ಗಣೇಶ್ ಜಾಲ್ಸೂರು,ಶಿಕ್ಷಕರು ಕಾರ್ಕಳ

ಶುಭೋದಯ ಶುಭಾಶಯ
ಬಾನಲ್ಲಿ ಕನ್ನಡ ಸೂರ್ಯೋದಯ
ಇಂದು ನಮಗೆಲ್ಲರಿಗೂ ಹರುಷ
ಕನ್ನಡ ರಾಜ್ಯೋತ್ಸವದ ವರುಷ
ನಮ್ಮ ತಾಯಿ ಕರುನಾಡ ಸರಸ್ವತಿ
ಬೆಳಗೋಣ ಬನ್ನಿ ನಾವು ಕನ್ನದಾರತಿ
ನಾಡುನುಡಿ ಅಭಿಮಾನದ ಗೂಡಿದು
ಕವಿ ಋಷಿ ಸಂತರ ಚೆಲುವ ನಾಡಿದು
ಸರ್ವಧರ್ಮ ಜನಾಂಗದ ತೋಟ
ಕಣ್ಮನಕೆ ತೃಪ್ತ ಹಚ್ಚಹಸಿರ ನೋಟ
ಎಲ್ಲೆಡೆ ಕೇಳುವ ಸಂಗೀತ ನಾದಸ್ವರ
ಚಿಲಿಪಿಲಿ ಹಕ್ಕಿಗಳ ಉಲಿವ ಇಂಚರ
ನೆನಪಾಗುತಿದೆ ನಾಡಿನ ಗತವೈಭವ
ಆಳಿದ ಶ್ರೇಷ್ಠ ರಾಜರುಗಳ ಸಂಭ್ರಮ
ಶಾಶ್ವತ ಶಾಸನಗಳು ಶಿಲ್ಪಕಲೆಗಳು
ಸತ್ಯ ಚರಿತೆಯ ಪ್ರವಾಸ ತಾಣಗಳು
ಕೋಟಿ ಕನ್ನಡಿಗರ ಅರ್ಪಣಾ ಭುವಿ
ಕನ್ನಡ ಬಾಂಧವರ ಬೆಳಗುವ ರವಿ
ಹರಿವ ನದ ನದಿಗಳ ಪುಣ್ಯ ಜಲ
ಆನಂದಮಯ ನಿತ್ಯ ಈ ಕನ್ನಡ ನೆಲ
✍️ ಗಣೇಶ್ ಜಾಲ್ಸೂರು
ಶಿಕ್ಷಕರು ಕಾರ್ಕಳ






















































