
ಬ್ರಹ್ಮಶ್ರೀ ಸತ್ಯ ಸಾರಾಮಣಿ – ಹಲೇರ ಪಂಜುರ್ಲಿ, ಚಾಮುಂಡೇಶ್ವರಿ ಗುಳಿಗ ದೇವಸ್ಥಾನ, ಹವಲ್ದಾರ್ ಬೆಟ್ಟು ಕಾರ್ಕಳ ಇದರ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 21ರಂದು ನಡೆಯಿತು.

ಈ ಸಂದರ್ಭದಲ್ಲಿ, ಗೌರವಾಧ್ಯಕ್ಷರಾದ ಸುಂದರ್ ಹೆಗ್ಡೆ, ಅಧ್ಯಕ್ಷರಾದ ಸುರೇಶ್ ಹೆಗ್ಡೆ, ಕಾರ್ಯದರ್ಶಿ ಲೋಕೇಶ್ ಬಿ. ಸಾಲಿಯನ್, ಗೌರವ ಸಲಹೆಗಾರರಾದ ಗಿರೀಶ್ ಕಾಮತ್, ಶಾಮ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ದೇವಾಡಿಗ, ಗಣೇಶ್ ದೇವಾಡಿಗ, ಭರತ್ ಸಿ. ಅಂಚನ್, ಸಮಿತಿಯ ಸದಸ್ಯರಾದ ಸುರೇಂದ್ರ, ಅಜಯ್, ಶಶಿಧರ್, ಸುನಿಲ್, ರಾಜೇಶ್, ಯಶೋಧರ, ಮತ್ತಿತರರು ಉಪಸ್ಥಿತರಿದ್ದರು.






















































