
ಬೆಂಗಳೂರು: ಆಹಾರ ಮತ್ತು ಆರೋಗ್ಯ ಇಲಾಖೆಯು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮೇಲೆ ಒಂದಾದ ಮೇಲೆ ಒಂದರಂತೆ ಪರೀಕ್ಷೆ ನಡೆಸುತ್ತಿದ್ದು ಇದೀಗ ಈ ಪಟ್ಟಿಗೆ ಬೆಲ್ಲ ಕೂಡ ಸೇರ್ಪಡೆಯಾಗಿದೆ. ಬೆಲ್ಲ ತಯಾರಿಕೆಯಲ್ಲಿ ಯಥೇಚ್ಛವಾಗಿ ಕಲರ್ ಬಳಕೆ ಮಾಡಿ ಕೆಮಿಕಲ್ ಅಂಶ ಬೆರೆತುಕೊಂಡಿದ್ದು ಬೆಲ್ಲದ ಗುಣಮಟ್ಟ ಕಳಪೆ ಎಂದು ಆಹಾರ ಇಲಾಖೆಯು ವರದಿ ಮಾಡಿದೆ.
ಆಹಾರ ಇಲಾಖೆಯು ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬೆಲ್ಲದ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಿದ್ದು ಈ ವೇಳೆ ಬೆಲ್ಲ ಅಸುರಕ್ಷಿತ ಎಂದು ವರದಿಯಾಗಿದೆ.






















































