
ಅಮೆರಿಕದಲ್ಲಿ ಎಂಡಿಎಚ್(MDH) ಸಾಂಬಾರ್ ಮಸಾಲ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ ಆಡಳಿತವು ಜಾಗತಿಕ ಪರಿಶೀಲನೆಗೂ ಮುನ್ನವೇ ನಿಷೇಧ ಹೇರಿದೆ.
ಬ್ಯಾಕ್ಟೀರಿಯಾ ಪತ್ತೆಯಾದ ಸಾಂಬಾರ್ ಮಸಾಲವನ್ನು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಿತರಿಸಲಾಗಿತ್ತು ಎಂದು ಆನ್ಲೈನ್ ಮಾರಾಟ ಮಳಿಗೆ ಹೌಸ್ ಆಫ್ ಸ್ಪೈಸಸ್ ತಿಳಿಸಿದ್ದು ಸದ್ಯ ಅಲ್ಲಿಂದ ಉತ್ಪನ್ನಗಳನ್ನು ವಾಪಸ್ ಪಡೆಯಲಾಗಿದೆ.
ಭಾರತದಲ್ಲಿ ಜನಪ್ರಿಯವಾಗಿ ಪ್ರಪಂಚಾದ್ಯಂತ ರಫ್ತಾಗುತ್ತಿರುವ ಎಂಡಿಎಚ್ ಹಾಗೂ ಇನ್ನೊಂದು ಭಾರತೀಯ ಕಂಪನಿ ಎವರೆಸ್ಟ್ನಿಂದ ತಯಾರಿಸಿದ ಮೂರು ಮಸಾಲೆ ಪದಾರ್ಥಗಳ ಮಿಶ್ರಣಗಳ ಮಾರಾಟವನ್ನು ಹಾಂಗ್ಕಾಂಗ್ ಕಳೆದ ತಿಂಗಳು ಸ್ಥಗಿತಗೊಳಿಸಿತು.
ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾವು ಆಹಾರಗಳ ಮೂಲಕ ಪಸರಿಸುವ ಸೋಂಕು ಇದಾಗಿದೆ. ಸಾಲ್ಮೋನಲ್ ಸೋಂಕು ತಗುಲಿ 12 ಗಂಟೆಯ ಬಳಿಕ ಅತಿಸಾರ, ಬೇಧಿ, ಹೊಟ್ಟೆನೋವು, ಜ್ವರ ಕಾಣಿಸಿಕೊಳ್ಳುತ್ತದೆ, ಕೆಲವೊಮ್ಮೆ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಗೂ ತಲುಪುತ್ತದೆ