
ಬೆಂಗಳೂರು: ಕೊನೆಗೂ ಸಾಹಸಸಿಂಹ ಡಾ| ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಅಂತ್ಯ ಸಿಗುವ ಕಾಲ ಸಮೀಪವಾಗಿದ್ದು ನಟ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬೆಂಗಳೂರಿನ ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ.
ವಿಷ್ಣುವರ್ಧನ್ ಜನ್ಮದಿನವಾದ ಸೆಪ್ಟೆಂಬರ್ 18ರಂದು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ನೆರವೇರಲಿದ್ದು ಈ ಜಾಗದಲ್ಲಿ ಗ್ರಂಥಾಲಯ, ವಿಷ್ಣು ಅವರ 25 ಅಡಿಯ ಪುತ್ತಳಿ ಹಾಗೂ ಒಂದು ಗ್ಯಾಲರಿ ನಿರ್ಮಾಣವಾಗಲಿದೆ. ಮಾತನಾಡಿದ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಸೆಪ್ಟೆಂಬರ್ 2ರಂದು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾದ ಸುದೀಪ್ ಅವರ ಹುಟ್ಟು ಹಬ್ಬದ ದಿನ ಸ್ಮಾರಕದ ನೀಲಿ ನಕ್ಷೆಯನ್ನು ಸ್ವತಃ ಸುದೀಪ ಅವರು ಅನಾವರಣ ಮಾಡಲಿದ್ದಾರೆ. ಸೆ. 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ತಿಳಿಸಿದ್ದಾರೆ.



















