
ಮಧುಗಿರಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಹಾರ ಚುನಾವಣಾ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಬಿಹಾರದಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ನಡೆದಿರುವುದು ಚುನಾವಣೆಯೇ ಅಲ್ಲ, ಅಲ್ಲಿ ಮತ ಖರೀದಿ ಮಾಡಲಾಗಿದೆ. ಚುನಾವಣೆಗೆ ಮುಂಚೆ ತಲಾ ₹10000 ನೀಡಿ ಓಟು ಪಡೆದಿದ್ದಾರೆ. ಅಕ್ರಮವಾಗಿದೆ ಎಂಬ ನೆಪ ಹೇಳಿ ಲಕ್ಷಾಂತರ ಮತಾದರರನ್ನು ಹೊರ ಹಾಕಲಾಯಿತು. ಕೊನೆಗೆ ಎಷ್ಟೋ ಲಕ್ಷ ಜನರನ್ನು ಸೇರಿಸಲಾಯಿತು. ಈ ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಸಿಬಿಐ, ಇ.ಡಿ., ಐ.ಟಿ. ಹೆಸರು ಹೇಳಿ ಹೆದರಿಸಲಾಗುತ್ತಿದೆ ಎಂದು ಹೇಳಿದರು.






