ಪತಿಯ ಬಂಧನದ ಭೀತಿಯಿಂದ ಮನನೊಂದು ಘಟನೆ…!

ಬ್ರಹ್ಮಾವರ : 16 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತಿ ಸುಭಾಷ್ ಮತ್ತು ಅವರ ಸಹೋದರ ಸಹಿತ ಆರು ಮಂದಿಯ ಬಂಧನಕ್ಕೆ ನ್ಯಾಯಾಲಯ ಆದೇಶ ಹೊರಡಿಸಿದೆ ಹಿನ್ನೆಲೆ ಪೊಲೀಸರು ಪದೇ ಪದೇ ಮನೆಗೆ ಆಗಮಿಸುತ್ತಿದ್ದ ಕಾರಣ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
23 ವರ್ಷದ ಸುಶ್ಮಿತಾ ಮತ್ತು ಒಂದುವರೆ ವರ್ಷದ ಮಗು ಶ್ರೇಷ್ಠ ಸೋಮವಾರ ಮಧ್ಯಾಹ್ನ ಹೇರಂಜೆ ಆರೂರಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ತನ್ನ ಸಾವಿಗೆ ತಾನೇ ಕಾರಣ ಎನ್ನುವ ರೀತಿ ಬರೆಯಲಾಗಿದೆ. 2009ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪತಿ ಹಾಗೂ ಮನೆಯವರು ತಪ್ಪಿತಸ್ಥರು ಎಂದು ಇತ್ತೀಚೆಗೆ ಹೈಕೋರ್ಟ್ ತೀರ್ಪು ನೀಡಿದ್ದು ಇದೇ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಹೆಚ್ಚಿನ ಮಾಹಿತಿಗಾಗಿ ತನಿಖೆ ಡೆಸುತ್ತಿದ್ದೇವೆ ಎಂದು ಉಡುಪಿ ಎಸ್‌ಪಿ ಹರಿ ರಾಂ.ಶಂಕರ್ ತಿಳಿಸಿದ್ದಾರೆ.