
ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಸಾಣೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ಜಯಂತ್ಯುತ್ಸವ ಹಾಗೂ ಸಂಘದ ದಶಮಾನೋತ್ಸವ ಆಚರಣೆ ಸಾಣೂರು ಗ್ರಾಮದ ಬಿಲ್ಲವ ಸಂಘ ಇದರ ದಶಮಾನೋತ್ಸವ ಕಾರ್ಯಕ್ರಮವು ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿಗಳಾದ ಸಾವಿರದ ಎಂಟು ಮಹಾ ಮಂಡಲೇಶ್ವರ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯೆಯ ಮಹತ್ವ ಹಾಗೂ ಇಂದಿನ ದಿನಗಳಲ್ಲಿ ಸಂಘಟನೆ ಅವಶ್ಯಕತೆ ಮತ್ತು ಇತರ ಸಮಾಜಗಳೊಂದಿಗೆ ಹೊಂದಿಕೊಂಡು ಹೋಗುವ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು ಮಾತನಾಡಿ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಾಜ್ಯ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಮಲ್ ಕುಮಾರ್, ಸದಾನಂದ ಶಾಂತಿ, ಜಗದೀಶ್ ಪೂಜಾರಿ ಸಾಣೂರು, ನಿಶಾಂತ್ ಪೂಜಾರಿ ಮಂಗಳೂರು, ಶಿವಾನಂದ ಬಂಗೇರ, ಸುಂದರ ಪೂಜಾರಿ, ಶ್ರೀಮತಿ ಅರುಣಿ ಭಾಗವಹಿಸಿದ್ದರು ಸಂಘದ ಅಧ್ಯಕ್ಷರಾದ ಪ್ರವೀಣ್ ಕೋಟ್ಯಾನ್ ರವರು ಅತಿಥಿಗಳನ್ನು ಸ್ವಾಗತಿಸಿದರು, ಸಂಘದ ಪ್ರೋತ್ಸಾಹಕರಾದ ಕರುಣಾಕರ್ ಎಸ್ ಕೋಟ್ಯಾನ್ ರವರು ಪ್ರಸ್ತಾವನೆಗೈದರು.
ಸಂಘದ ಕಾರ್ಯದರ್ಶಿಯಾದ ಮುರಳಿ ಸುವರ್ಣ ರವರು ವರದಿ ವಾಚಿಸಿದರು. ಪೂರ್ವ ಅಧ್ಯಕ್ಷರಾದ ಚಂದ್ರಹಾಸ ಪೂಜಾರಿ ಧನ್ಯವಾದ ಗೈದರು. ಕಾರ್ಯಕ್ರಮದ ಮೊದಲು ವೈಭವದ ಮೆರವಣಿಗೆ ಸಾಣೂರು ಪೇಟೆಯಲ್ಲಿ ಸಾಗಿತು. ಅಭಿನಯ ಕಲಾವಿದರು ಉಡುಪಿ ಇವರಿಂದ ಶಾಂಭವಿ ತುಳು ನಾಟಕ ಪ್ರದರ್ಶನ ನಡೆಯಿತು.




















































