
ಮಂಗಳೂರು: ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತರನ್ನ ಮುಟ್ಟಿದ್ರೆ ಪೊಲೀಸರ ಕಾಲರ್ ಹಿಡಿಯಲು ನಾನು ರೆಡಿ ಎಂದು ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಎಸ್‍ಪಿಗೆ ಬುದ್ಧಿ ಇಲ್ಲ.
ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪೊಲೀಸರಿಗೆ ಹರೀಶ್ ಪೂಂಜಾ ಅವಾಜ್ ಹಾಕಿದ್ದಾರೆ.ನನ್ನ ಕಾರ್ಯಕರ್ತರನ್ನ, ಬಿಜೆಪಿ ಕಾರ್ಯಕರ್ತರನ್ನು ಅರೆಸ್ಟ್ ಮಾಡಿ ವಿನಾಕಾರಣ ಒಳಗೆ ಕೂರಿಸಿದಾಗ ನಾನು ಅಧಿಕಾರಯುತವಾಗಿಯೇ ಮಾತನಾಡೋದು. ಒಬ್ಬ ನಿರಪರಾಧಿಗೆ ಅನ್ಯಾಯವಾಗದಂತೆ ನೋಡಿಕೊಳ್ಳೋದು ನನ್ನ ಜವಾಬ್ದಾರಿ. ಮೊನ್ನೆನೂ ಅಷ್ಟೇ ಮಾತನಾಡಿದ್ದು. ಜನತಾ ಪಾರ್ಟಿಯ ಕಾರ್ಯಕರ್ತರ ಪರವಾಗಿ, ಬೆಳ್ತಂಗಡಿಯ ಮತದಾರರಿಗೆ ಅನ್ಯಾಯ ಆಗುತ್ತೆ ಅಂತಾದ್ರೆ ನಾನು ಜೈಲಲ್ಲಿ ಕೂರಲೂ ರೆಡಿ ಇದ್ದೇನೆ ಎಂದು ಆಕ್ರೋಶದ ಮಾತುಗಳನ್ನಾಡಿದರು.
ಜಿಲ್ಲಾ ವರಿಷ್ಠಾಧಿಕಾರಿಯವರ ತಲೆಯಲ್ಲಿ ಕೂದಲಿಲ್ಲ, ಎಸ್ ಪಿಯ ತಲೆಯಲ್ಲಿ ಕೂದಲಿಲ್ಲ. ನೋಡಿದ್ದೀರ ನೀವೂ, ನಾನು ಬರೇ ಕೂದಲಿಲ್ಲ ಅಂದುಕೊಂಡಿದ್ದೆ, ಒಳಗೆ ಮೆದುಳೂ ಇಲ್ಲ ಅಂತ ಈಗ ಗೊತ್ತಾಯ್ತು. ಇವರು ಯಾವ ರೀತಿ ಷಡ್ಯಂತ್ರ ಮಾಡಿದ್ದಾರೆ ಅಂದ್ರೆ ಶಶಿಯನ್ನು ಅರೆಸ್ಟ್ ಮಾಡಿದಾಕ್ಷಣ ಇನ್ಸ್‍ಪೆಕ್ಟರ್‍ಗೆ ಫೋನ್ ಮಾಡಿದ್ರೆ ಫೋನ್ ರಿಸೀವ್ ಮಾಡಲ್ಲ. ಎಷ್ಟು ಸಲ ಕಾಲ್ ಮಾಡಿದರೂ ರಾತ್ರಿ ನನ್ನ ಫೋನ್ ಕರೆಗೆ ಉತ್ತರಿಸಲಿಲ್ಲ. ಎಸ್‍ಪಿ ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.