
ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ) ಮತ್ತು ಎಸ್ ಜಿ ಎಸ್ ಇಂಟರ್ನ್ಯಾಷನಲ್ ಯೋಗ ಪೌಂಡೇಶನ್ ಕಾಲೇಜ್ ಮತ್ತು ರಿಸರ್ಚ್ ಸೆಂಟರ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರು ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಅಂತರ್ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಉಡುಪಿಯ ಯೋಗ ಪ್ರತಿಭೆ ಶಿವಾನಿ ಶೆಟ್ಟಿ ಪ್ರಥಮ ಸ್ಥಾನ ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಉಡುಪಿಯ ವಿದ್ಯೋದಯ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಈಕೆ ಶಿವಾನಂದ ಶೆಟ್ಟಿ ಹಾಗೂ ಸುಜಾತ ಶೆಟ್ಟಿ ಇವರ ಸುಪುತ್ರಿಯಾಗಿದ್ದು , ಯೋಗ ಗುರು ನರೇಂದ್ರ ಕಾಮತ್ ಕಾರ್ಕಳ ಇವರ ಬಳಿ ಯೋಗ ತರಬೇತಿ ಪಡೆಯುತ್ತಿದ್ದಾಳೆ








