
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕಲ್ಲಡ್ಕ ಪ್ರಭಾಕರ ಮೇಲಿನ ಪ್ರಕರಣ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ಬಿಜೆಪಿಗೆ ಪಾಕ್- ಮುಸ್ಲಿಂ ಬಿಟ್ಟರೆ ಬೇರೆ ವಿಷಯವೇ ಇಲ್ಲ. ಆ ಪಕ್ಷಕ್ಕೆ ಇವೆರಡೇ ಬುನಾದಿಯಾಗಿದ್ದು, ಇದರ ಮೇಲೆಯೇ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.
ಯಾರೇ ಬಂದರೂ ಸಂವಿಧಾನ ಮೇಲೆ ಅಧಿಕಾರ ನಡೆಸಬೇಕು. 24 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬಿಹಾರ ಚುನಾವಣೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್- ಬಿಜೆಪಿಯ ಯುವಕರು ಈ ದೇಶ ನಮಗಾಗಿ ಎಂದು ತಿಳಿಯಬೇಕು. ಭಿನ್ನಾಭಿಪ್ರಾಯ ಇರಬೇಕು. ಆದರೆ, ವೈಯಕ್ತಿಕ ಭಿನ್ನಾಭಿಪ್ರಾಯ ಇರಬಾರದು. ನಾವು ಸಹ ಹಿಂದುಗಳು. ಕಾಂಗ್ರೆಸ್ ಇರುವಾಗಿನಿಂದಲೂ ಹಿಂದೂಗಳು ಇದ್ದಾರೆ. ಆದರೆ, ಬಿಜೆಪಿ ಬರೀ ಧರ್ಮದ ಬಗ್ಗೆ ಬಿಟ್ಟರೆ ಬೇರೆ ಬಂಡವಾಳವನ್ನು ಹೊಂದಿಲ್ಲ. ಬಿಜೆಪಿ ಮುಖಂಡರು ಬಡತನ ರೇಖೆಗಿಂತ ಕೆಳಗಿರುವ ಎಷ್ಟು ಹಿಂದೂಗಳನ್ನು ಮೇಲೆ ತಂದಿದ್ದಾರೆ?. ಚುನಾವಣೆ ಬಂದಾಗ ಮಾತ್ರ ಇವರಿಗೆ ಹಿಂದುಗಳು ಬೇಕು. ಬರೀ ಬಿಜೆಪಿ ನಾಯಕರ ಮಕ್ಕಳು ಮಾತ್ರ ಉದ್ಧಾರ ಆಗಿದ್ದಾರೆಯೇ ಹೊರತು ಹಿಂದೂಗಳು ಉದ್ಧಾರವಾಗಿದ್ದಾರೆಯೇ ಎಂದು ಲಾಡ್ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.