
ಕಾರ್ಕಳ: ಜುಲೈ 25ರಂದು ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಬ್ಬರ ನಡುವೆ ಜಗಳ ನಡೆದು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳ ಗ್ರಾಮದ ರೋನಾಲ್ಡ್ ಅಲ್ಲೋನ್ಸ್ ನೀಡಿದ ದೂರಿನ ಪ್ರಕಾರ ಅವರು ಜುಲೈ 25ರಂದು ಬೋಳ ಬೋಪಾಡಿ 5 ಸೆಂಟ್ಸ್ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಪಂಚಾಯತ್ ಸದಸ್ಯ ಕಿರಣ್ ಅಡ್ಡಕಟ್ಟಿ ಜುಲೈ 22ರಂದು ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿಚಾರವಾಗಿ ರೊನಾಲ್ಡ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಇದಲ್ಲದೆ ಕಿರಣ್ ಕೂಡ ರೊನಾಲ್ಡ್ ಅಲ್ಲೋನ್ಸ್ ವಿರುದ್ಧ ದೂರು ನೀಡಿದ್ದು ಈ ದೂರಿನನ್ವಯ ಜುಲೈ 25ರಂದು ಕಿರಣ್ ಬೋಳ ಗ್ರಾಮದ ಪಿಲಿಯೂರಿನಲ್ಲಿರುವ ದತ್ತ ಗುರು ಜನರಲ್ ಸ್ಟೋರ್ ನಲ್ಲಿ ಟೀ ಕುಡಿದು ಅಲ್ಲಿಂದ ನಡೆದುಕೊಂಡು ಹೋಗುತ್ತಿರುವಾಗ ರೊನಾಲ್ಡ್ ಅಲ್ಲೋನ್ಸ್ ಬೈಕ್ನಲ್ಲಿ ಬಂದು ಕಿರಣ್ ನನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.