
ಕಾರವಾರ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಸುದ್ದಿಗಾರರ ಜೊತೆ ಮಾತನಾಡಿ ದೇಶದಲ್ಲಿ 7,63,433 ದೇವಸ್ಥಾನಗಳನ್ನು ಕಾಂಗ್ರೆಸ್ ಕಾಲದಲ್ಲಿ ಕಟ್ಟಿಸಲಾಗಿದೆ. ಬಿಜೆಪಿಯವರು ರಾಮಮಂದಿರ ಬಿಟ್ಟು ಬೇರೇನು ಕಟ್ಟಿಲ್ಲ. ಅದೂ ಕೂಡ ಕೇಂದ್ರದ ಹಣದಿಂದ ಕಟ್ಟಿದ್ದು ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 11 ವರ್ಷಗಳಲ್ಲಿ ಸುಮಾರು 45 ಲಕ್ಷ ಹಿಂದು ಯುವಕರು ಈ ದೇಶದ ಪೌರತ್ವ ಬಿಟ್ಟು, ವೀಸಾ ಮರಳಿಸಿ ವಿದೇಶಗಳಲ್ಲಿ ನೆಲೆಸಿದ್ದಾರೆ ಇದಕ್ಕೆ ಬಿಜೆಪಿಗರು ಉತ್ತರ ನೀಡಲಿ ಎಂದು ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರಿಗೆ ಹಿಂದುಸ್ತಾನ, ಮುಸಲ್ಮಾನ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ದೇಶದ ಅಸ್ಪೃಶ್ಯತೆ, ಶೋಷಿತ ವರ್ಗಗಳು ತುಳಿತಕ್ಕೊಳಗಾದ ಬಗ್ಗೆ ಅವರು ಮಾತನಾಡುವುದಿಲ್ಲ. ಆರ್ ಎಸ್ ಎಸ್ ಇರದಿದ್ದರೆ ಭಾರತ ಮುಸ್ಲಿಂಕರಣ ಆಗುತ್ತಿತ್ತು ಎನ್ನುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೇಶಕ್ಕೆ ಬಿಜೆಪಿ ಕೊಡುಗೆ ಏನು ಎಂಬುದನ್ನು ಅವರೇ ವಿವರಿಸಬೇಕು. ಬಿಜೆಪಿಯವರು ಅಧಿಕಾರಕ್ಕೆ ಬಂದು 11 ವರ್ಷಗಳಾದರು ಹಿಂದುಗಳಿಗೆ ಏನು ಮಾಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.