೀಡಿದ ಟ್ರಂಪ್

ವಾಷಿಂಗ್ಟನ್ : ಹಮಾಸ್ ನ ಉಗ್ರ ಸಂಘಟನೆಯು ಇಸ್ರೇಲ್ ಗೆ ನುಗ್ಗಿ ಮಾರಣಹೋಮ ನಡೆಸಿ ಇಸ್ರೇಲ್ ನಾಗರಿಕರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದು ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್ ಫಾರ್ಮ್ ನಲ್ಲಿ ಹಮಾಸ್ ನ ಉಗ್ರ ಸಂಘಟನೆಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.

‘ಭಾನುವಾರ ಸಂಜೆ 6 ಗಂಟೆಯೊಳಗೆ ಗಾಜಾದ ಶಾಂತಿ ಒಪ್ಪಂದವನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಯಾರೂ ನೋಡಿರದ ಮಟ್ಟದ ನರಕ ಎದುರಾಗಲಿದೆ. ಎಲ್ಲಾ ಮುಗ್ಧ ಪ್ಯಾಲೆಸ್ಟೀನಿಯನ್ನರು ಗಾಜಾದ ಸುರಕ್ಷಿತ ಭಾಗಗಳಿಗೆ ತಕ್ಷಣ ತೆರಳಬೇಕು. ಹಮಾಸ್ ಯೋಧರು ಸುತ್ತುವರೆದಿದ್ದು ಮಿಲಿಟರಿ ಬಲೆಗೆ ಸಿಕ್ಕಿದ್ದಾರೆ. ನನ್ನ ಅಂತಿಮ ಆದೇಶಕ್ಕೆ ಕಾಯುತ್ತಿದ್ದಾರೆ. ಉಳಿದವರು ಎಲ್ಲಿದ್ದೀರಿ, ಯಾರೆಂದು ನಮಗೆ ಗೊತ್ತು- ನಿಮ್ಮನ್ನು ಬೇಟೆಯಾಡಲಾಗುತ್ತದೆ’ ಎಂದು ಖಾರವಾಗಿ ಎಚ್ಚರಿಕೆ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page