
ಶಿವಮೊಗ್ಗ: ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್ ಭಂಡಾರಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಬಿಜೆಪಿಯವರು ಯಾವತ್ತೂ ರಾಷ್ಟ್ರಗೀತೆ ಸಂವಿಧಾನವನ್ನು ಒಪ್ಪಿಯೇ ಇಲ್ಲ’ ಎಂದು ಆರೋಪಿಸಿದ್ದಾರೆ.
ಅವರಿಗೆ ಜನಗಣಮನ, ವಂದೇ ಮಾತರಂ ಬಗ್ಗೆಯೂ ಅರಿವಿಲ್ಲ ಮತ್ತು ಸ್ವಾತಂತ್ರ್ಯಕ್ಕಾಗಿ ಒಂದೇ ಒಂದು ಹೋರಾಟವನ್ನೂ ಮಾಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ನ ಲಕ್ಷಾಂತರ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದು ಆದರೆ ಬಿಜೆಪಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬರೂ ಪಾಲ್ಗೊಂಡಿಲ್ಲ. ಅವರು ಹಿಂದಿನಿಂದಲೂ ಸಂವಿಧಾನವನ್ನು ವಿರೋಧಿಸಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







