22.2 C
Udupi
Saturday, January 24, 2026
spot_img
spot_img
HomeBlogಬೆಳ್ಳಿ ಬೆಲೆಯಲ್ಲಿ ಏರಿಕೆ: ಇತಿಹಾಸದಲ್ಲೇ ಮೊದಲ ಬಾರಿಗೆ ಕಿಲೋಗೆ ₹3 ಲಕ್ಷದ ಗಡಿ ದಾಟಿಕೆ

ಬೆಳ್ಳಿ ಬೆಲೆಯಲ್ಲಿ ಏರಿಕೆ: ಇತಿಹಾಸದಲ್ಲೇ ಮೊದಲ ಬಾರಿಗೆ ಕಿಲೋಗೆ ₹3 ಲಕ್ಷದ ಗಡಿ ದಾಟಿಕೆ

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆ, ಅಮೆರಿಕದ ಬಡ್ಡಿದರ ನೀತಿ ಹಾಗೂ ಸುರಕ್ಷಿತ ಹೂಡಿಕೆಗಳತ್ತ ಹೂಡಿಕೆದಾರರ ಒಲವು ಹೆಚ್ಚಿರುವುದರಿಂದ ದೇಶದಲ್ಲಿ ಬೆಳ್ಳಿ ಬೆಲೆ ದಾಖಲೆ ಮಟ್ಟಕ್ಕೆ ಏರಿಯೆಯಾಗಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳಿ ದರವು ಕಿಲೋಗ್ರಾಂಗೆ ₹3 ಲಕ್ಷದ ಗಡಿಯನ್ನು ದಾಟಿದೆ.

ಇತ್ತೀಚಿನ ದಿನಗಳಲ್ಲಿ ಬೆಳ್ಳಿ ದರದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಪ್ರತಿ ಕಿಲೋಗ್ರಾಂಗೆ ಹಲವು ಸಾವಿರ ರೂಪಾಯಿ ಹೆಚ್ಚಳವಾಗಿದೆ. ಕಳೆದ ಡಿಸೆಂಬರ್‌ 9ರಂದು ಕಿಲೋಗೆ ₹1.75 ಲಕ್ಷ ಇದ್ದ ಬೆಳ್ಳಿ ದರ, ಜನವರಿ ಮೊದಲ ವಾರಕ್ಕೆ ₹2 ಲಕ್ಷದ ಹತ್ತಿರ ತಲುಪಿತ್ತು. ಬಳಿಕ ದಿನದಿಂದ ದಿನಕ್ಕೆ ಏರಿಕೆ ಕಂಡು, ಇದೀಗ ₹3 ಲಕ್ಷದ ಮಟ್ಟವನ್ನು ತಲುಪಿದೆ.

ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಮಟ್ಟದಲ್ಲಿ ಡಾಲರ್‌ ಬಲ, ಚಿನ್ನ–ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚಳ ಹಾಗೂ ಕೈಗಾರಿಕಾ ಬಳಕೆಯ ಹೆಚ್ಚಳವೇ ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಆಭರಣ ತಯಾರಕರು ಹಾಗೂ ವ್ಯಾಪಾರಿಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಗ್ರಾಹಕರು ಕೂಡ ಖರೀದಿಯಲ್ಲಿ ಹಿಂಜರಿಕೆ ತೋರಿಸುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page